More

    ಎರಡನೇ ಹಂತದ ಗ್ರಾಪಂ ಚುನಾವಣೆ ಪ್ರಕ್ರಿಯೆ ಆರಂಭ

    ದೇವರಹಿಪ್ಪರಗಿ: ಗ್ರಾಮ ಪಂಚಾಯಿತಿಗಳ ಎರಡನೇ ಹಂತದ ಚುನಾವಣಾ ಪ್ರಕ್ರಿಯೆಗಳು ವೇಳಾಪಟ್ಟಿಯಂತೆ ತಾಲೂಕಿನಾದ್ಯಂತ ಶುಕ್ರವಾರ ಆರಂಭಗೊಂಡಿವೆ ಎಂದು ತಹಸೀಲ್ದಾರ್ ಬಿ.ಎಸ್. ಕಡಕಭಾವಿ ಹೇಳಿದರು.

    ಪಟ್ಟಣದ ತಹಸೀಲ್ದಾರ್ ಕಚೇರಿಯಲ್ಲಿ ಗುರುವಾರ ಸಂಜೆ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಡಿ. 11 ರಂದು ಜಿಲ್ಲಾಧಿಕಾರಿಗಳು ಹೊರಡಿಸಿದ ಚುನಾವಣೆ ಅಧಿಸೂಚನೆ ಪ್ರಕಾರ ನಾಮಪತ್ರ ಸಲ್ಲಿಕೆ ಆರಂಭಗೊಳ್ಳುತ್ತಿದೆ. ಡಿ.16ರಂದು ನಾಮಪತ್ರ ಸಲ್ಲಿಸಲು ಕೊನೆಯ ದಿನ. ಡಿ.17ರಂದು ನಾಮಪತ್ರಗಳ ಪರಿಶೀಲನೆ, ಡಿ. 19 ರಂದು ನಾಮಪತ್ರ ಹಿಂಪಡೆಯಲು ಅವಕಾಶ ನೀಡಲಾಗಿದೆ. ಡಿ.27 ರಂದು ಬೆಳಗ್ಗೆ 7 ಗಂಟೆಯಿಂದ ಸಂಜೆ 5 ರ ವರೆಗೆ ಮತದಾನ ನಡೆಯಲಿದೆ. ಡಿ. 30 ರಂದು ಬೆಳಗ್ಗೆ 8 ರಿಂದ ಮತಗಳ ಎಣಿಕೆ ಕಾರ್ಯ ಎ.ಬಿ. ಸಾಲಕ್ಕಿ ಪ್ರೌಢಶಾಲೆಯಲ್ಲಿ ನಡೆಯಲಿದೆ ಎಂದು ತಿಳಿಸಿದರು.

    ತಾಲೂಕಿನ 14 ಗ್ರಾಪಂಗಳಲ್ಲಿ ಒಟ್ಟು 130 ಮತಗಟ್ಟೆಗಳಿದ್ದು, ಇವುಗಳಲ್ಲಿ 19 ಸೂಕ್ಷ್ಮ, 05 ಅತೀ ಸೂಕ್ಷ್ಮ, 106 ಸಾಮಾನ್ಯ ಮತಗಟ್ಟೆಗಳಿವೆ. ಚುನಾವಣೆಗಾಗಿ 143 ಪಿಆರ್‌ಓ, 462 ಪಿ.ಓ ಸೇರಿ ಒಟ್ಟು 605 ಸಿಬ್ಬಂದಿ, ಕಾಯ್ದಿರಿಸಿದ ಇಬ್ಬರು ಚುನಾವಣಾಧಿಕಾರಿ, ಸಹಾಯಕ ಚುನಾವಣಾಧಿಕಾರಿ ಸೇರಿ ಒಟ್ಟು 15 ಜನ ಚುನಾವಣಾಧಿಕಾರಿಗಳು, 15 ಜನ ಸಹಾಯಕ ಚುನಾವಣಾಧಿಕಾರಿಗಳು, 07 ಸೆಕ್ಟರ್ ಅಧಿಕಾರಿಗಳು, 14 ಮಾಸ್ಟರ್ ಟ್ರೇನರ್‌ಗಳು ಕಾರ್ಯನಿರ್ವಹಿಸಲಿದ್ದಾರೆ.

    ಚುನಾವಣೆಗಾಗಿ 20 ಬಸ್, 05 ಮಿನಿ ಬಸ್, 02 ಕ್ರೂಸರ್ ಸೇರಿ ಒಟ್ಟು 27 ವಾಹನಗಳ ಬೇಡಿಕೆಯಿದೆ ಎಂದು ಮಾಹಿತಿ ನೀಡಿದರು. ಶಿರಸ್ತೇದಾರ ಗುರು ನಾಯಿಕ ಹಾಗೂ ಸಿಬ್ಬಂದಿ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts