More

    ಮುಂಬಡ್ತಿ ನಿಯಮ ತಿದ್ದುಪಡಿ ಮಾಡಿ; ತಾಲೂಕು ಅಹಿಂದ ಚಿಂತಕರ ವೇದಿಕೆ ಆಗ್ರಹ

    371(ಜೆ) ಕಲಂನಡಿ ಸಿಗುತ್ತಿಲ್ಲ ಪ್ರಮೋಶನ್

    ದೇವದುರ್ಗ: 371(ಜೆ) ಕಲಂನ ಮುಂಬಡ್ತಿ ನಿಯಮಗಳ ತಿದ್ದುಪಡಿ ಮಾಡಿ, ಈ ಭಾಗದ ನೌಕರರಿಗೆ ಮುಂಬಡ್ತಿಯಲ್ಲಿ ಮೀಸಲು ನೀಡುವಂತೆ ಒತ್ತಾಯಿಸಿ ಗ್ರೇಡ್-2 ತಹಸೀಲ್ದಾರ್ ಶ್ರೀನಿವಾಸ ಚಾಪಲ್‌ಗೆ ತಾಲೂಕು ಅಹಿಂದ ಚಿಂತಕರ ವೇದಿಕೆ ಬುಧವಾರ ಮನವಿ ಸಲ್ಲಿಸಿತು.

    ಸಂವಿಧಾನ 371(ಜೆ)ನಲ್ಲಿ ಉದ್ಯೋಗ, ಶಿಕ್ಷಣ ಹಾಗೂ ಸೌಲಭ್ಯಗಳಲ್ಲಿ ಮೀಸಲು ಕಲ್ಪಿಸಲಾಗಿದೆ. ಆದರೆ, ಸರ್ಕಾರಿ ನೌಕರರ ಮುಂಬಡ್ತಿಯಲ್ಲಿ ಕಲಂನಲ್ಲಿ ಮೀಸಲು ಕಲ್ಪಿಸದೆ ಅನ್ಯಾಯ ಮಾಡಲಾಗಿದೆ. ಕಲ್ಯಾಣ ಕರ್ನಾಟಕ ಭಾಗದ ನೌಕರರಿಗೆ ಮಾರಕವಾಗಿವೆ. ಕಲ್ಯಾಣ ಕರ್ನಾಟಕ ಭಾಗದ ನೌಕರರಿಗೆ 10-15ವರ್ಷ ಸೇವಾ ಹಿರಿತನವಿದ್ದರೂ ಮುಂಬಡ್ತಿ ನೀಡುತ್ತಿಲ್ಲ. ಈ ಬಗ್ಗೆ ಹಲವು ಸಲ ಪ್ರತಿಭಟನೆ ಮಾಡಿ ಮನವಿ ಸಲ್ಲಿಸಿದರೂ ಸ್ಪಂದಿಸಿಲ್ಲ ಎಂದು ಮನವಿಯಲ್ಲಿ ಆರೋಪಿಸಲಾಗಿದೆ.

    ಕೂಡಲೇ 371(ಜೆ) ಕಲಂನಲ್ಲಿ ತಿದ್ದುಪಡಿ ಮಾಡಿ ಕಲ್ಯಾಣ ಕರ್ನಾಟಕ ಭಾಗದ ನೌಕರರಿಗೆ ಮುಂಬಡ್ತಿ ನೀಡಬೇಕು. ಕಕ ಭಾಗದ 6 ಜಿಲ್ಲೆಗಳನ್ನು ಹೊರತುಪಡಿಸಿ ಉಳಿದ ಎಲ್ಲ 24ಜಿಲ್ಲೆಗಳಲ್ಲಿ ಕಲ್ಯಾಣ ಕರ್ನಾಟಕ ಭಾಗಕ್ಕೆ ಶೇ.8 ಮೀಸಲು ಕಾಯ್ದಿರಿಸಬೇಕು ಎಂದು ಒತ್ತಾಯಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts