More

    ಶುದ್ಧ ಕುಡಿವ ನೀರಿನ ಸೌಲಭ್ಯ ಕಲ್ಪಿಸಿ; ಪಿಡಿಒಗೆ ಜಾಲಹಳ್ಳಿ ಶಾಂತೇಶ್ವರ ಕಾಲನಿ ನಿವಾಸಿಗಳ ಒತ್ತಾಯ

    ದೇವದುರ್ಗ: ತಾಲೂಕಿನ ಜಾಲಹಳ್ಳಿ ಪಟ್ಟಣದ ಶಾಂತೇಶ್ವರ ಕಾಲನಿ ಸಾರ್ವಜನಿಕರಿಗೆ ಶುದ್ಧ ಕುಡಿವ ನೀರು ಪೂರೈಸುವಂತೆ ಒತ್ತಾಯಿಸಿ ಗ್ರಾಪಂ ಪಿಡಿಒ ಬಸವರಾಜ ನಾಯಕಗೆ ಕಾಲನಿ ನಿವಾಸಿಗಳು ಬುಧವಾರ ಮನವಿ ಸಲ್ಲಿಸಿದರು.

    ಜಾಲಹಳ್ಳಿ ಪಟ್ಟಣದಲ್ಲಿ ಕುಡಿವ ನೀರಿನ ಸಮಸ್ಯೆ ತೀವ್ರವಾಗಿದ್ದು, ಜನರು ಸಮಸ್ಯೆ ಎದುರಿಸುತ್ತಿದ್ದಾರೆ. ಅದರಲ್ಲಿ ಶಾಂತೇಶ್ವರ ಕಾಲನಿಯಲ್ಲಿ ಕುಡಿಯುವ ನೀರು, ರಸ್ತೆ, ಚರಂಡಿ, ಕಸದ ಸಮಸ್ಯೆ ವಿಪರೀತವಾಗಿದೆ. ಕುಡಿಯುವ ನೀರಿಲ್ಲದೆ ಇಲ್ಲಿನ ನಿವಾಸಿಗಳು ಅಕ್ಕಪಕ್ಕದ ಕಾಲನಿ, ರೈತರ ಜಮೀನು, ಖಾಸಗಿ ಬಾವಿ, ಬೋರ್‌ವೆಲ್‌ನಿಂದ ನೀರು ತರುವ ಸ್ಥಿತಿಯಿದೆ. ಹಲವು ದಿನಗಳಿಂದ ಕುಡಿವ ನೀರಿನ ಸಮಸ್ಯೆ ಕಾಡುತ್ತಿದ್ದು, ಈ ಬಗ್ಗೆ ಸಂಬಂಧಿಸಿದ ಅಧಿಕಾರಗಳು, ಜನಪ್ರತಿನಿಧಿಗಳಿಗೆ ಮನವಿ ಮಾಡಿದರೂ ಸ್ಪಂದಿಸುತ್ತಿಲ್ಲ.

    ಕಾಲನಿಯಲ್ಲಿ ಸಿಸಿ ರಸ್ತೆ, ಚರಂಡಿ ವ್ಯವಸ್ಥೆ ಇಲ್ಲದೆ ಎಲ್ಲೆಂದರಲ್ಲಿ ನೀರು ನಿಂತು ದುರ್ನಾತ ಬೀರುತ್ತಿದೆ. ಸೊಳ್ಳೆಗಳ ಹಾವಳಿ ಹೆಚ್ಚಾಗಿದ್ದು, ಸಾಂಕ್ರಾಮಿಕ ರೋಗ ಹರಡುವ ಭೀತಿ ಎದುರಾಗಿದೆ. ರಸ್ತೆ ಮೇಲೆ ನೀರು ನಿಲ್ಲುತ್ತಿರುವ ಕಾರಣ ಓಡಾಡಲು ಸಮಸ್ಯೆಯಿದ್ದು, ಮಹಿಳೆಯರು, ಮಕ್ಕಳು, ವೃದ್ಧರು ಸಂಕಷ್ಟ ಎದುರಿಸುವಂತಾಗಿದೆ ಎಂದು ದೂರಿದ್ದಾರೆ.

    ಕೂಡಲೇ ಕಾಲನಿಗೆ ಸಮರ್ಪಕವಾಗಿ ಶುದ್ಧ ಕುಡಿಯುವ ನೀರಿನ ಸೌಲಭ್ಯ ಕಲ್ಪಿಸಬೇಕು. ಆರ್‌ಒ ಪ್ಲಾಂಟ್ ಸ್ಥಾಪಿಸಿ ಸಮರ್ಪಕವಾಗಿ ನಿರ್ವಹಣೆ ಮಾಡಬೇಕು. ಗುಣಮಟ್ಟದ ಸಿಸಿ ರಸ್ತೆ ನಿರ್ಮಿಸಿ, ಹೊಸ ಚರಂಡಿ ವ್ಯವಸ್ಥೆ ಮಾಡಬೇಕು. ಸಮರ್ಪಕವಾಗಿ ಕಸ ವಿಲೇವಾರಿ ಮಾಡಿ ಉತ್ತಮ ವಾತಾವರಣ ನಿರ್ಮಿಸಬೇಕು. ನಿರ್ಲಕ್ಷಿಸಿದರೆ, ಗ್ರಾಪಂಗೆ ಮುತ್ತಿಗೆ ಹಾಕಲಾಗುವುದೆಂದು ಎಚ್ಚರಿಸಿದರು.

    ಶಾಂತೇಶ್ವರ ಕಾಲನಿ ನಿವಾಸಿಗಳಾದ ಶಿವರಾಜ, ಶಿವನಗೌಡ ಪೊಪಾ, ಈರಪ್ಪ, ಶಿವಪ್ಪ, ವಿಶ್ವನಾಥ ಚೌಡೇರ್, ಈಶಪ್ಪ, ಬಿ.ನಾಗರಾಜ, ಬಸಪ್ಪ, ನಾಗಪ್ಪ, ನಿಂಗಣ್ಣ, ಗೌರಮ್ಮ, ಶಾಂತಮ್ಮ, ದೇವಮ್ಮ, ಫಾತಿಮಾ ಬೇಗಂ, ಈರಮ್ಮ, ಲಕ್ಷ್ಮೀ, ದಾಕ್ಷಾಯಿಣಿ, ಮಲ್ಲಮ್ಮ, ಗಂಗಮ್ಮ, ಶಾರದಾ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts