More

    ತ್ರಿಕಾಲ ಜ್ಞಾನಿ, ತ್ರಿಪದಿ ಕವಿಗೆ ನಮನ

    ದೇವದುರ್ಗ: ಸರ್ವಜ್ಞ ಕವಿಮಾತ್ರ ಆಗಿರದೆ ತ್ರಿಕಾಲ ಜ್ಞಾನಿಯೂ ಆಗಿದ್ದರು. ಹೀಗಾಗಿಯೇ ಎಲ್ಲ ಕಾಲಕ್ಕೆ ಸಲ್ಲುವಂತಹ ವಚನಗಳನ್ನು ರಚನೆ ಮಾಡಿದ್ದಾರೆ. ಆಡು ಮುಟ್ಟದ ಸೊಪ್ಪಿಲ್ಲ, ಸರ್ವಜ್ಞ ರಚಿಸದ ವಚನವಿಲ್ಲ ಎನ್ನುವ ಮಾತು ಅಕ್ಷರಶಃ ನಿಜ ಎಂದು ತಹಸೀಲ್ದಾರ್ ಶ್ರೀನಿವಾಸ್ ಚಾಪೇಲ್ ಹೇಳಿದರು.

    ಪಟ್ಟಣದ ಮಿನಿವಿಧಾನಸೌಧ ಸಭಾಗಂಣದಲ್ಲಿ ತಾಲೂಕು ಆಡಳಿತದಿಂದ ಆಯೋಜಿಸಿದ್ದ ತ್ರಿಪದಿ ಕವಿ ಸರ್ವಜ್ಞ ಜಯಂತಿ ಕಾರ್ಯಕ್ರಮದಲ್ಲಿ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡಿ ಸೋಮವಾರ ಮಾತನಾಡಿದರು. ಸರ್ವಜ್ಞರ ವಚನಗಳು ನಮ್ಮ ಬದುಕಿನಲ್ಲಿ ಹಾಸುಹೊಕ್ಕಾಗಿವೆ. ಅವರ ಪ್ರತಿ ತ್ರಿಪದಿಯಲ್ಲೂ ಜೀವನ ಮೌಲ್ಯಗಳು ಅಡಗಿವೆ. ಆಡು ಎಲ್ಲ ಸೊಪ್ಪು ತಿನ್ನುವಂತೆ, ಸರ್ವಜ್ಞರು ಎಲ್ಲ ಕಾಲಕ್ಕೆ, ಎಲ್ಲ ಭಾಗಕ್ಕೆ, ಎಲ್ಲರಿಗೂ ಸಲ್ಲುವಂತ ವಚನ ರಚಿಸಿದ್ದಾರೆ ಎಂದರು.

    ಶರಣರು, ವಚನಕಾರರು, ದಾರ್ಶನಿಕರು, ದಾಸರು, ಸಂತರು ನಾಡಿಗೆ ಅನೇಕ ಆದರ್ಶಗಳನ್ನು ಕೊಡುಗೆ ನೀಡಿದ್ದಾರೆ. ಅವರಲ್ಲಿ ಒಂದೊಂದು ನುಡಿಯೂ ಅಮೂಲ್ಯವಾಗಿದ್ದು, ಅವುಗಳನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಂಡರೆ ಆದರ್ಶ ಬದುಕು ಕಟ್ಟಿಕೊಳ್ಳಲು ಸಾಧ್ಯ ಎಂದು ಹೇಳಿದರು.

    ಕಸಾಪ ಮಾಜಿ ಅಧ್ಯಕ್ಷ ಎಚ್.ಶಿವರಾಜ ಮಾತನಾಡಿದರು. ಶಿರಸ್ತೇದಾರ್ ಗೋವಿಂದ ನಾಯಕ, ಕಂದಾಯ ನಿರೀಕ್ಷಕ ಭೀಮನಗೌಡ ಪಾಟೀಲ್, ಶರಣಬಸವಸ್ವಾಮಿ, ಅನೀಲ್‌ಕುಮಾರ, ರವಿಕುಮಾರ, ಡಿ ಕೃಷ್ಣ, ಪುರಸಭೆ ಸದಸ್ಯ ಚಂದ್ರಶೇಖರ ಕುಂಬಾರ, ಸಿಬ್ಬಂದಿ ಗಂಗಮ್ಮ, ಅನುರಾಧಾ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts