More

    ಬೈಪಾಸ್ ರಸ್ತೆಗೆ ಪ್ರಸ್ತಾವನೆ ಸಲ್ಲಿಸಿ, ಅಧಿಕಾರಿಗಳಿಗೆ ಶಾಸಕ ಶಿವನಗೌಡ ಸೂಚನೆ |

    ಹಟ್ಟಿಚಿನ್ನದಗಣಿ ರಸ್ತೆ ಅಭಿವೃದ್ಧಿಗೆ ನೀಲಿನಕ್ಷೆ

    ದೇವದುರ್ಗ: ಪಟ್ಟಣಕ್ಕೆ ಸಂಪರ್ಕ ಕಲ್ಪಿಸುವ ಹಾಗೂ ಸಂಚಾರ ದಟ್ಟಣೆ ತಡೆಯಲು ಬೈಪಾಸ್ ರಸ್ತೆ ನಿರ್ಮಾಣಕ್ಕೆ 100ಕೋಟಿ ರೂ. ವೆಚ್ಚದ ಯೋಜನೆ ಸಿದ್ಧಪಡಿಸಿ ನಿಗಮಕ್ಕೆ ಪ್ರಸ್ತಾವನೆ ಸಲ್ಲಿಸುವಂತೆ ಅಧಿಕಾರಿಗಳಿಗೆ ರಾಜ್ಯ ರಸ್ತೆ ಸಾರಿಗೆ ಅಭಿವೃದ್ಧಿ ನಿಗಮದ ಅಧ್ಯಕ್ಷ ಕೆ.ಶಿವನಗೌಡ ನಾಯಕ ಸೂಚಿಸಿರು.

    ಬೈಪಾಸ್ ರಸ್ತೆ ನಿರ್ಮಾಣ ಸಂಬಂಧ ಸಿರವಾರ ಕ್ರಾಸ್ ಬಳಿ ರಸ್ತೆ ಅಭಿವೃದ್ಧಿ ನಿಗಮದ ಅಧಿಕಾರಿಗಳೊಂದಿಗೆ ಭೇಟಿ ನೀಡಿ, ನಂತರ ಪ್ರವಾಸಿ ಮಂದಿರದಲ್ಲಿ ಸಭೆ ನಡೆಸಿ ಸೋಮವಾರ ಮಾತನಾಡಿದರು. ರಾಯಚೂರು, ಅರಕೇರಾ, ಸಿರವಾರದಿಂದ ಬರುವವರು ಶಹಾಪುರ ಹಾಗೂ ಲಿಂಗಸುಗೂರಿಗೆ ತೆರಳಲು ಬೈಪಾಸ್ ರಸ್ತೆ ಅಗತ್ಯವಿದೆ. ಇದರಿಂದ ಸಂಚಾರ ದಟ್ಟಣೆ ಹಾಗೂ ಅಪಘಾತ ತಡೆಯಬಹುದು. ಬೈಪಾಸ್ ರಸ್ತೆ ನಿರ್ಮಾಣಕ್ಕೆ ಭೂಸ್ವಾಧೀನಕ್ಕೆ ಯಾವುದೇ ಅಡ್ಡಿಯಿಲ್ಲ. 4 ನಗರಗಳಿಗೆ ಸಂಪರ್ಕ ಕಲ್ಪಿಸುವ ಚತುಷ್ಪಥ ರಸ್ತೆಯೊಂದಿಗೆ ಬೈಪಾಸ್ ರಸ್ತೆ ನಿರ್ಮಾಣಕ್ಕೆ ಒಂದೇ ಪ್ಯಾಕೇಜಿನಡಿ 100 ಕೋಟಿ ರೂ. ವೆಚ್ಚದ ಪ್ರಸ್ತಾವನೆ ಸಲ್ಲಿಸಿ. ಸರ್ಕ್ಯೂಟ್‌ಹೌಸ್‌ನಿಂದ ಸರ್ಕಾರಿ ಡಿಗ್ರಿ ಕಾಲೇಜು ಮಾರ್ಗವಾಗಿ ಶಹಾಪುರಗೆ ಸಂಪರ್ಕಿಸಲು 4 ಕಿಮೀ ಆಗಲಿದೆ. ದೇವದುರ್ಗ ಸುತ್ತುವರಿದು ಶಂಭುಲಿಂಗೇಶ್ವರ ಬೆಟ್ಟ, ಕೋತಿಗುಡ್ಡದ ಮೂಲಕ ಬೈಪಾಸ್ ರಸ್ತೆಗೆ 7 ಕಿಮೀ ಆಗಲಿದೆ. ಈ ಬಗ್ಗೆ ಪರಿಶೀಲನೆ ನಡೆಸಿ ನಿಗಮಕ್ಕೆ ವರದಿ ನೀಡಬೇಕು.

    ಪ್ರಸ್ತಾವನೆ ಸಲ್ಲಿಸಿದ ನಂತರ ಸರ್ಕಾರದೊಂದಿಗೆ ಚರ್ಚಿಸಿ, ಅನುಮೋದನೆ ಪಡೆಯುವೆ. ಇದರ ಜತೆಗೆ ವಂದಲಿ, ಊಟಿ, ಭೂಮನಗುಂಡ ಮಾರ್ಗವಾಗಿ ಹಟ್ಟಿಗೆ ಸಂಪರ್ಕಿಸುವ ರಸ್ತೆ ಅಭಿವೃದ್ಧಿಗೂ ಪ್ರಸ್ತಾವನೆ ಸಲ್ಲಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು. ಈ ಬಗ್ಗೆ ಸಂಸದರೊಂದಿಗೆ ಮಾತುಕತೆ ನಡೆಸಿ ಕಲ್ಯಾಣ ಕರ್ನಾಟಕ ಅಭಿವೃದ್ಧಿ ಮಂಡಳಿಯಿಂದ ಈ ರಸ್ತೆ ಅನುದಾನ ನೀಡಲು ಮನವಿ ಮಾಡುತ್ತೇನೆ ಎಂದರು.
    ರಾಜ್ಯ ರಸ್ತೆ ಅಭಿವೃದ್ಧಿ ನಿಗಮದ ಉಸ್ತುವಾರಿ ಇಂಜಿನಿಯರ್ ರವೀಂದ್ರ, ಈರಣ್ಣ, ಚನ್ನಬಸಪ್ಪ ಮ್ಯಾಕಲ್ ಹಾಗೂ ಲೋಕೋಪಯೋಗಿ ಇಲಾಖೆ ಅಧಿಕಾರಿಗಳು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts