More

    ಬಿಳಿ ಜೋಳಕ್ಕೂ ಲದ್ದಿ ಹುಳು ಭಾದೆ

    ರೋಣ: ಸತತ ಮೂರ್ನಾಲ್ಕು ವರ್ಷಗಳ ಬರ ಹಾಗೂ ಕರೊನಾ ಹಾವಳಿಯು ತಾಲೂಕಿನ ರೈತರನ್ನು ಆರ್ಥಿಕವಾಗಿ ಹಿಂಡಿ ಹಿಪ್ಪೆ ಮಾಡಿದೆ. ಈ ಎಲ್ಲದರ ನಡುವೆಯೂ ರೈತರು ಬಿತ್ತನೆ ಮಾಡಿದ ಬಿಳಿ ಜೋಳದ ಬೆಳೆಗೆ ಲದ್ದಿಹುಳದ ಭಾದೆ ಕಂಡು ಬಂದಿದೆ. ಇದರಿಂದಾಗಿ ಬಿತ್ತಿದ ಬೆಳೆ ಕೈಗೆ ಬರುತ್ತದೆಯೋ ಇಲ್ಲವೋ ಎಂಬುದು ರೈತರ ಚಿಂತೆಯಾಗಿದೆ.

    ಇಷ್ಟು ದಿನ ಗೋವಿನಜೋಳದಲ್ಲಿ ಹಾನಿಕಾರಿಯಾಗಿದ್ದ ಲದ್ದಿಹುಳ ಈಗ ಬಿಳಿ ಜೋಳದ ಮೇಲೆಯೂ ತನ್ನ ಆಟ ಶುರು ಮಾಡಿದೆ. ಈ ಕೀಟವು ಬೆಳೆಯ ಸುಳಿಯಲ್ಲಿ ವಾಸವಾಗಿರುತ್ತದೆ. ಎಲ್ಲ ಕಾಂಡಗಳನ್ನು ತಿಂದು ಹಾಕುತ್ತದೆ. ಈ ಹುಳು ಒಮ್ಮೆ ಬಿದ್ದರೆ ಅದು ಇಳುವರಿಯಲ್ಲಿ ಗಣನೀಯ ವ್ಯತ್ಯಾಸ ತರುತ್ತದೆ ಎನ್ನುತ್ತಾರೆ ರೋಣದ ರೈತ ಸಿದ್ದಪ್ಪ ನವಲಗುಂದ.

    ತೇವಾಂಶ, ಹವಾಮಾನ ವೈಪರಿತ್ಯ ಸೇರಿದಂತೆ ಇತರೆ ಕಾರಣಗಳಿಂದಾಗಿ ತಾಲೂಕಿನ ಕೆಲ ಭಾಗದಲ್ಲಿ ಬಿಳಿ ಜೋಳಕ್ಕೆ ಲದ್ದಿಹುಳು ಭಾದೆ ಕಾಣಿಸಿಕೊಂಡಿದ್ದು, ರೈತರು ಹೆಚ್ಚಿನ ಮಾಹಿತಿಗಾಗಿ ರೈತ ಸಂಪರ್ಕ ಕೇಂದ್ರವನ್ನು ಸಂರ್ಪಸುವಂತೆ ಕೃಷಿ ಇಲಾಖೆಯ ಸಹಾಯಕ ನಿರ್ದೇಶಕ ರವೀಂದ್ರಗೌಡ ಪಾಟೀಲ ಹೇಳಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts