More

    ದಲಿತ ಸಮುದಾಯಕ್ಕೆ ಅನ್ಯಾಯವಾಗದಂತೆ ಕ್ರಮ

    ದೇವರಹಿಪ್ಪರಗಿ: ದಲಿತ ಸಮುದಾಯಕ್ಕೆ ಯಾವುದೇ ಅನ್ಯಾಯವಾಗದಂತೆ ಪೊಲೀಸ್ ಇಲಾಖೆ ಸಾಕಷ್ಟು ಕಟ್ಟುನಿಟ್ಟಿನ ಕ್ರಮ ಕೈಗೊಂಡಿದೆ ಎಂದು ಸಿಂದಗಿ ಸಿಪಿಐ ಎಚ್.ಎಂ. ಪಟೇಲ ಹೇಳಿದರು.

    ಪಟ್ಟಣದ ಪೊಲೀಸ್ ಠಾಣೆಯಲ್ಲಿ ಶುಕ್ರವಾರ ನಡೆದ ದಲಿತ ಸಮುದಾಯದ ಕುಂದುಕೊರತೆ ಸಭೆಯಲ್ಲಿ ಅವರು ಮಾತನಾಡಿದರು.

    ಹಿಂದೆ ಗ್ರಾಮೀಣ ಪ್ರದೇಶಗಳ ಚಹಾ ಅಂಗಡಿ, ಹೋಟೆಲ್‌ಗಳಲಿ ತಾರತಮ್ಯತೆ ಅನುಸರಿಸಲಾಗುತ್ತಿತ್ತು. ಈ ಕುರಿತು ಇಲಾಖೆ ಕೂಡಲೇ ಕ್ರಮ ಕೈಗೊಂಡು ಸಮುದಾಯಕ್ಕೆ ನ್ಯಾಯ ದೊರಕಿಸಿದೆ ಎಂದರು.

    ಇಂಡಿ ಡಿವೈಎಸ್ಪಿ ಶ್ರೀಧರ ದೊಡ್ಡಿ ಅಧ್ಯಕ್ಷತೆ ವಹಿಸಿ ಮಾತನಾಡಿ, ದಲಿತ ಸಮುದಾಯ ಸ್ವಾಭಿಮಾನದಿಂದ ಬದುಕಲು ಇಲಾಖೆಯಿಂದ ಎಲ್ಲ ರೀತಿಯಿಂದಲೂ ಸಹಕಾರ ನೀಡಲಾಗುತ್ತಿದೆ. ಇದರ ಸದುಪಯೋಗ ಪಡೆದು ಶಾಂತಿ, ಸಹನೆಯಿಂದ ಸಹಬಾಳ್ವೆ ನಡೆಸುವಂತೆ ಸಲಹೆ ನೀಡಿದರು.

    ಸಮುದಾಯದ ಪ್ರಮುಖರಾದ ಸಾಯಿಕುಮಾರ ಬಿಸನಾಳ(ಕಡ್ಲೇವಾಡ ಪಿಸಿಎಚ್), ಕಾಶೀನಾಥ ತಳಕೇರಿ, ಪ್ರಕಾಶ ಗುಡಿಮನಿ, ರಾವುತ ತಳಕೇರಿ, ರಾಜಕುಮಾರ ಸಿಂದಗೇರಿ(ಪಡಗಾನೂರ) ತಮ್ಮ ಅನಿಸಿಕೆ, ಅಹವಾಲು ವ್ಯಕ್ತಪಡಿಸಿ ಪ್ರತಿ ತಿಂಗಳ ಕೊನೇಯಲ್ಲಿ ಜಿಲ್ಲೆಯ ಎಲ್ಲ ಠಾಣಾಗಳಲ್ಲಿ ಇಂಥ ಕುಂದು ಕೊರತೆಯ ಸಭೆ ಕಡ್ಡಾಯವಾಗಿ ಜರುಗಿಸಬೇಕು ಎಂದರು.

    ಸಭೆಯಲ್ಲಿ ಪಿಎಸ್‌ಐ ರವಿ ಯಡವಣ್ಣವರ, ಪಟ್ಟಣ ಪಂಚಾಯಿತಿ ಸದಸ್ಯ ಭಾಸ್ಕರ್ ಗುಡಿಮನಿ, ರಾಘವೇಂದ್ರ ಗುಡಿಮನಿ, ರಮೇಶ ಮ್ಯಾಕೇರಿ, ಸಿದ್ಧಾರ್ಥ ಮುಳಸಾವಳಗಿ, ರಾವುತ ಮಾಸ್ತರ ತಳಕೇರಿ, ಬಸವರಾಜ ಇಂಗಳಗಿ, ರಮೇಶ ಬನಸೋಡೆ, ಶರಣು ಜಮಖಂಡಿ, ಯಮನಪ್ಪ ಭೂತಾಳಿ, ಅಶೋಕ ಖಾದ್ರಿ, ಶರಣಕುಮಾರ ನಾಟೀಕಾರ, ದೇವೇಂದ್ರ ಬನಸೋಡೆ, ರಾಜಕುಮಾರ ಚಿಕ್ಕರೂಗಿ, ಪರಶುರಾಮ ಬಡಿಗೇರ, ಚಂದ್ರಕಾಂತ ಬನಸೋಡೆ ಮತ್ತಿತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts