More

    ಕ್ಷಯ ಮುಕ್ತ ಭಾರತಕ್ಕೆ ಸಹಕರಿಸಿ

    ದೇವದುರ್ಗ: ದೇಶವನ್ನು 2025ರೊಳಗೆ ಕ್ಷಯ ಮುಕ್ತ ಮಾಡುವ ಗುರಿ ಹಾಕಿಕೊಂಡಿದ್ದು, ಇದಕ್ಕೆ ಸಾರ್ವಜನಿಕರ ಸಹಕಾರ ಅಗತ್ಯವಾಗಿದೆ ಎಂದು ತಾಲೂಕು ಆರೋಗ್ಯ ಅಧಿಕಾರಿ ಬನದೇಶ್ವರ ಹೇಳಿದರು.

    ಪಟ್ಟಣದ ಸಾರ್ವಜನಿಕ ಆಸ್ಪತ್ರೆ ಆವರಣದಲ್ಲಿ ಜಿಲ್ಲಾಡಳಿತ, ಜಿಪಂ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಿಂದ ಗುರುವಾರ ಹಮ್ಮಿಕೊಂಡಿದ್ದ ವಿಶ್ವ ಕ್ಷಯರೋಗ ದಿನಾಚರಣೆ ಹಾಗೂ ಜನಜಾಗೃತಿ ಜಾಥಾಕ್ಕೆ ಚಾಲನೆ ನೀಡಿ ಮಾತನಾಡಿದರು. ಕ್ಷಯ ಸೋಂಕಿತರನ್ನು ಕೀಳರಿಮೆಯಿಂದ ನೋಡಬಾರದು. ಸ್ನೇಹಮಯವಾದ ವಾತಾವರಣ ಕಲ್ಪಿಸಿ, ರೋಗ ಹೋಗಲಾಡಿಸಬೇಕು. ಕ್ಷಯ ಗುಣಮುಖವಾಗುವ ಕಾಯಿಲೆ. ಸರಿಯಾದ ಚಿಕಿತ್ಸೆ ಪಡೆದುಕೊಂಡಲ್ಲಿ ಸಂಪೂರ್ಣ ಗುಣವಾಗುತ್ತದೆ ಎಂದರು.

    ಕ್ಷಯರೋಗದ ಚಿಕಿತ್ಸೆ ಉಚಿತವಾಗಿದ್ದು, ಜತೆಗೆ ಪೌಷ್ಠಿಕ ಆಹಾರ ಸೇವನೆಗೆ ಫಲಾನುಭವಿ ಬ್ಯಾಂಕ್ ಖಾತೆಗೆ ಪ್ರತಿ ತಿಂಗಳು 500ರೂ. ಪ್ರೋತ್ಸಾಹಧನ ಚಿಕಿತ್ಸೆ ಮುಗಿಯುವವರೆಗೆ ಕೊಡಲಾಗುತ್ತದೆ. ಈ ವರ್ಷದ ಘೋಷವಾಕ್ಯವಾದ ಕ್ಷಯ ನಿರ್ಮೂಲನೆಗೆ ಸಂಪನ್ಮೂಲಗಳನ್ನು ಬಳಸಿ, ಜೀವ ಉಳಿಸಿ ಸಾಕಾರಗೊಳಿಸಲು ಸಹಕಾರ ಅಗತ್ಯ ಎಂದರು.

    ಮುಖ್ಯ ವೈದ್ಯಾಧಿಕಾರಿ ಡಾ.ರಾಜಕುಮಾರ ಹುಲಿಮನಿಗೌಡ, ಜಿಲ್ಲಾ ಆರೋಗ್ಯ ಉಪ ಶಿಕ್ಷಣಾಧಿಕಾರಿ ಶಿವಪ್ಪ, ತಾಲೂಕು ಹಿರಿಯ ಆರೋಗ್ಯ ಸುರಕ್ಷತಾ ಅಧಿಕಾರಿ ಚನ್ನಬಸಯ್ಯ ಹಿರೇಮಠ, ಡಾ.ಗಂಗಾಧರ, ಡಾ.ನಾಗರಾಜ ಮಲ್ಕಾಪೂರ, ಡಾ.ರಿಯಾಜ್, ಅಂಬಿಕಾ, ಉಪನ್ಯಾಸಕರಾದ ಹೇಮಾ, ಸೌಭಾಗ್ಯ, ಸಹನಾ, ಕಾರ್ಯಕ್ರಮ ವ್ಯವಸ್ಥಾಪಕ ಅಧಿಕಾರಿ ನಾಗರಾಜ ವರ್ಮಾ, ರವಿಶಂಕರ ಶುಕ್ಲಾ, ಮಹೇಶ, ವೀರೇಶ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts