More

    ಡೆಂಗ್ಯೂ ತೊಲಗಲು ಸ್ವಚ್ಚತೆ ಕಾಪಾಡಿ – ಆರೋಗ್ಯ ಶಿಕ್ಷಣಾಧಿಕಾರಿ ಚಿನ್ನಿಬಾಬು ಸಲಹೆ

    ಮಾನ್ವಿ: ಪರಿಸರವನ್ನು ಸ್ವಚ್ಚತೆಯಿಂದ ಕಾಪಾಡಿದಾಗ ಡೆಂಗ್ಯೂ ರೋಗವನ್ನು ತಡೆಗಟ್ಟಬಹುದು ಎಂದು ಆರೋಗ್ಯ ಶಿಕ್ಷಣಾಧಿಕಾರಿ ಚಿನ್ನಿಬಾಬು ಹೇಳಿದರು.

    ಈಡಿಸ್ ಸೊಳ್ಳೆ ಕಡಿತದಿಂದ ಬರುತ್ತದೆ

    ಪಟ್ಟಣದ ಆರ್‌ಜಿ ಕ್ಯಾಂಪ್ ನಮ್ಮ ಕ್ಲಿನಿಕ್‌ನಲ್ಲಿ ತಾಲೂಕು ಆರೋಗ್ಯ ಇಲಾಖೆಯಿಂದ ಹಮ್ಮಿಕೊಂಡಿದ್ದ ರಾಷ್ಟ್ರೀಯ ಡೆಂಗ್ಯೂ ದಿನ ಅಂಗವಾಗಿ ಸಾರ್ವಜನಿಕರಿಗೆ ಜಾಗೃತಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು. ಡೆಂಗ್ಯೂ ಕಾಯಿಲೆಯು ಈಡಿಸ್ ಸೊಳ್ಳೆ ಕಡಿತದಿಂದ ಬರುತ್ತದೆ. ಮೈ-ಕೈ ನೋವು, ಜ್ವರ ಲಕ್ಷಣ ಕಂಡು ಬಂದಲ್ಲಿ ಆರೋಗ್ಯ ಕೇಂದ್ರಗಳಲ್ಲಿ ಸೂಕ್ತ ಚಿಕಿತ್ಸೆ ಪಡೆಯಬೇಕು ಎಂದರು.

    ಇದನ್ನೂ ಓದಿ: ಡೆಂಗ್ಯೂ ತಡೆಯಲು ಚೆನ್ನೈ ನೂತನ ಹೆಜ್ಜೆ…. ದಂಡಂ ದಶಗುಣಂ

    ಬಹಳ ದಿನಗಳ ಕಾಲ ಶೇಖರಿಸಿದ ನೀರಿನಲ್ಲಿ ಸೊಳ್ಳೆಗಳು ಉತ್ಪತ್ತಿಯಾಗುತ್ತವೆ. ಆದ್ದರಿಂದ ವಾರಕ್ಕೆ ಒಮ್ಮೆ ಮನೆಯಲ್ಲಿ ಸಂಗ್ರಹಿಸಿಟ್ಟ ನೀರನ್ನು ಸಂಪೂರ್ಣವಾಗಿ ಖಾಲಿ ಮಾಡಿ ಲಾರ್ವಗಳನ್ನು ನಾಶ ಪಡಿಸಬೇಕು.

    ಸೊಳ್ಳೆಗಳು ಕಚ್ಚಿಸಿಕೊಳ್ಳದೆ ಮುನ್ನಚ್ಚರಿಕೆ ಕ್ರಮವನ್ನು ಅನುಸರಿಸಬೇಕೆಂದು ಹೇಳಿದರು. ಆರೋಗ್ಯ ಇಲಾಖೆಯ ಸಿಬ್ಬಂದಿ ಹಾಗೂ ಸಾರ್ವಜನಿಕರು ಭಾಗವಹಿಸಿದರು. ಪಟ್ಟಣದ ಇಂದಿರಾ ನಗರದ ನಮ್ಮ ಕ್ಲಿನಿಕ್‌ನಲ್ಲಿ ಜಾಗೃತಿ ಅಭಿಯಾನ ಹಮ್ಮಿಕೊಳ್ಳಲಾಗಿತ್ತು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts