More

    ಕಥೆ ಸಹ ತೀಕ್ಷ್ಣವಾಗಿರಲಿ…; ಹೊಸ ನಿರ್ದೇಶಕರಿಗೆ ಉಪೇಂದ್ರ ಸಲಹೆ

    ಬೆಂಗಳೂರು: ‘ಇದು ಅವರ 50ನೇ ಚಿತ್ರ. ನಾನು 55ನೇ ಚಿತ್ರ ಮಾಡುತ್ತಿದ್ದೇನೆ. ಅವರು ನನಗಿಂತ ಸ್ಪೀಡ್ ಆಗಿದ್ದಾರೆ. ನನ್ನನ್ನೇ ಓವರ್​ಟೇಕ್ ಮಾಡುತ್ತಿದ್ದಾರೆ …’

    ಹಾಗಂತ ಹೇಳಿದ್ದು ಉಪೇಂದ್ರ. ಅವರನ್ನು ಓವರ್​ಟೇಕ್ ಮಾಡುತ್ತಿರುವುದು ಪತ್ನಿ ಪ್ರಿಯಾಂಕಾ ಉಪೇಂದ್ರ. ಪ್ರಿಯಾಂಕಾ ಅವರ 50ನೇ ಚಿತ್ರವಾದ ‘ಡಿಟೆಕ್ಟಿವ್ ತೀಕ್ಷ್ಣ’ದ ಮೊದಲ ಪೋಸ್ಟರ್ ಗುರುವಾರ ಬಿಡುಗಡೆಯಾಗಿದೆ. ಅದಕ್ಕೆ ಕಾರಣವೂ ಇದೆ. ನಿನ್ನೆ ಉಪೇಂದ್ರ ಮತ್ತು ಪ್ರಿಯಾಂಕಾ ಅವರ ಮಗ ಆಯುಷ್​ನ ಹುಟ್ಟುಹಬ್ಬ. ಮೊದಲು ಸಂಭ್ರಮಾಚರಣೆಯಾಗಿ, ಆ ನಂತರ ಪೋಸ್ಟರ್ ಬಿಡುಗಡೆ ಮಾಡುವ ಮೂಲಕ ಚಿತ್ರಕ್ಕೂ ಚಾಲನೆ ನೀಡಲಾಯಿತು. ಈ ಸಂದರ್ಭದಲ್ಲಿ ಮಾತನಾಡಿದ ಉಪೇಂದ್ರ, ‘ಪೋಸ್ಟರ್ ಬಹಳ ಚೆನ್ನಾಗಿದೆ. ಗೆಟಪ್ ತೀಕ್ಷ್ಣವಾಗಿದೆ. ಕಥೆ ಮತ್ತು ಮೇಕಿಂಗ್ ಸಹ ಇದೇ ರೀತಿ ಶಾರ್ಪ್ ಆಗಿರಲಿ’ ಎಂದು ಹಾರೈಸಿದರು.

    ‘ಒಂದು ವರ್ಷದ ಹಿಂದೆ ರಘು ಬಂದು ಈ ಕಥೆ ಹೇಳಿದಾಗ ಬಹಳ ಖುಷಿಯಾಯಿತು. ಬಹಳ ಚೆನ್ನಾಗಿ ಸ್ಕ್ರಿಪ್ಟ್ ಮಾಡಿಕೊಂಡಿದ್ದಾರೆ. ಪ್ರತಿ ಚಿತ್ರದಲ್ಲೂ ವಿಭಿನ್ನ ಪಾತ್ರ ಮಾಡಬೇಕು ಎಂಬುದು ನನ್ನ ಆಸೆ. ಅದರಂತೆ ಬೇತೆ ತರಹದ ಸ್ಕ್ರಿಪ್ಟ್ ಗಳನ್ನು ಆಯ್ಕೆ ಮಾಡಿಕೊಳ್ಳುತ್ತಿದ್ದೇನೆ. ಈ ಪಾತ್ರ ನನಗೆ ಕೊಟ್ಟಿದ್ದಿಕ್ಕೆ ನಿರ್ದೇಶಕ ರಘು ಅವರಿಗೆ ಥ್ಯಾಂಕ್ಸ್. ಒಂದೊಳ್ಳೆಯದು ತಂಡ ಇದೆ. ಜೂನ್​ನಿಂದ ಚಿತ್ರ ಶುರುವಾಗಲಿದೆ’ ಎನ್ನುತ್ತಾರೆ ಪ್ರಿಯಾಂಕಾ. ‘ಡಿಟೆಕ್ಟಿವ್ ತೀಕ್ಷ್ಣ’ ಚಿತ್ರವನ್ನು ತ್ರಿವಿಕ್ರಮ ರಘು ಕಥೆ-ಚಿತ್ರಕಥೆ ಬರೆದು ನಿರ್ದೇಶಿಸಿದರೆ, ಪುರುಷೋತ್ತಮ ನಿರ್ಮಾಣ ಮಾಡುತ್ತಿದ್ದಾರೆ.

    ಭಾರಿ ಬೆಂಕಿ ಅನಾಹುತ: ಕನಿಷ್ಠ 26 ಮಂದಿ ಸಾವು, ಸುಮಾರು 40 ಜನರಿಗೆ ಗಾಯ..

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts