More

    ದೇಶ ವಿರೋಧಿಗಳನ್ನು ಮಟ್ಟಹಾಕಿ, ಕಠಿಣ ಕಾನೂನು ಅಗತ್ಯ, ದುರುಳರಿಗೆ ತಕ್ಕ ಶಾಸ್ತಿ ಮಾಡಲು ಪಟ್ಟು

    ದೊಡ್ಡಬಳ್ಳಾಪುರ: ದೇಶದಲ್ಲಿ ಪದೇಪದೆ ಕೇಳಿ ಬರುತ್ತಿರುವ ದೇಶ ವಿರೋಧಿ ಘೋಷಣೆ ಹಾಗೂ ದೇಶ ವಿರೋಧಿ ಚಟುವಟಿಕೆಗಳ ಸದ್ದಡಗಿಸಲು ಕೇಂದ್ರ ಸರ್ಕಾರ ತ್ವರಿತವಾಗಿ ಕಠಿಣ ಕಾನೂನು ರೂಪಿಸಬೇಕು ಎಂದು ಕರವೇ(ಪ್ರವಿಣ್ ಶೆಟ್ಟಿ ಬಣ)ದ ಕಾರ್ಯದರ್ಶಿ ರಾಜಘಟ್ಟ ರವಿ ಒತ್ತಾಯಿಸಿದರು.

    ಪಾಕಿಸ್ತಾನದ ಪರ ಘೋಷಣೆ ಕೂಗುವ ದೇಶ ವಿರೋಧಿಗಳ ಗಡಿಪಾರಿಗೆ ಒತ್ತಾಯಿಸಿ ನಗರ ಹಳೇ ಬಸ್ ನಿಲ್ದಾಣದಲ್ಲಿನ ಡಾ.ಅಂಬೇಡ್ಕರ್ ಪ್ರತಿಮೆ ಮುಂದೆ ವಿವಿಧ ಸಂಘಟನೆಗಳಿಂದ ಶುಕ್ರವಾರ ಏರ್ಪಡಿಸಿದ್ದ ಪ್ರತಿಭಟನೆಯಲ್ಲಿ ಮಾತನಾಡಿದರು.

    ಸಿಎಎ ವಿರೋಧ, ಕಾಶ್ಮೀರದ ವಿಚಾರದ ಕುರಿತಂತೆ ಕೇಂದ್ರ ಸರ್ಕಾರವನ್ನು ದೂಷಿಸುವ ನೆಪದಲ್ಲಿ ಪಾಕಿಸ್ತಾನ ಪ್ರೇರಿತವಾಗಿ ಕೆಲ ಬುದ್ಧಿಜೀವಗಳು, ಎಡಪಂಥೀಯವಾದಿಗಳು ಯುವ ಸಮುದಾಯವನ್ನು ದೇಶದ ವಿರುದ್ಧ ಎತ್ತಿಕಟ್ಟುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
    ದೇಶ ವಿರೋಧಿ ಚಟುವಟಿಕೆಗೆ ಪರೋಕ್ಷವಾಗಿ ಪ್ರೋತ್ಸಾಹ ನೀಡಿರುವ ಆರೋಪ ವ್ಯಾಪಕವಾಗಿ ಕೇಳಿಬರುತ್ತಿದೆ. ಹುಬ್ಬಳಿಯಲ್ಲಿ ಯುವಕರ ಪಾಕಿಸ್ತಾನದ ಪರ ಘೋಷಣೆ, ಬೆಂಗಳೂರಿನಲ್ಲಿ ಅಮೂಲ್ಯ ಲಿಯೋನಾ ಬಹಿರಂಗವಾಗಿಯೇ ಪಾಕಿಸ್ತಾನ ಪರ ೋಷಣೆ ಕೂಗಿರುವುದು ದೇಶ ವಿರೋಧಿ ಮನಸ್ಥಿತಿ ಯಾವ ಮಟ್ಟದಲ್ಲಿದೆ ಎಂಬುದ ಸಾಕ್ಷಿಯಾಗಿದೆ ಎಂದರು.

    ಕಾನೂನಿನಲ್ಲಿ ದೇಶ ವಿರೋಧಿ ಕಾರ್ಯಕ್ಕೆ ಕಠಿಣ ಕ್ರಮ ಇಲ್ಲ ಎಂಬ ಅಸಡ್ಡೆಯೇ ಪದೇಪದೆ ಇಂತಹ ಘಟನೆ ಮರುಕಳಿಸಲು ಕಾರಣ. ಈ ಕುರಿತು ಕೇಂದ್ರ ಸರ್ಕಾರ ಗಂಭೀರವಾಗಿ ಚಿಂತಿಸಿ ತ್ವರಿತವಾಗಿ ಕಠಿಣ ಕಾನೂನು ರೂಪಿಸಿ ದೇಶ ವಿರೋಧಿ ಚಟುವಟಿಕೆಗೆ ಕಡಿವಾಣ ಹಾಕಬೇಕು ಎಂದು ಒತ್ತಾಯಿಸಿದರು.

    ಕನ್ನಡಪಕ್ಷದ ತಾಲೂಕು ಅಧ್ಯಕ್ಷ ಸಂಜೀವ್ ನಾಯಕ್ ಮಾತನಾಡಿ, ಬಹು ವರ್ಷಗಳ ಮಹದಾಯಿ, ಕಳಸಾ ಬಂಡೂರಿ ನಾಲೆ ನಿರ್ಮಾಣ ಕುರಿತಂತೆ ನಡೆದ ಹೋರಾಟಕ್ಕೆ ನ್ಯಾಯಾಲಯ ಅಧಿಸೂಚನೆ ನಿರ್ದೇಶನ ನೀಡುವ ಮೂಲಕ ಗೆಲುವನ್ನು ನೀಡಿದ್ದು ಇಂದು ಸಂಭ್ರಮಾಚರಣೆ ಮಾಡಬೇಕಿತ್ತು, ಆದರೆ ವಿಪರ್ಯಾಸ ದೇಶ ವಿರೋಧಿಗಳ ವಿರುದ್ಧ ಪ್ರತಿಭಟನೆ ಮಾಡಬೇಕಾಗಿ ಬಂದಿದೆ. ದೇಶ ವಿರೋಧಿ ಮನಸ್ಥಿತಿ ಉಳ್ಳವರ ಗಡಿಪಾರು ಮಾಡಬೇಕೆಂದರು.

    ಕನ್ನಡ ಪಕ್ಷದ ಪ್ರಧಾನ ಕಾರ್ಯದರ್ಶಿ ಡಿ.ಪಿ.ಆಂಜನೇಯಾ, ನಗರ ಉಪಾಧ್ಯಕ್ಷ ವಿ.ಪರಮೇಶ್, ಶಿವರಾಜ್‌ಕುಮಾರ್ ಸೇವಾ ಸಮಿತಿ ಅಧ್ಯಕ್ಷ ರಮೇಶ್, ದಲಿತ ಸಂಘರ್ಷ ಸಮಿತಿ ಜಿಲ್ಲಾ ಸಂಚಾಲಕ ರಾಜುಸಣ್ಣಕ್ಕಿ, ಕಾನೂನು ಘಟಕದ ಅಧ್ಯಕ್ಷ ಆನಂದ್ ಕುಮಾರ್ ಮಾತನಾಡಿದರು.
    ಕರವೇ(ಪ್ರವಿಣ್ ಶೆಟ್ಟಿ ಬಣ) ಜಿಲ್ಲಾ ಅಧ್ಯಕ್ಷ ರಮೇಶ್‌ವಿರಾಜ್, ತಾಲೂಕು ಅಧ್ಯಕ್ಷ ಹಮಾಮ್ ವೆಂಕಟೇಶ್, ಪ್ರಧಾನ ಕಾರ್ಯದರ್ಶಿ ಎಸ್.ಎಲ್.ಎನ್ ವೇಣು, ಗೌರವ ಅಧ್ಯಕ್ಷ ಪು.ಮಹೇಶ್, ನಗರ ಅಧ್ಯಕ್ಷ ಶ್ರೀನಗರ ಬಷೀರ್, ಶಿವರಾಜ್ ಕುಮಾರ್ ಸೇನಾಸಮಿತಿ ಕಾರ್ಯದರ್ಶಿ ಗುರುರಾಜ್, ಕನ್ನಡಪಕ್ಷದ ನಗರ ಕಾರ್ಯದರ್ಶಿ ವೆಂಕಟೇಶ್, ಸಂಚಾಲಕ ಪ್ರಕಾಶ್ ರಾವ್ ಮತ್ತಿತರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts