More

    ಸಂತ್ರಸ್ತ ರೈತರಿಗೆ ಭೂಮಿ ಮರಳಿಸಿ

    ದೇವದುರ್ಗ: ಮೂವತ್ತು ವರ್ಷಗಳ ಹಿಂದೆ ಕೆಐಡಿಬಿ ನಿಗಮ ಸ್ವಾಧೀನಪಡಿಸಿಕೊಂಡ ಭೂಮಿ ಮರಳಿಸುವಂತೆ ಒತ್ತಾಯಿಸಿ ಸಂತ್ರಸ್ತ ರೈತರು ತಹಸೀಲ್ದಾರ್‌ಗೆ ಸೋಮವಾರ ಮನವಿ ಸಲ್ಲಿಸಿದರು.

    ದೇವದುರ್ಗ ಸೀಮೆಯ ಸರ್ವೇ ನಂ. 17/3 ವಿಸ್ತೀರ್ಣ 4 ಎಕರೆ 39 ಗುಂಟೆ, ಸರ್ವೇ ನಂ. 95/1ರ 9.09ಎಕರೆ, ಸರ್ವೇ ನಂ. 195/ಪಿ/1ರ 4ಎಕರೆ, ಸರ್ವೇ ನಂ. 17/2ರ 3ಎಕರೆ, ಸರ್ವೇ ನಂ. 16/1/1ರ 5.20ಎಕರೆ, ಸರ್ವೇ ನಂ 17/1ರ 4.9ಎಕರೆ ಜಮೀನನ್ನು ಕೆಐಡಿಬಿ ಸ್ವಾಧೀನಪಡಿಸಿಕೊಂಡು 30ವರ್ಷವಾದರೂ ಅಭಿವೃದ್ಧಿಗೊಳಿಸಿಲ್ಲ. ಪಟ್ಟಣದ ಹೃದಯ ಭಾಗದಲ್ಲಿರುವ ಜಮೀನುಗಳನ್ನು ಈ ಹಿಂದೆ ಕಡಿಮೆ ಬೆಲೆಗೆ ಖರೀದಿಸಲಾಗಿದೆ. ಇದರಿಂದ ಭೂಮಿ ಕಳೆದುಕೊಂಡ ರೈತರ ಪರಿಸ್ಥಿತಿ ಅತಂತ್ರವಾಗಿದೆ. ಈ ಜಮೀನು ಕೈಗಾರಿಕೆ ಸ್ಥಾಪನೆಗೆ ಯೋಗ್ಯವಲ್ಲ ಎಂದು ದೂರಿದರು.

    ಕೂಡಲೇ ಸಂತ್ರಸ್ತ ಫಲಾನುಭವಿ ರೈತರಿಗೆ ಜಮೀನು ಮರಳಿ ನೀಡಬೇಕು. ಸದರಿ ಜಮೀನಿನಲ್ಲಿ ಕೈಗಾರಿಕೆ ಸ್ಥಾಪನೆ ಮಾಡುವ ಮುನ್ನ ರೈತರ ಜತೆ ಸಭೆ ನಡೆಸಿ ತೀರ್ಮಾನಕೈಗೊಳ್ಳಬೇಕು ಎಂದು ಒತ್ತಾಯಿಸಿದರು. ರೈತರಾದ ದೊಡ್ಡ ರಂಗಣ್ಣಗೌಡ ಅಳ್ಳುಂಡಿ, ದೊಡ್ಡ ಹನುಮಂತ್ರಾಯ ಸೋಮಕಾರ, ರಮೇಶ ಪತ್ತಾರ, ಲಿಂಗಪ್ಪ ದೊಂಡಂಬಳಿ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts