More

    ದೇವಾಂಗ ಸಮಾಜದ ಜಪಯಜ್ಞ ಕಾರ್ಯಕ್ರಮ

    ವಿಜಯವಾಣಿ ಸುದ್ದಿಜಾಲ ಗದಗ
    ದೇವಾಂಗ ಸಮಾಜದ ಕುಲ ದೇವತೆ ತಾಯಿ ಬನಶಂಕರಿದೇವಿಗೆ ದೇವಾಂಗ ಸಮಾಜ ಕೋಟಿ ಜಪ ಯ ಹಮ್ಮಿಕೊಂಡಿದ್ದು, ಇದೊಂದು ಲೋಕ ಕಲ್ಯಾಣ ಕಾರ್ಯ. ಸಮಾಜದ ಉನ್ನತಿಗಾಗಿ ಮತ್ತು ಮನಕುಲದ ಉದ್ಧಾರಕ್ಕಾಗಿ ಇಂತಹ ಜಪಯಜ್ಞಗಳು ಆಗಾಗ ನಡೆಯುತ್ತಿರಬೇಕು ಎಂದು ಶಿವಾನಂದ ಸರಸ್ವತಿ ಶ್ರೀಗಳು ಹೇಳಿದರು.
    ಬೆಟಗೇರಿ ಬನಶಂಕರಿ ದೇವಸ್ಥಾನ ಆವರಣದಲ್ಲಿ ಶನಿವಾರ ಸಂಜೆ ಏರ್ಪಡಿಸಿದ್ದ 3 ಕೊಟಿ ಜಪಯಜ್ಞ ಕಾರ್ಯಕ್ರಮ ಸಾನ್ನಿಧ್ಯ ವಹಿಸಿ ಮಾತನಾಡಿದ ಅವರು, ಕುಳಿತರು, ನಿಂತರು ಜಪವನ್ನು ಮಾಡಬಹುದು. ಇದರಿಂದ ನಮ್ಮ ಪಾಪಗಳು ನಾಶವಾಗುತ್ತವೆ. ಬೆಟಗೇರಿಯಲ್ಲಿ ಪ್ರತಿ ಮೂರು ವರ್ಷಕ್ಕೊಮ್ಮೆ ಕೋಟಿ ಜಪ ಯ ಮಾಡುತ್ತಿರುವುದು ಅತ್ಯಂತ ಉನ್ನತ ಸಮಾಜ ಸೇವೆಯಾಗಿದೆ. ಇಂತಹ ದೈವಿ ಕಾರ್ಯಗಳು ಇನ್ನು ಹೆಚ್ಚು ಜರುಗಬೇಕು. ದೇವಾಂಗ ಸಮಾಜ ಉನ್ನತಿಯನ್ನು ಹೊಂದಲಿ ಎಂದರು.
    ರಾಜ್ಯ ದೇವಾಂಗ ಸಮಿತಿ ಅಧ್ಯಕ್ಷ ರವೀಂದ್ರ ಕಲಬುರಗಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಈಗಾಗಲೇ 3 ವರ್ಷಗಳ ಹಿಂದೆ ಪ್ರಥಮ ಕೋಟಿ ಜಪ ಯವನ್ನು ದೇವಾಂಗ ಸಮಾಜ ನಡೆಸಿತ್ತು. ಸಮಾಜದ ಗುರು ಹಿರಿಯರ ಸಹಾಯ ಸಹಕಾರದೊಂದಿಗೆ ಹಳೇ ಬನಶಂಕರಿ ದೇವಿಯ 100 ನೇ ಪ್ರತಿಷ್ಟಾಪನಾ ವಾಷಿರ್ಕೋತ್ಸವದಂಗವಾಗಿ ಜಪಕೋಟಿ ಜರುಗಿಸಲಾಯಿತು. ವರ್ಷ ಭಕ್ತರ, ಸಮಾಜ ಬಾಂಧವರ ಕೋರಿಕೆಯಂತೆ ಬದಾಮಿ ಬನಶಂಕರಿ ದೇವಿಯ ಸನ್ನಿದಾನದಲ್ಲಿ ಎರಡನೇ ಕೋಟಿ ಜಪ ಯವನ್ನು ನರವೇರಿಸಲಾಯಿತು. ಈಗ ಕೋಟಿ ಜಪಯವನ್ನು ನವಗ್ರಹ ಪೂರ್ವಕವಾಗಿ ಸರ್ವ ಮಂಗಳ ಹೋಮ ಮಾಡುವುದರ ಮೂಲಕ ನೆರವೇರಿಸಲಾಗಿತ್ತಿದೆ ಎಂದು ತಿಳಿಸಿದರು.
    ಮುದನೂರು ಮಹಾಸಂಸ್ಥಾನ ಮಠದ ಈಶ್ವರಾನಂದ ಶ್ರೀಗಳು ಮಾತನಾಡಿ, ದೇವಿಯ ಜಪ ಮಾಡುವುದರಿಂದ ಪುಣ್ಯ ಪ್ರಾಪ್ತಿಯಾಗುತ್ತದೆ. ಏಕಾಗ್ರತೆ ಮೂಡುತ್ತದೆ. ಕಷ್ಟಗಳು ನಿವಾರಣೆಯಾಗುತ್ತವೆ. ದೈಹಿಕವಾಗಿ, ಮಾನಸಿಕವಾಗಿ, ಆಥಿರ್ಕವಾಗಿ, ಸಾಮಾಜಿಕವಾಗಿ ಎಲ್ಲ ಮೂಲಗಳಿಂದಲೂ ನಾವು ಸುಧಾರಣೆಯಾಗುತ್ತೇವೆ ಎಂದರು.
    ಕಾರ್ಯಮದಲ್ಲಿ ದೇವಿ ಮಹಾತ್ಮೆಯ ಸಂಪ್ತ ಪುಸ್ತಕವನ್ನು ಬಿಡುಗಡೆ ಮಾಡಲಾಯಿತು.
    ರಾವೇಂದ್ರ ಕೊಪ್ಪಳ, ರಾಮಚಂದ್ರ ಹುಬ್ಬಳ್ಳಿ, ರತ್ನಾಬಾಯಿ ಘಾಗಿರ್, ದಶರಥ ಕೊಳ್ಳಿ, ಶ್ರೀನಿವಾಸ ಹುಬ್ಬಳ್ಳಿ, ಸುಧಾ ಕಂಗೂರಿ, ಭಾಗ್ಯಾ ಆರಿ ಇತರರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts