More

    ಮೇಲ್ಮನೆಗೆ ಉಪಮುಖ್ಯಮಂತ್ರಿ ಸವದಿ ಆಯ್ಕೆ

    ಬೆಂಗಳೂರು: ಕುತೂಹಲಕಾರಿ ಬೆಳವಣಿಗೆಗಳಿಗೆ ಸಾಕ್ಷಿಯಾದ ವಿಧಾನಪರಿಷತ್ ಉಪಚುನಾವಣೆಯಲ್ಲಿ ಡಿಸಿಎಂ ಲಕ್ಷ್ಮಣ ಸವದಿ ಗೆಲ್ಲಲು ಬೇಕಾಗಿದ್ದ 113 ಮತಗಳನ್ನು ಗಳಿಸಿ, ಸೋಮವಾರ ಆಯ್ಕೆಯಾದರು. ಈ ಗೆಲುವಿನೊಂದಿಗೆ ಅವರ ಡಿಸಿಎಂ ಹುದ್ದೆ ಅಭಾದಿತವಾಯಿತು.

    ಒಟ್ಟು 120 ಮತಗಳು ಚಲಾವಣೆಯಾಗಿದ್ದು, ಬಿಜೆಪಿ ಅಭ್ಯರ್ಥಿ ಲಕ್ಷ್ಮಣ ಸವದಿ 113 ಮತ ಗಳಿಸಿದರು. ಪ್ರಾಶಸ್ಱದ ಮತದಾನದಲ್ಲಿ ಕ್ರಮವಾಗಿ 1, 2 ಎಂದು ನಮೂದಿಸುವ ಬದಲಿಗೆ ಸರಿ ಹಾಗೂ ತಪು್ಪ ಗುರುತು ಹಾಕಿದ್ದರಿಂದ 7 ಮತಗಳು ಅಸಿಂಧುವಾದವು ಎಂದು ಚುನಾವಣಾಧಿಕಾರಿ ಕೆ.ಆರ್.ಮಹಾಲಕ್ಷ್ಮಿ ತಿಳಿಸಿದರು. ಅಸಿಂಧುವಾದ ಮತಗಳ ಪೈಕಿ ಆರು ಸದಸ್ಯರು ಸರಿ ಗುರುತು ಹಾಕಿದ್ದರೆ, ಒಬ್ಬರು ತಪು್ಪ ಹಾಕಿದ್ದಾರೆ. ವಿಧಾನಸಭೆ ಒಟ್ಟು ಬಲದ ಪ್ರಕಾರ ಸವದಿ ಗೆಲ್ಲಲು ಬೇಕಿರುವ 113 ಮತಗಳನ್ನಷ್ಟೇ ಪಡೆದಿದ್ದು, 7 ಮತಗಳು ತಿರಸ್ಕೃತವಾಗಿದ್ದರಿಂದ ಹೆಚ್ಚಿನ ಮತ ಗಳಿಕೆಯ ಜಯ ಸಾಧ್ಯವಾಗಲಿಲ್ಲ. ಕಾಂಗ್ರೆಸ್​ನ ರಿಜ್ವಾನ್ ಅರ್ಷದ್ ವಿಧಾನಸಭೆ ಸದಸ್ಯರಾಗಿ ಆಯ್ಕೆಯಾದ ಹಿನ್ನೆಲೆ ಬಾಕಿ ಉಳಿದ 2022ರ ಜೂನ್ 14ರ ಅವಧಿಗೆ ಉಪಚುನಾವಣೆ ನಡೆದಿದ್ದು, ಅಖಾಡದಲ್ಲಿ ಉಳಿದಿದ್ದ ಪಕ್ಷೇತರ ಅಭ್ಯರ್ಥಿ ಅನಿಲ್​ಕುಮಾರ್ ಸ್ಪರ್ಧೆಯಿಂದ ನಿವೃತ್ತರಾಗಿದ್ದರು. ಆದರೆ, ಮತಪತ್ರದಲ್ಲಿ ಎರಡು ಹೆಸರುಗಳು ನಮೂದಾಗಿದ್ದರಿಂದ ಮತದಾನವಾಗಿದೆ.

    ರಾಮದಾಸ್ ಗೈರು: ಅನಾರೋಗ್ಯ ಕಾರಣಕ್ಕೆ ಬಿಜೆಪಿ ಶಾಸಕ ಎಸ್.ಎ.ರಾಮದಾಸ್ ಗೈರಾಗಿದ್ದರು. ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಸೇರಿ ಬಿಜೆಪಿಯ 116, ಪಕ್ಷೇತರ ಇಬ್ಬರು, ಜೆಡಿಎಸ್ ಹಾಗೂ ಬಿಎಸ್ಪಿಯ ತಲಾ ಒಬ್ಬ ಸದಸ್ಯರು ಹಕ್ಕು ಚಲಾಯಿಸಿದರು.

    ಅಚ್ಚರಿಯ ಬೆಳವಣಿಗೆ: ಜೆಡಿಎಸ್​ನ ಜಿ.ಟಿ.ದೇವೇ ಗೌಡ, ಪಕ್ಷೇತರ ಶಾಸಕ ಶರತ್ ಬಚ್ಚೇಗೌಡ ಹಾಗೂ ಬಿಎಸ್ಪಿಯ ಎನ್.ಮಹೇಶ್ ಮತ ಚಲಾಯಿಸುವ ಮೂಲಕ ಅಚ್ಚರಿ ಮೂಡಿಸಿದರು. ವಿಧಾನಸಭೆ ಮೊಗಸಾಲೆಯಲ್ಲಿ ಕುಳಿತಿದ್ದ ಸಿ.ಟಿ.ರವಿ, ‘ನಾನು ಮತ ಹಾಕಲು ಹೊರಟಿದ್ದೇನೆ. ನೀವು ಬರ್ತೀರಾ?’ ಎಂದು ಕೇಳುತ್ತಿದ್ದಂತೆಯೇ ಜೆಡಿಎಸ್​ನ ಜಿಟಿಡಿ ಸರ›ನೆ ಎದ್ದು ಮತಗಟ್ಟೆಯತ್ತ ಹೆಜ್ಜೆ ಹಾಕಿ, ಹಕ್ಕು ಚಲಾಯಿಸಿದರು.

    ಎಂಟಿಬಿ ಕೆಂಡ: ಶಾಸಕ ಪ್ರೀತಮ್ ಗೌಡ ಜತೆಗೆ ಬಂದ ಪಕ್ಷೇತರ ಶಾಸಕ ಶರತ್ ಬಚ್ಚೇಗೌಡ ಮತದಾನ ಮಾಡಿ ಹೋಗಿದ್ದೂ ಬಿಜೆಪಿ ಹೊರ-ಒಳಗೆ ಅನೇಕ ಸಂದೇಶಗಳನ್ನು ರವಾನಿಸಿತು. ಇದರಿಂದಾಗಿ ಮಾಜಿ ಸಚಿವ ಎಂ.ಟಿ.ಬಿ.ನಾಗರಾಜ್ ಮತ್ತಷ್ಟು ಕೆರಳಿ ಕೆಂಡವಾಗುವ ಸಾಧ್ಯತೆಗಳಿವೆ. ವಿಧಾನಸಭೆ ಉಪಚುನಾವಣೆಯಲ್ಲಿ ನನ್ನ ಸೋಲಿಗೆ ಕಾರಣರಾದ ಶರತ್, ಅವರ ತಂದೆ ಬಚ್ಚೇಗೌಡ ವಿರುದ್ಧ ಕ್ರಮಕೈಗೊಳ್ಳಿ ಎಂದು ಎಂಟಿಬಿ ಒತ್ತಾಯಿಸುತ್ತಲೇ ಇದ್ದಾರೆ.

    ಜೆಡಿಎಸ್ ಇರಿಸುಮುರಿಸು

    ಕಾಂಗ್ರೆಸ್ ಬೆಂಬಲದ ನಿರೀಕ್ಷೆಯಿಟ್ಟುಕೊಂಡು ಅನಿಲ್​ಕುಮಾರ್​ರನ್ನು ಪಕ್ಷೇತರ ಅಭ್ಯರ್ಥಿ ಯನ್ನಾಗಿ ಕಣಕ್ಕಿಳಿಸಿ ಜೆಡಿಎಸ್ ನಾಯಕರು ಕೈಸುಟ್ಟುಕೊಂಡಿದ್ದರು. ಇದೀಗ ಮಾಜಿ ಸಚಿವ ಜಿ.ಟಿ.ದೇವೇಗೌಡ ಮತದಾನ ಮಾಡಿರುವುದು ಪಕ್ಷದ ನಾಯಕರಿಗೆ ಇರಿಸುಮುರಿಸು ತಂದಿದೆ.

    ಜಿಟಿಡಿ ಇನ್ನೂ ನಮ್ಮಲ್ಲಿದ್ದಾರಾ? ಒಂದೊಂದು ಮಾತನಾಡುತ್ತಾರೆ, ಒಂದೊಂದು ತೀರ್ಮಾನ ತೆಗೆದುಕೊಳ್ಳುತಾರೆ.

    | ಎಚ್.ಡಿ.ಕುಮಾರಸ್ವಾಮಿ ಮಾಜಿ ಸಿಎಂ

    ಪಕ್ಷ ಯಾವುದೇ ನಿರ್ಧಾರ ಕೈಗೊಂಡಿರಲಿಲ್ಲ. ನಾನು ರೈತ ಪರ ಹಾಗೂ ಸಹಕಾರಿ ಕ್ಷೇತ್ರದ ನಾಯಕ ಲಕ್ಷ್ಮಣ ಸವದಿ ಅವರಿಗೆ ಮತ ಹಾಕಿದ್ದೇನೆ.

    | ಜಿ.ಟಿ.ದೇವೇಗೌಡ ಜೆಡಿಎಸ್ ಶಾಸಕ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts