More

    ಮೀಸಲಾತಿ ಹೋರಾಟಕ್ಕೆ ಸ್ಪಂದಿಸಿದ ಸರ್ಕಾರ

    ದೇವದುರ್ಗ: ಎರಡು ದಶಕಗಳ ದಲಿತರ ಹೋರಾಟ ಹಾಗೂ ಇತರೆ ಮೀಸಲು ಹೋರಾಟದ ಬೇಡಿಕೆಗಳಿಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸ್ಪಂದಿಸುವ ಮೂಲಕ ದಲಿತರಿಗೆ ದೊಡ್ಡ ಉಡುಗೊರೆ ನೀಡಿದ್ದಾರೆ ಎಂದು ದಲಿತ ಸಂಘರ್ಷ ಸಮಿತಿ ತಾಲೂಕು ಅಧ್ಯಕ್ಷ ಶಾಂತಕುಮಾರ್ ಹೊನ್ನಟಗಿ ಹೇಳಿದರು.

    ರಾಜ್ಯ ಸರ್ಕಾರ ಒಳಮೀಸಲಾತಿ ಜಾರಿಗೊಳಿಸಿದ ಹಿನ್ನೆಲೆಯಲ್ಲಿ ತಾಲೂಕಿನ ಗಬ್ಬೂರಿನಲ್ಲಿ ದಲಿತ ಸಂಘಟನೆಗಳ ಒಕ್ಕೂಟದಿಂದ ಆಯೋಜಿಸಿದ್ದ ವಿಜಯೋತ್ಸವದಲ್ಲಿ ಶನಿವಾರ ಮಾತನಾಡಿದರು.

    ದಲಿತ ಸಮುದಾಯದಲ್ಲಿ ಒಳಮೀಸಲಾತಿ ಜಾರಿಗೊಳಿಸಬೇಕು ಎನ್ನುವ ಹೋರಾಟ ಹಲವು ದಿನಗಳಿಂದ ನಡೆಸಲಾಗುತ್ತಿತ್ತು. ಆಡಳಿತ ನಡೆಸಿದ ಸರ್ಕಾರಗಳು ಇದನ್ನು ನಿರ್ಲಕ್ಷ್ಯ ಮಾಡುತ್ತಾ ಬಂದಿವೆ. ನ್ಯಾ.ಸದಾಶಿವ ಆಯೋಗದ ವರದಿ ಕೂಡ ಒಳಮೀಸಲು ನೀಡಬೇಕು ಎಂದು ಸರ್ಕಾರಕ್ಕೆ ಶಿಫಾರಸು ಮಾಡಿತ್ತು.

    ದಲಿತ ಸಮುದಾಯದ ಮೀಸಲು ಶೇ.15ರಿಂದ 17ಕ್ಕೆ ಹೆಚ್ಚಿಸುವ ಜತೆಗೆ ನ್ಯಾ. ಸದಾಶಿವ ಆಯೋಗದ ಶಿಫಾರಸು ಪರಿಗಣಿಸಿ, ದಲಿತ ಎಡಗೈಗೆ ಶೇ.6, ಬಲಗೈಗೆ ಶೇ.5.5, ಸ್ಪಶ್ಯ ಜಾತಿಗಳಿಗೆ ಶೇ.4.5, ಇತರೆ ಹಿಂದುಳಿದ ದಲಿತ ಜಾತಿಗಳಿಗೆ ಶೇ.1 ಮೀಸಲು ನೀಡಿದೆ. ಇದಲ್ಲದೆ ವಿವಿಧ ಜಾತಿಗಳ ಮೀಸಲಾತಿ ಹೋರಾಟಕ್ಕೂ ಸ್ಪಂದಿಸಿದೆ ಎಂದು ಹೇಳಿದರು. ನಂತರ ಸ್ಥಳೀಯರಿಗೆ ಸಿಹಿಹಂಚಿ ಸಂಭ್ರಮಿಸಿದರು. ಪ್ರಮುಖರಾದ ಮಲ್ಲಿಕಾರ್ಜುನ ಸಿಂಗ್ರಿ ಮುತ್ತುರಾಜ್ ಮೈತ್ರಿ, ಬಸವರಾಜ್ ಜಗ್ಲಿ ಇತರರಿದ್ದರು.

    25-ಡಿವಿಡಿ-1,1ಎ
    ದೇವದುರ್ಗ ತಾಲೂಕು ಗಬ್ಬೂರಿನಲ್ಲಿ ದಲಿತ ಸಂಘಟನೆಗಳ ಒಕ್ಕೂಟ ಸಂಭ್ರಮಾಚರಣೆ ಮಾಡಿತು. ತಾಲೂಕು ಅಧ್ಯಕ್ಷ ಶಾಂತಕುಮಾರ ಹೊನ್ನಟಗಿ, ಪ್ರಮುಖರಾದ ರಾಜಪ್ಪ ಸಿರವಾರಕರ್, ಜಾಕೋಬ್ ಬೊಮ್ಮನಾಳ, ಮರೆಪ್ಪ ಮಲದಕಲ್, ನರಸಪ್ಪ ಎನ್.ಗಣೆಕಲ್, ಮಾತರ್ಂಡ ಗಬ್ಬೂರು, ತುಕಾರಾಂ ಎನ್.ಗಣೇಕಲ್ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts