More

    ನಿವೇಶನಕ್ಕೆ ಆಗ್ರಹಿಸಿ ಹಿನಾರಿ ಗ್ರಾಮದಲ್ಲಿ ದಿಢೀರ್ ಗುಡಿಸಲು ನಿರ್ಮಾಣ

    ಕಳಸ: ಕಳಸ ಗ್ರಾಪಂ ವ್ಯಾಪ್ತಿಯ ಹಿನಾರಿ ಗ್ರಾಮದಲ್ಲಿ ನಿವೇಶನ ಕಲ್ಪಿಸಲು ಶಾಸಕರು ನಿರ್ಲಕ್ಷ್ಯ ವಹಿಸಿದ್ದಾರೆ ಎಂದು ಅರೋಪಿಸಿ ನೂರಕ್ಕೂ ಹೆಚ್ಚು ನಿವೇಶನ ರಹಿತರು ದಿಢೀರ್ ಗುಡಿಸಲು ನಿರ್ವಿುಸಿ ಧರಣಿ ಆರಂಭಿಸಿದ್ದಾರೆ.

    ಗ್ರಾಪಂ ವ್ಯಾಪ್ತಿಯ ವಿವಿಧ ಗ್ರಾಮದ 110 ನಿವೇಶನ ರಹಿತರು ಸಾಮಾಜಿಕ ಕಾರ್ಯಕರ್ತ ಲಿಂಗಪ್ಪ ನೇತೃತ್ವದಲ್ಲಿ ಭಾನುವಾರ ಸಂಜೆ ಹಿನಾರಿ ಗ್ರಾಮದ ಸರ್ವೆ ನಂ.85ರ ಗೋಮಾಳ ಜಾಗದಲ್ಲಿ ದಿಢೀರ್ ಗುಡಿಸಲುಗಳನ್ನು ನಿರ್ವಿುಸಿದ್ದಾರೆ.

    ಸುದ್ದಿ ತಿಳಿದ ಕೂಡಲೇ ಅರಣ್ಯ ಇಲಾಖೆ ಅಧಿಕಾರಿಗಳು ಸ್ಥಳಕ್ಕೆ ಆಗಮಿಸಿ ಗುಡಿಸಲು ತೆರವಿಗೆ ಸೂಚಿಸಿದ್ದಾರೆ. ಇದಕ್ಕೆ ನಿವೇಶನ ರಹಿತರು ಒಪ್ಪದಿದ್ದಾಗ ಅರಣ್ಯ ಇಲಾಖೆ ಸಿಬ್ಬಂದಿ ಗುಡ್ಡದಲ್ಲಿದ್ದ ಕೆಲ ಗುಡಿಸಲುಗಳನ್ನು ಕಿತ್ತುಹಾಕಿದ್ದಾರೆ. ಈ ಬಗ್ಗೆ ಪ್ರಶ್ನಿಸಿದರೆ ಅರಣ್ಯ ಇಲಾಖೆ ಸಿಬ್ಬಂದಿ ಅವಾಚ್ಯ ಶಬ್ದಗಳಿಂದ ನಿಂದಿಸಿ ಮಹಿಳೆಯರ ಮೇಲೆ ದೌರ್ಜನ್ಯ ನಡೆಸಿದ್ದಾರೆ ಎಂದು ಸಾಮಾಜಿಕ ಕಾರ್ಯಕರ್ತ ಲಿಂಗಪ್ಪ ಆರೋಪಿಸಿದ್ದಾರೆ.

    ನಿವೇಶನ ರಹಿತರು ಗುಡಿಸಲು ನಿರ್ವಿುಸಿರುವ ಜಾಗ ಕಂದಾಯ ಭೂಮಿಯಾಗಿದೆ. ಯಾವುದೇ ಕಾರಣಕ್ಕೂ ಗುಡಿಸಲು ತೆರವು ಮಾಡುವುದಿಲ್ಲ. ಸ್ಥಳಕ್ಕೆ ಕಂದಾಯ ಅಧಿಕಾರಿಗಳು, ಜನಪ್ರತಿನಿಧಿಗಳು ಬಂದು ಪರಿಶೀಲನೆ ನಡೆಸಿ ಇದೇ ಜಾಗದಲ್ಲಿ ನಿವೇಶನಕ್ಕೆ ಜಾಗ ಗುರುತಿಸಬೇಕು ಎಂದು ಪಟ್ಟುಹಿಡಿದಿದ್ದರಿಂದ ಇಲಾಖೆ ಸಿಬ್ಬಂದಿ ಮಾತಿನ ಚಕಮಕಿ ನಡೆಸಿ ವಾಪಾಸ್ಸಾಗಿದ್ದಾರೆ ಎಂದು ದೂರಿದರು.

    ಹಿನಾರಿ ಗುಡ್ಡದಲ್ಲಿ ಗುಡಿಸಲು ನಿರ್ವಿುಸಿ ಎರಡು ದಿನ ಕಳೆದರೂ ಸ್ಥಳಕ್ಕೆ ಕಂದಾಯ ಇಲಾಖೆ, ಗ್ರಾಪಂ ಅಧಿಕಾರಿಗಳು ಭೇಟಿ ನೀಡಿಲ್ಲ. ಈ ಜಾಗ ಸರ್ಕಾರಿ ಗೋಮಾಳ. ಕಳೆದ ಅನೇಕ ವರ್ಷಗಳಿಂದ ಸುತ್ತಮುತ್ತಲಿನ ಎಸ್ಟೇಟ್​ಗಳಲ್ಲಿರುವ ಕೂಲಿ ಕಾರ್ವಿುಕರ ಲೈನ್ ಮನೆಗಳಲ್ಲಿ ವಾಸ ಮಾಡುತ್ತಿದ್ದೇವೆ. ಕೆಲವು ಗ್ರಾಮಗಳಲ್ಲಿ ಒಂದೇ ಮನೆಯಲ್ಲಿ ಎರಡು, ಮೂರು ಕುಟುಂಬಗಳು ವಾಸ ಮಾಡುತ್ತಿದ್ದೇವೆ. ನಿವೇಶನಕ್ಕೆ ಕಳಸ ಗ್ರಾಪಂಗೆ ಹಾಗೂ ಶಾಸಕರಿಗೆ ಅರ್ಜಿ ಸಲ್ಲಿಸಿ 10 ವರ್ಷ ಕಳೆದರೂ ನಿವೇಶನಕ್ಕೆ ಜಾಗ ಗುರುತಿಸಿಲ್ಲ. ನಿವೇಶನವನ್ನೂ ನೀಡಿಲ್ಲ. ಅಧಿಕಾರಿಗಳು ಸ್ಥಳಕ್ಕೆ ಆಗಮಿಸಿ ಇದೇ ಜಾಗದಲ್ಲಿ ನಿವೇಶನ ಹಂಚಿಕೆ ಮಾಡಬೇಕು ಎಂದು ಒತ್ತಾಯಿಸಿದರು.

    ಗೋಪಾಲ ಹಡ್ಲು, ಮಮತಾ, ಸಂತೋಷ, ರಾಮ, ರವಿಚಂದ್ರ, ಉಮೇಶ, ಮಣಿ, ಸವಿತಾ, ಪದ್ಮಾವತಿ, ಲಕ್ಷ್ಮೀ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts