More

    ಕಾರ್ಮಿಕ ವಿರೋಧಿ ಸಂಹಿತೆ ಹಿಂಪಡೆಯಲು ವಿವಿಧ ನೌಕರರ ಒತ್ತಾಯ

    ದೇವದುರ್ಗ: ಮರಣ ಪರಿಹಾರ, ಸಂರಕ್ಷಣೆ ಹಾಗೂ ಪಿಂಚಣಿ ನೀಡಲು ಒತ್ತಾಯಿಸಿ ಅಂಗನವಾಡಿ, ಆಶಾ ಹಾಗೂ ಅಕ್ಷರ ದಾಸೋಹ ನೌಕರರು ಪಟ್ಟಣದ ಮಿನಿವಿಧಾನಸೌಧ ಮುಂದೆ ಸಿಐಟಿಯು ಹಾಗೂ ಎಐಯುಟಿಯುಸಿ ನೇತೃತ್ವದಲ್ಲಿ ಶುಕ್ರವಾರ ಬೃಹತ್ ಪ್ರತಿಭಟನೆ ನಡೆಸಿದರು.

    ಸರ್ಕಾರ ವಿವಿಧ ಯೋಜನೆಗಳನ್ನು ಫಲಾನುಭವಿಗಳಿಗೆ ತಲುಪಿಸಲು ಅಂಗನವಾಡಿ ಹಾಗೂ ಆಶಾ ಕಾರ್ಯಕರ್ತೆಯರು ಪ್ರಮಾಣಿಕರವಾಗಿ ದುಡಿಯುತ್ತಿದ್ದಾರೆ. ಶಾಲಾ ಮಕ್ಕಳಿಗೆ ಮಧ್ಯಾಹ್ನದ ಬಿಸಿಯೂಟ ಯೋಜನೆಯಡಿ ಆಹಾರ ತಯಾರಿಸುವಲ್ಲಿ ಬಿಸಿಯೂಟ ನೌಕರರು ಕೆಲಸ ಮಾಡುತ್ತಿದ್ದಾರೆ. ಹಲವು ವರ್ಷಗಳಿಂದ ಹೊರಗುತ್ತಿಗೆ ಆಧಾರದಲ್ಲಿ ದುಡಿಯುತ್ತಿದ್ದು, ಜೀವನಕ್ಕೆ ಭದ್ರತೆ ಇಲ್ಲದಂತಾಗಿದೆ. ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ನಮ್ಮ ಬೇಡಿಕೆ ಈಡೇರಿಸದೆ ಕಾಲಹರಣ ಮಾಡುತ್ತಿವೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

    ಕೂಡಲೇ ಜಿಡಿಪಿಯ ಶೇ.6 ಅನುದಾನ ಆರೋಗ್ಯ ಇಲಾಖೆ ಮೀಸಲಿಡಬೇಕು. ಮಾಸಿಕ 10ಸಾವಿರ ರೂ. ಕರೊನಾ ಭತ್ಯೆ ನೀಡಬೇಕು. ಕೋವಿಡ್-19 ಸೋಂಕಿನಿಂದ ಮೃತಪಟ್ಟ ನೌಕರರಿಗೆ 10 ಲಕ್ಷ ರೂ. ಪರಿಹಾರ ನೀಡಬೇಕು. ಕಾರ್ಮಿಕ ವಿರೋಧಿ ಸಂಹಿತೆ ಹಿಂಪಡೆದು, ಯೋಜನೆಗಳ ಕೆಲಸಗಾರರನ್ನು ಕಾರ್ಮಿಕರೆಂದು ಪರಿಗಣಿಸಬೇಕು. ಬಿಸಿಯೂಟ, ಎನ್‌ಆರ್‌ಎಚ್‌ಎಂ, ಐಸಿಡಿಎಸ್ ಖಾಸಗೀಕಣ ಕೈಬಿಡಬೇಕು. ಮಾಸಿಕ ಕನಿಷ್ಠ 21ಸಾವಿರ ರೂ. ವೇತನ, 10ಸಾವಿರ ಪಿಂಚಣಿ ನೀಡಬೇಕು. ಜೀವವಿಮಾ ಯೋಜನೆ ಸಮರ್ಪಕವಾಗಿ ಅನುಷ್ಠಾನ ಮಾಡಬೇಕು. ಬಿಸಿಯೂಟದಲ್ಲಿ ನೇರನಗದು ವರ್ಗಾವಣೆ ಕೈಬಿಡಬೇಕು. ನೌಕರರಿಗೆ 10ಕೆಜಿ ಆಹಾರಧಾನ್ಯ ನೀಡಬೇಕು. ನೌಕರರಿಗೆ ಪೆನ್ಷನ್ ನಿಗದಿ ಮಾಡಿ, 1.5ಲಕ್ಷ ಇಡಿಗಂಟು ನೀಡಬೇಕು. ರಾಜ್ಯ ಸಕಾರದ 33.94ಕೋಟಿ ರೂ. ಅಂಗನವಾಡಿ ನೌಕರರಿಗೆ ಬಿಡುಗಡೆ ಮಾಡಬೇಕು ಎಂದು ಒತ್ತಾಯಿಸಿದರು. ವಿವಿಧ ನೌಕರರಾದ ರಾಧಾ, ಸಾವಿತ್ರಿ, ಗೌರಿಯಮ್ಮ, ಸರಸ್ವತಿ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts