More

    ಕಾಡಾನೆಗಳ ಹಾವಳಿಗೆ ಮುಸುಕಿನ ಜೋಳ ನಾಶ

    ಬೇಲೂರು: ತಾಲೂಕಿನ ಕೋಗಿಲಮನೆ ಗ್ರಾಮದಲ್ಲಿ ಕಾಡಾನೆಗಳ ಉಪಟಳದಿಂದ ಜಮೀನಿನಲ್ಲಿ ಬೆಳೆದಿದ್ದ ಮುಸುಕಿನ ಜೋಳ, ಬೆಳೆಗೆ ನೀರು ಹಾಯಿಸಲು ಅಳವಡಿಸಿದ್ದ ಪೈಪ್‌ಗಳನ್ನೆಲ್ಲ ತುಳಿದು ನಾಶಪಡಿಸಿವೆ.

    ತಾಲೂಕಿನ ವಿವಿಧ ಗ್ರಾಮಗಳಲ್ಲಿ ಬೀಡುಬಿಟ್ಟು ಉಪಟಳ ನೀಡುತ್ತಿದ್ದ ಕಾಡಾನೆಗಳನ್ನು ಅರಣ್ಯ ಇಲಾಖೆ ಸೆರೆ ಹಿಡಿಯುವ ಕಾರ್ಯಾಚರಣೆ ನಡೆಸುತ್ತಿದ್ದರೆ, ಇತ್ತ ಮತ್ತೊಂದು ಕಾಡಾನೆಗಳ ಹಿಂಡು ಉಪಟಳ ನೀಡುತ್ತಿದೆ. ಮುಸುಕಿನ ಜೋಳ, ಅಡಕೆ, ತೆಂಗು ನಾಶವಾಗಿದೆ. ಇದರಿಂದ ಮಳೆ ಕೊರತೆ ನಡುವೆಯೂ ಬೆಳೆ ಬೆಳೆದಿದ್ದ ರೈತರು ಆತಂಕಕ್ಕೀಡಾಗಿದ್ದಾರೆ. ಜತೆಗೆ ಈ ಕಾಡಾನೆಗಳು ಒಂದು ಗ್ರಾಮದಿಂದ ಮತ್ತೊಂದು ಗ್ರಾಮಕ್ಕೆ ತೆರಳುತ್ತಿರುವುದರಿಂದ ರೈತರು ಕಂಗಾಲಾಗಿದ್ದಾರೆ.

    ಕೋಗಿಲಮನೆ ಗ್ರಾಮದ ರೈತ ಲಕ್ಷ್ಮಣ ಹಾಗೂ ವಿರೂಪಾಕ್ಷ ಮಾತನಾಡಿ, ನಮ್ಮ ಜಮೀನಿನಲ್ಲಿ ಜೋಳ ಹಾಗೂ ಮಿಶ್ರ ಬೆಳೆಯಾಗಿ ಅಡಕೆ ಗಿಡಗಳನ್ನು ಹಾಕಿದ್ದೆವು. ಸುಮಾರು ಸಾವಿರ ಗಿಡಗಳನ್ನು ನೆಟ್ಟು ಮೂರು ವರ್ಷದಿಂದ ಕಾಪಾಡಿಕೊಂಡು ಬಂದಿದ್ದೇವು. ನೀರಾವರಿಗೋಸ್ಕರ ಲಕ್ಷಾಂತರ ರೂ. ಖರ್ಚು ಮಾಡಿ ಪೈಪ್‌ಲೈನ್ ಮಾಡಿಸಿದ್ದೇವೆ. ಆದರೆ ಕಾಡಾನೆಗಳು ಹಗಲು, ರಾತ್ರಿ ಎನ್ನದೆ ಜಮೀನಿಗೆ ನುಗ್ಗಿ ನಾಶ ಮಾಡಿವೆ. ಜಮೀನಿಗೆ ನೀರು ಹರಿಸಲು ಅಳವಡಿಸಿದ್ದ ಪೈಪ್‌ಗಳನ್ನು ಸಹ ತುಳಿದು ನಾಶ ಪಡಿಸಿದ್ದು, ಸಂಬಂಧಿಸಿದ ಅರಣ್ಯ ಇಲಾಖೆ ಅಧಿಕಾರಿಗಳು ಕಾಡಾನೆಗಳನ್ನು ಸೆರೆ ಹಿಡಿದು ಸ್ಥಳಾಂತರಿಸಬೇಕು. ಜತೆಗೆ ಬೆಳೆ ನಷ್ಟಕ್ಕೆ ಪರಿಹಾರ ಒದಗಿಸಬೇಕು ಎಂದು ಒತ್ತಾಯಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts