More

    ಕಾಯುವವನೇ ಕಳ್ಳನಾದಾಗ ಇನ್ನಾರನ್ನು ನಂಬೋದು ಶಿವಾ…!!

    ಗುರುಗ್ರಾಮ: ಬೇಲಿಯೇ ಎದ್ದು ಹೊಲ ಮೇಯ್ದಂತೆ.. ಇಲ್ಲೊಬ್ಬ ಉಪ ಜೈಲು ಅಧೀಕ್ಷಕ, ಜೈಲುವಾಸಿಗಳ ಮೇಲೆ ಕಣ್ಗಾವಲಿಡುವ ಬದಲು ಡ್ರಗ್ಸ್, ಫೋನ್, ಇತ್ಯಾದಿ ನಿಷಿದ್ಧ ವಸ್ತುಗಳನ್ನು ಪೂರೈಸುತ್ತಿದ್ದ.
    ಕೈದಿಗಳಿಗೆ ಮೊಬೈಲ್ ಫೋನ್ ಮತ್ತು ಡ್ರಗ್ಸ್ ಪೂರೈಸಿದ ಆರೋಪದ ಮೇಲೆ ಗುರುಗ್ರಾಮ್ ಕಾರಾಗೃಹದ ಆ ಉಪ ಜೈಲು ಅಧೀಕ್ಷಕನನ್ನು ಗುರುವಾರ ಪೊಲೀಸರು ಬಂಧಿಸಿದ್ದಾರೆ.
    ಗುರುವಾರ ಮಧ್ಯಾಹ್ನ ಪೊಲೀಸರು ಭೋಂಡ್ಸಿ ಜೈಲಿನಲ್ಲಿ ದಾಳಿ ನಡೆಸಿ ಸಿಮ್ ಕಾರ್ಡ್‌ಗಳನ್ನು ಮತ್ತು ಮಾದಕ ದ್ರವ್ಯಗಳನ್ನು ವಶಪಡಿಸಿಕೊಂಡಿದ್ದಾರೆ.

    ಇದನ್ನೂ ಓದಿ:  ಕುತಂತ್ರಿ ಪಾಕ್​​ನ ಕದನ ವಿರಾಮ ಉಲ್ಲಂಘನೆಯಿಂದ ಮಹಿಳೆಗೆ ಗಾಯ

    ದಾಳಿಯ ನಂತರ ಆತನೊಂದಿಗೆ ಮತ್ತೊಬ್ಬ ಆರೋಪಿಯನ್ನೂ ಪೊಲೀಸರು ಬಂಧಿಸಿದ್ದಾರೆ
    ಉಪ ಜೈಲು ಅಧೀಕ್ಷಕ ದರಮ್​​ಬೀರ್ ಚೌಟಾಲಾ ಮತ್ತು ಮತ್ತು ರವಿ ಎಂಬುವವರ ಬಳಿಯಿದ್ದ ಡ್ರಗ್ಸ್ ಮತ್ತು ಸಿಮ್ ಕಾರ್ಡ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ. ಆರೋಪಿಗಳು ಕೈದಿಗಳಿಂದ ಹಣ ಪಡೆದು ಅವರಿಗೆ ನಿಷಿದ್ಧ ವಸ್ತುಗಳನ್ನು ಪೂರೈಸುತ್ತಿದ್ದರು.
    ಗುರುಗ್ರಾಮ್ ಪೊಲೀಸ್ ವಕ್ತಾರರು ಮಾತನಾಡಿ, ಭೋಂಡ್ಸಿ ಜೈಲಿನಲ್ಲಿರುವ ಕೈದಿಗಳಿಂದ ಸಿಮ್ ಕಾರ್ಡ್‌ಗಳನ್ನು ವಶಪಡಿಸಿಕೊಂಡಿದ್ದು ಅವರ ಮೇಲೆ ಕಣ್ಣಿಡಲು ರಹಸ್ಯ ಕಾರ್ಯ ನಡೆದಿದೆ ಎಂದು ಹೇಳಿದರು.
    ಕೈದಿಗಳಿಗೆ ನಿಷಿದ್ಧ ವಸ್ತುಗಳ ಪೂರೈಕೆಯಾಗುತ್ತಿರುವ ಬಗ್ಗೆ ಮಾಹಿತಿ ಸಿಕ್ಕ ನಂತರ ಪೊಲೀಸರು ಫೋನ್, ಸಿಮ್ ಕಾರ್ಡ್ ಮತ್ತು ಡ್ರಗ್ಸ್ ವಶಪಡಿಸಿಕೊಂಡಿದ್ದಾರೆ.
    ಪೊಲೀಸರು ಆರೋಪಿಯ ಮನೆ ಮೇಲೆ ದಾಳಿ ನಡೆಸಿ 4 ಜಿ 11 ಸಿಮ್‌ಗಳು ಮತ್ತು 230 ಗ್ರಾಂ ಹ್ಯಾಶ್ (ಡ್ರಗ್) ಅನ್ನು ವಶಪಡಿಸಿಕೊಂಡಿದ್ದಾರೆ.

    ಇದನ್ನೂ ಓದಿ:  ಜಮ್ಮು-ಕಾಶ್ಮೀರದ ಬಂಡಿಪೋರಾಕ್ಕೆ ಬರಲಿದೆ ಜವಾಹರ್ ನವೋದಯ ವಿದ್ಯಾಲಯ

    ವಾಟ್ಸಾಪ್ ಮತ್ತು ಇತರ ಸಾಮಾಜಿಕ ಮಾಧ್ಯಮ ಅಪ್ಲಿಕೇಶನ್‌ಗಳನ್ನು ನಿರ್ವಹಿಸಲು ಕೈದಿಗಳಿಗೆ ಆರೋಪಿಗಳು ಮೊಬೈಲ್ ಫೋನ್ ನೀಡುತ್ತಿದ್ದರು ಎಂಬುದು ತನಿಖೆಯಿಂದ ತಿಳಿದುಬಂದಿದೆ.
    ಕೈದಿಗಳು ಮತ್ತು ಆರೋಪಿಯ ಬಳಿ 10 ಲಕ್ಷ ರೂ.ಮೌಲ್ಯದ ಡ್ರಗ್ಸ್​​​ನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಆರೋಪಿಗಳೊಂದಿಗಿನ ವ್ಯವಹಾರ ಬಯಲಿಗೆಳೆಯಲು ಅವರು ಕೈದಿಗಳ ವಿಚಾರಣೆ ನಡೆಸುತ್ತಿದ್ದಾರೆ.

    ಆತ ಪತ್ನಿಯನ್ನು ಕೊಲೆಮಾಡಿ ನಾಲೆಗೆ ಎಸೆದ.. ಕಾರಣವೇನು?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts