More

    ಮಹಿಳೆಯರು ಭಿನ್ನತೆಗಳನ್ನು ಸವಾಲಾಗಿ ಸ್ವೀಕರಿಸಬೇಕು

    ಹಾವೇರಿ: ಪುರುಷ ಮತ್ತು ಮಹಿಳೆಯರು ಒಂದೇ ರೀತಿಯ ಜೀವಿಯಾದರೂ ಇಬ್ಬರ ಆಲೋಚನೆಗಳು ಭಿನ್ನವಾಗಿರುತ್ತವೆ. ಆಚಾರ, ವಿಚಾರಗಳು, ಗಂಡು ಹೆಣ್ಣಿಗೆ ಒಂದೇ ರೀತಿ ಇರುತ್ತದೆ. ಇವುಗಳನ್ನು ಮಹಿಳೆಯರು ಸವಾಲಾಗಿ ಸ್ವೀಕರಿಸಿ ಸಮಾಜದ ಮುಖ್ಯ ವಾಹಿನಿಗೆ ಬರಬೇಕು ಎಂದು ಹಾವೇರಿ ತಾಲೂಕು ದೇವಾಂಗ ಸಮಾಜದ ಮಹಿಳಾ ಘಟಕದ ಅಧ್ಯಕ್ಷೆ ಮಂಜುಳಾ ಕುದರಿ ಹೇಳಿದರು.
    ಇಲ್ಲಿಯ ಶಿವಲಿಂಗ ನಗರದ ಬನಶಂಕರಿ ದೇವಿ ದೇವಸ್ಥಾನದಲ್ಲಿ ಶನಿವಾರ ತಾಲೂಕು ದೇವಾಂಗ ಸಮಾಜದ ವತಿಯಿಂದ ಆಯೋಜಿಸಿದ್ದ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
    ಸರ್ಕಾರದ ಆಡಳಿತದಲ್ಲಿ ಮಹಿಳೆಯರ ಸಬಲೀಕರಣಕ್ಕಾಗಿ ಹಲವು ಜನಪರ ಯೋಜನೆಗಳಿವೆ. ಇದನ್ನು ಸಮರ್ಪಕವಾಗಿ ಬಳಸಿಕೊಳ್ಳಬೇಕು. ಸ್ತ್ರೀಯರು ದುರ್ಬಲರೆಂಬ ಕ್ಷುಲ್ಲಕ ವದಂತಿಗಳಿಂದ ಹೊರಬಂದು ತಮ್ಮ ಕಾರ್ಯಕ್ಷೇತ್ರವನ್ನು ವಿಸ್ತರಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು
    ಸಮಾರಂಭದಲ್ಲಿ ಸಂಘದ ಹಿರಿಯ ಮಹಿಳಾ ಸದಸ್ಯರನ್ನು ಸನ್ಮಾನಿಸಲಾಯಿತು. ಉಪಾಧ್ಯಕ್ಷರಾದ ಲಕ್ಷ್ಮೀ ಕುದರಿ, ವಿಜಯಾ ಬೆಟಗೇರಿ, ಕಾರ್ಯದರ್ಶಿ ವೀಣಾ ಕುದರಿ, ಸರಸ್ವತಿ ಕುದರಿ, ರುಕ್ಮಿಣಿ ಕುದರಿ, ಸರಸ್ವತಿ ಕೊಪ್ಪಳ, ವಸುದಾ ಕುದರಿ, ಜಯಲಕ್ಷ್ಮೀ ಕುದರಿ, ಇತರರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts