More

    ಮೆರಗು ಹೆಚ್ಚಿಸಿದ ಸಂವಿಧಾನ ಜಾಗೃತಿ ಜಾಥಾ

    ದೇವದುರ್ಗ: ಗಣರಾಜ್ಯೋತ್ಸವ 75ನೇ ರಜತ ಮಹೋತ್ಸವ ಅಂಗವಾಗಿ ಜಿಲ್ಲಾಡಳಿತ, ತಾಲೂಕು ಆಡಳಿತ, ತಾಪಂ ಹಾಗೂ ಸ್ಥಳೀಯ ಗ್ರಾಪಂ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಸಂವಿಧಾನ ಜಾಗೃತಿ ಜಾಥಾ, ಸ್ತಬ್ಧ ಚಿತ್ರ ರಥಯಾತ್ರೆಗೆ ಶನಿವಾರ ಚಿಂಚೋಡಿಯಲ್ಲಿ ಅದ್ದೂರಿಯಾಗಿ ಬೀಳ್ಕೊಡುಗೆ ನೀಡಲಾಯಿತು.

    ರಥಕ್ಕೆ ಅದ್ದೂರಿಯಾಗಿ ಬೀಳ್ಕೊಡುಗೆ

    ಮೊದಲ ದಿನ ಗಬ್ಬೂರು, ಎರಡನೇ ದಿನ ದೇವದುರ್ಗ, ಮೂರನೇ ದಿನ ಗಲಗ ಹಾಗೂ ನಾಲ್ಕನೇ ದಿನ ಜಾಲಹಳ್ಳಿಯಲ್ಲಿ ವಾಸ್ತವ್ಯ ಹೂಡಿ ವಿವಿಧ ಹಳ್ಳಿಗಳಿಗೆ ಸಂಚರಿಸಿ ಜಾಥಾ ಸಂವಿಧಾನ ಮಹತ್ವದ ಬಗ್ಗೆ ಜನರಿಗೆ ಜಾಗೃತಿ ಮೂಡಿಸಿತು.
    ಗಲಗ ಗ್ರಾಪಂಯಿಂದ ಕೊನೆಗೆ ಪಲಕನಮರಡಿ ಗ್ರಾಪಂ ಸಂವಿಧಾನ ಜಾಗೃತಿ ಜಾಥಾ ಸಾಗಿತು. ಪಲಕನಮರಡಿಯಲ್ಲಿ ಮಹಿಳೆಯರು ಶಾಲಾ ಮಕ್ಕಳಿಂದ ಕಳಸ ಕುಂಭದೊಂದಿಗೆ ಮೆರವಣಿಗೆ ನಡೆಸಲಾಯಿತು. ನಂತರ ಸೋಮನಮರಡಿ, ಗಾಣದಾಳ, ಸಿದ್ದಾಪೂರ, ಕರಡಿಗುಡ್ಡ, ಅಮರಾಪುರ, ಮುಂಡರಗಿ, ಕರಿಗುಡ್ಡ, ಚಿಂಚೋಡಿ ಗ್ರಾಪಂಯಲ್ಲಿ ಜಾಥಾ ಸಂಚಾರ ನಡೆಸಿತು.

    ಇದನ್ನೂ ಓದಿ:

    ವಿವಿಧ ಸಂಘ ಸಂಸ್ಥೆಗಳ ಮುಖಂಡರು ಹಾಗೂ ಶಾಲಾ ಮಕ್ಕಳು, ಶಿಕ್ಷಕರು ಅಂಗನವಾಡಿ, ಆಶಾ ಕಾರ್ಯಕರ್ತೆಯರು ಡಾ.ಬಿ.ಆರ್ ಅಂಬೇಡ್ಕರ್ ಪುತ್ಥಳಿ, ಭಾವಚಿತ್ರಕ್ಕೆ ಹಾಗೂ ಸಂವಿಧಾನ ಪೀಠಿಕೆಗೆ ಪೂಜೆ ಸಲ್ಲಿಸಿ, ಸಂವಿಧಾನ ಪೀಠಿಕೆ ವಾಚಿಸಿದರು. ಎಲ್‌ಇಡಿ ಪರದೆ ಮೂಲಕ ಸಂವಿಧಾನದ ಕುರಿತು ವಿಡಿಯೋ ಪ್ರದರ್ಶಿಸಲಾಯಿತು. ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನವನ್ನು ವಿತರಿಸಲಾಯಿತು.
    ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕ ಚೇತನ್‌ಕುಮಾರ, ತಹಸೀಲ್ದಾರ್ ಚನ್ನಮಲ್ಲಪ್ಪ ಘಂಟಿ, ಬಿಇಒ ಎಚ್.ಸುಖದೇವ್, ಪುರಸಭೆ ಮುಖ್ಯಾಧಿಕಾರಿ ಕೆ.ಹಂಪಯ್ಯ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts