More

    ಗಬ್ಬೂರು ಬೂದಿ ಬಸವೇಶ್ವರ ಜಾತ್ರೆ : 201 ಜೋಡಿ ದಾಂಪತ್ಯ ಜೀವನಕ್ಕೆ ನಾಳೆ

    ಸಾಮೂಹಿಕ ವಿವಾಹ ಆಯೋಜನೆ ಮಠದ ವ್ಯವಸ್ಥಾಪಕ ಚನ್ನಬಸವಯ್ಯಸ್ವಾಮಿ ಮಾಹಿತಿ


    ದೇವದುರ್ಗ: ಭಕ್ತರ ಆರಾಧ್ಯ ದೈವ ಗಬ್ಬೂರು ಶ್ರೀ ಬೂದಿಬಸವೇಶ್ವರ ಜಾತ್ರಾ ಮಹೋತ್ಸವ ಫೆ.13ರಂದು ನಡೆಯಲಿದೆ. ಜಾತ್ರೆ ನಿಮಿತ್ತ ಫೆ.10ರಂದು ಸಾಮೂಹಿಕ ವಿವಾಹ ಕಾರ್ಯಕ್ರಮ ಆಯೋಜಿಸಲಾಗಿದ್ದು, 201 ಜೋಡಿ ದಾಂಪತ್ಯ ಜೀವನಕ್ಕೆ ಕಾಲಿಡಲಿವೆ ಎಂದು ಶ್ರೀಮಠದ ವ್ಯವಸ್ಥಾಪಕ ಚನ್ನಬಸವಯ್ಯಸ್ವಾಮಿ ಹೇಳಿದರು.

    ಶ್ರೀ ಬೂದಿಬಸವ ಶಿವಾಚಾರ್ಯ ಸ್ವಾಮೀಜಿಗಳ ಸಾನ್ನಿಧ್ಯದಲ್ಲಿ ಫೆ.10ರಿಂದ ಫೆ.16ರವರೆಗೆ ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ. ಫೆ.9ರಂದು ಬೆಳಗ್ಗೆ 8ಕ್ಕೆ ಬೂದಿಬಸವೇಶ್ವರ ಕರ್ತೃ ಗದ್ದುಗೆಗೆ ರುದ್ರಾಭಿಷೇಕ, ಬಿಲ್ವಾರ್ಚನೆ ನಡೆಯಲಿದೆ. ಸಾಲಿ ಬೂದೆಯ್ಯಸ್ವಾಮಿ, ದೊಡ್ಡಬಸ್ಸಯ್ಯ ಸ್ವಾಮಿ, ಶರಣಯ್ಯಸ್ವಾಮಿ ಪೌರೋಹಿತ್ಯದಲ್ಲಿ ಪ್ರಥಮ ಉಚ್ಛಾಯ ಜರುಗಲಿದೆ ಎಂದು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

    ಫೆ.10ರಂದು ಬೆಳಗ್ಗೆ 10.30ಕ್ಕೆ ಮಹಾಗಣಾರಾಧನೆ, ಜಂಗಮ ವಟುಗಳಿಗೆ ಅಯ್ಯಚಾರ ದೀಕ್ಷೆ, ಸಾಮೂಹಿಕ ವಿವಾಹ, ಶ್ರೀಗಳ ತುಲಾಭಾರ, 259ನೇ ಶಿವಾನುಭವಗೋಷ್ಠಿ, ಧಾರ್ಮಿಕ ಸಭೆ ಏರ್ಪಡಿಸಲಾಗಿದೆ. ಫೆ.11ರಂದು ಶ್ರೀಗಳ ಸಾನ್ನಿಧ್ಯದಲ್ಲಿ ವಾದ್ಯಮೇಳ, ಭಜನೆಯೊಂದಿಗೆ ಕಳಸೋತ್ಸವ ಮೆರವಣಿಗೆ ನಡೆಯಲಿದೆ. ಫೆ.12ರಂದು ಕಡುಬಿನ ಕಾಳಗ ನಡೆಯಲಿದೆ. ಫೆ.13ರಂದು ಬೆಳಗ್ಗೆ ವಿವಿಧ ಪೂಜಾ ಕಾರ್ಯಕ್ರಮಗಳು, ಸಂಜೆ 5.30ಕ್ಕೆ ಮಹಾರಥೋತ್ಸವ ಅದ್ದೂರಿಯಾಗಿ ಜರುಗಲಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts