More

    ಸಮ ಸಮಾಜ, ಸಂಸತ್ ರಚನೆ ಬಸವೇಶ್ವರರ ಕಲ್ಪನೆ

    ದೇವದುರ್ಗ: ಬಸವಾದಿ ಶರಣರು 12ನೇ ಶತಮಾನದಲ್ಲೇ ಸಮ ಸಮಾಜದ ಕನಸುಕಂಡು, ನುಡಿದಂತೆ ನಡೆದಿದ್ದಾರೆ. ಇಂದಿನ ಸಂಸತ್ ವ್ಯವಸ್ಥೆ ಅಂದೇ ಅವರು ಅನುಭವ ಮಂಟಪ ರೂಪದಲ್ಲಿ ಜಾರಿಗೊಳಿಸಿದ್ದರು ಎಂದು ವೀರಶೈವ ಸಮುದಾಯದ ತಾಲೂಕು ಅಧ್ಯಕ್ಷ ವೀರಣ್ಣ ಪಾಣಿ ಹೇಳಿದರು.

    ಇದನ್ನೂ ಓದಿ: ಬಿಜೆಪಿಯಲ್ಲಿ ವೀರಶೈವ ಲಿಂಗಾಯತರನ್ನು ತುಳಿಯಲಾಗುತ್ತಿದೆ: ಮಾಜಿ ಸಿಎಂ ಜಗದೀಶ ಶೆಟ್ಟರ್ ಹೇಳಿಕೆ

    ತಾಲೂಕಿನ ಜಾಲಹಳ್ಳಿಯಲ್ಲಿ ವೀರಶೈವ ಲಿಂಗಾಯತ ಸಮುದಾಯದಿಂದ ಆಯೋಜಿಸಿದ್ದ ವಿಶ್ವಗುರು ಬಸವೇಶ್ವರರ ಜಯಂತಿ ಕಾರ್ಯಕ್ರಮದಲ್ಲಿ ಭಾನುವಾರ ಮಾತನಾಡಿದರು. ಬಸವಾದಿ ಶರಣರು ವಚನಗಳ ಮೂಲಕ ಬದುಕಿನ ಮೌಲ್ಯ ತಿಳಿಸಿದ್ದಾರೆ. ಅವರು ಹಾಕಿಕೊಟ್ಟಿ ಮಾರ್ಗದಲ್ಲಿ ಮುನ್ನಡೆದರೆ ಆದರ್ಶ ಸಮಾಜ ನಿರ್ಮಾಣ ಸಾಧ್ಯ ಎಂದರು.

    BASAVESWARA BHAVACHITRA MERAVANIGE.j
    ದೇವದುರ್ಗ ತಾಲೂಕು ಜಾಲಹಳ್ಳಿಯಲ್ಲಿ ಬಸವ ಜಯಂತಿ ಅಂಗವಾಗಿ ಎತ್ತಿನಬಂಡಿಯಲ್ಲಿ ಬಸವೇಶ್ವರರ ಭಾವಚಿತ್ರ ಮೆರವಣಿಗೆ ಮಾಡಲಾಯಿತು.

    ನಂತರ ಜೋಡೆತ್ತಿನ ಬಂಡಿಯಲ್ಲಿ ಬಸವೇಶ್ವರ ಭಾವಚಿತ್ರವಿರಿಸಿ ಮೆರವಣಿಗೆ ಮಾಡಲಾಯಿತು. ಮಹಿಳೆಯರು ಕುಂಭ- ಕಳಸದೊಂದಿಗೆ ಭಾಗವಹಿಸಿದ್ದರು. ಗ್ರಾಪಂ ಸದಸ್ಯ ಶರಣಯ್ಯಸ್ವಾಮಿ, ಎಚ್.ಪಿ. ಮಲ್ಲಿಕಾರ್ಜುನ್, ಜಗದೀಶ, ಶಿವು ಮೇಟಿಗೌಡ, ರಾಮನಗೌಡ ಮಾಪಾ, ಶರಣು ಹುಣಸಗಿ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts