More

    ಕೃಷಿ ಮೇಳದಲ್ಲಿ ದೇಸಿ ಕ್ರೀಡೆ ಗಮ್ಮತ್ತು

    ಮಂಡ್ಯ: ಮಾನಸಿಕ, ದೈಹಿಕ ಶಕ್ತಿಗೆ ಪೂರಕವಾಗಿದ್ದ ದೇಸಿ ಕ್ರೀಡೆಗಳನ್ನು ನೆನಪಿಸುವ ಹಾಗೂ ಅದರ ಸೊಬಗನ್ನು ಯುವಜನತೆಗೆ ಪರಿಚಯಿಸುವ ಸಲುವಾಗಿ ‘ವಿಜಯವಾಣಿ’ ದಿನಪತ್ರಿಕೆ ಹಾಗೂ ‘ದಿಗ್ವಿಜಯ’ ನ್ಯೂಸ್ ಕೃಷಿ ಮೇಳದಲ್ಲಿ ಗ್ರಾಮೀಣ ಕ್ರೀಡೆಗಳನ್ನು ಆಯೋಜಿಸಿದೆ.

    ಫೆ.21ರಂದು ಮೈಸೂರು ಮಹಾರಾಜ ಕಾಲೇಜಿನ ಮೈದಾನದಲ್ಲಿ ಮಧ್ಯಾಹ್ನ 3ಗಂಟೆಗೆ ದೇಸಿ ಕ್ರೀಡೆಗಳಿಗೆ ಚಾಲನೆ ಸಿಗಲಿದ್ದು, ಪುರುಷರಿಗೆ ಮೂಟೆ ಹೊರುವ ಸ್ಪರ್ಧೆ, ಗೋಣಿ ಚೀಲದ ಓಟ, ಹಿಮ್ಮುಖ ಓಟ, ಬಂಡಿ ಹೊಡೆಯುವ ಸ್ಪರ್ಧೆ, ಬುಗರಿ, ಗುಂಪು ಸ್ಪರ್ಧೆಗಳಾದ ಹಗ್ಗಜಗ್ಗಾಟ, ಲಗೋರಿ, ಕುದುರೆ ಓಟ ಸ್ಪರ್ಧೆಗಳಿರುತ್ತವೆ.

    ಕೃಷಿ ಮೇಳದಲ್ಲಿ ದೇಸಿ ಕ್ರೀಡೆ ಗಮ್ಮತ್ತುಫೆ.22ರ ಬೆಳಗ್ಗೆ 10ಗಂಟೆಗೆ ಮಹಿಳೆಯರಿಗೆ ರಂಗೋಲಿ ಸ್ಪರ್ಧೆ, ಮಧ್ಯಾಹ್ನ 3ಗಂಟೆಗೆ ರಾಗಿ ಬೀಸುವ ಸ್ಪರ್ಧೆ, ನೀರು ತುಂಬಿದ ಬಿಂದಿಗೆ ಹೊತ್ತು ಓಡುವ ಸ್ಪರ್ಧೆ, ಒಂಟಿ ಕಾಲಿನ ಓಟ, ಬಂಡಿ ಹೊಡೆಯುವ ಸ್ಪರ್ಧೆ, ಅವರೆಕಾಯಿ ಬಿಡಿಸುವ ಸ್ಪರ್ಧೆ, ಗೋಣಿ ಚೀಲದ ಓಟ, ಗುಂಪು ಸ್ಪರ್ಧೆಗಳಲ್ಲಿ ಹಗ್ಗ ಜಗ್ಗಾಟ, ಕೂಸುಮರಿ ಓಟದ ಸ್ಪರ್ಧೆಗಳಿರುತ್ತವೆ. ಫೆ.23ರಂದು ಬೆಳಗ್ಗೆ 10ಗಂಟೆಗೆ ರಾಗಿ ಮುದ್ದೆ, ಬಾಳೆ ಹಣ್ಣು, ಕಬ್ಬು ತಿನ್ನುವ ಸ್ಪರ್ಧೆ ಇರುತ್ತದೆ. ಪಾಲ್ಗೊಂಡ ಎಲ್ಲ ಸ್ಪರ್ಧಾಳುಗಳಿಗೆ ಪ್ರಮಾಣಪತ್ರ ವಿತರಿಸಲಾಗುತ್ತದೆ. ವೈಯಕ್ತಿಕ ಹಾಗೂ ಗುಂಪು ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಪ್ರಥಮ, ದ್ವಿತೀಯ ಹಾಗೂ ತೃತೀಯ ಬಹುಮಾನ (ನಗದು, ಟ್ರೋಫಿ) ಇರುತ್ತದೆ. ವೈಯಕ್ತಿಕ ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಪ್ರಥಮ ಬಹುಮಾನ 1000 ರೂ.ದ್ವಿತೀಯ 750 ರೂ.ಹಾಗೂ ತೃತೀಯ 500 ರೂ.ಇರುತ್ತದೆ. ರಾಜ್ಯದ ಯಾವುದೇ ಜಿಲ್ಲೆಯ ಜನತೆ ಪಾಲ್ಗೊಳ್ಳಬಹುದು. ಆಸಕ್ತರು ನಿಗದಿತ ಸಮಯಕ್ಕಿಂತ ಅರ್ಧ ಗಂಟೆ ಮುಂಚಿತವಾಗಿ ಆಗಮಿಸಿ ತಮ್ಮ ಹೆಸರು ನೋಂದಾಯಿಸಿಬಹುದು. ಯಾವುದೇ ಪ್ರವೇಶ ಶುಲ್ಕವಿರುವುದಿಲ್ಲ. ಹೆಚ್ಚಿನ ಸಂಖ್ಯೆಯಲ್ಲಿ ರೈತರು ಹಾಗೂ ಸಾರ್ವಜನಿಕರು ಪಾಲ್ಗೊಂಡು ತಮ್ಮ ಸಾಮರ್ಥ್ಯ ಪ್ರದರ್ಶನ ಮಾಡುವುದರ ಜತೆಗೆ ಪ್ರಶಸ್ತಿ ಗೆಲ್ಲಲು ಇದು ಸುವರ್ಣಾವಾಕಾಶ.

    ವಿಶೇಷ ಸೂಚನೆ: ರಂಗೋಲಿ ಸ್ಪರ್ಧೆಯಲ್ಲಿ ಪಾಲ್ಗೊಳ್ಳುವವರು ಪರಿಕರಗಳನ್ನು ತಾವೇ ತರಬೇಕು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts