More

    ಕಾಡಾನೆಗಳಿಂದ ಕಾಫಿ ಹಣ್ಣು, ಕಾಳುಮೆಣಸು ನಾಶ


    ಶ್ರೀಮಂಗಲ: ದ.ಕೊಡಗಿನ ಶ್ರೀಮಂಗಲ ವಲಯ ಅರಣ್ಯ ವ್ಯಾಪ್ತಿಯಲ್ಲಿ ಕಾಡಾನೆ ಹಿಂಡುಗಳು ಗ್ರಾಮಗಳಲ್ಲಿ ಬೀಡು ಬಿಟ್ಟಿದ್ದು ಕಾಫಿ ಕೊಯ್ಲು ಸಮಯದಲ್ಲಿ ಬೆಳೆಗಳನ್ನು ನಾಶ ಮಾಡಿವೆ.

    ಶ್ರೀಮಂಗಲ ವ್ಯಾಪ್ತಿಯ ಬೀರುಗ-ಕುರ್ಚಿ ಗ್ರಾಮದಲ್ಲಿ ಕಾಡಾನೆಗಳ ಹಿಂಡುಗಳು ಕಾಫಿತೋಟದಲ್ಲಿ ಸೇರಿಕೊಂಡು ಅಪಾರ ಪ್ರಮಾಣದಲ್ಲಿ ನಷ್ಟಗೊಳಿಸಿವೆ. ಗ್ರಾಮದ ಅಜ್ಜಮಾಡ ಮಂದಣ್ಣ ಅವರ ತೋಟದಲ್ಲಿ ಸೇರಿಕೊಂಡಿರುವ ಕಾಡಾನೆಗಳು ಕಾಫಿ ಹಣ್ಣುಗಳನ್ನು ತಿಂದು, ಕಾಫಿ ಗಿಡಗಳನ್ನು ತುಳಿದು, ಮುರಿದಿವೆ. ಅಲ್ಲದೆ ಕಾಳುಮೆಣಸು ಮತ್ತು ಅಡಕೆ ಮರಗಳನ್ನೂ ಮುರಿದಿವೆ.

    ಇದರಿಂದ ಬೆಳೆಗಾರ ಮಂದಣ್ಣ ಅವರು ತೀವ್ರ ಬೇಸರ ವ್ಯಕ್ತಪಡಿಸಿದ್ದು, ಅತಿವೃಷ್ಟಿ ಹಾಗೂ ಪ್ರಾಕೃತಿಕ ವಿಕೋಪದಿಂದ ಸಾಕಷ್ಟು ಬೆಳೆ ನಷ್ಟವಾಗಿದ್ದು ಇದೀಗ ಕಾಡಾನೆಗಳು ನಷ್ಟಗೊಳಿಸುತ್ತಿರುವುದು ದಿಕ್ಕುತೋಚದಂತಾಗಿದೆ ಎಂದು ಅಳಲು ತೋಡಿಕೊಂಡಿದ್ದಾರೆ.

     

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts