More

    ಅನಿಲ ಸೋರಿಕೆ ನಿರ್ವಹಣೆ,ಕಲ್ಪಿತ ಕಾರ‌್ಯಾಚರಣೆ ಪ್ರಾತ್ಯಕ್ಷಿಕೆ

    ಚಿತ್ರದುರ್ಗ: ಜಿ.ಆರ್.ಹಳ್ಳಿ ಬಳಿ ಭಾರತೀಯ ಅನಿಲ ಪ್ರಾಧಿಕಾರದ (ಗೇಲ್)ಇಂಟರ್ ಮಿಡಿಯೈಟ್ ಪಿಗ್ಗಿಂಗ್ ಸ್ಟೇಷನ್ ಆವರಣದಲ್ಲಿ ಅನಿಲ ಸೊ ೀರಿಕೆ ಸಂದರ್ಭದ ಬಿಕ್ಕಟ್ಟು ನಿರ್ವಹಣೆಯ ಕಲ್ಪಿತ ಕಾರ‌್ಯಾಚರಣೆಯ ಪ್ರಾತ್ಯಕ್ಷಿಕೆ ಶುಕ್ರವಾರ ನಡೆಯಿತು. ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿ ಕಾರ ಹಾಗೂ ಗೇಲ್ ಇಂಡಿಯಾ ಲಿಮಿಟೆಡ್ ಸಹಯೋಗದಲ್ಲಿ ಮಹಾರಾಷ್ಟ್ರದ ದಾಭೋಲ-ಬೆಂಗಳೂರು ನೈಸರ್ಗಿಕ ಅನಿಲ ಪೈಪ್‌ಲೈನ್ ಆಫ್-ಸೈಟ್‌ಮಾಕ್‌ಡ್ರಿಲ್ ಏರ್ಪಡಿಸುವ ಮೂಲಕ,ಅನಿಲ ಸೋರಿಕೆ ಸಂದರ್ಭದ ಬಿಕ್ಕಟ್ಟನ್ನು ನಿರ್ವಹಿಸುವ ಕುರಿತು ಜಾಗೃತಿ ಮೂಡಿಸ ಲಾಯಿತು.

    ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರದ ಅಧ್ಯಕ್ಷೆ,ಡಿಸಿ ಜಿಆರ್‌ಜೆ ದಿವ್ಯಾಪ್ರಭು ಮಾತನಾಡಿ, ನೈಸರ್ಗಿಕ ಅಥವಾ ಮಾನವ ನಿರ್ಮಿತ ವಿಪತ್ತುಗಳು ಸಂಭವಿಸಿದಾಗ ಉಂಟಾಗುವ ಹಾನಿ, ಸಾವು-ನೋವುಗಳನ್ನು ತಡೆಯಲು ಸಂಬಂಧಿಸಿದ ಎಲ್ಲಾ ಇಲಾಖೆಗಳ ಅಧಿಕಾರಿ ಗಳು,ಸಿಬ್ಬಂದಿ ಸದಾ ಸನ್ನದ್ಧರಾಗಿರಬೇಕೆಂದರು.
    ಎಸ್‌ಪಿ ಕೆ.ಪರಶುರಾಮ್ ಮಾತನಾಡಿ,ರಾಸಾನಿಕ ಅವಘಡಗಳ ತಡೆಯಲು ಹಾಗೂ ಕಾರ್ಯಾಚರಣೆ ಕೈಗೊಳ್ಳಲು ಪ್ರತ್ಯೇಕ ಸಲಕರಣೆ ಹಾಗೂ ತರಬೇತಿ ಬೇಕಾಗುತ್ತದೆ. ಗೇಲ್ ಇಂಡಿಯಾ ಸಿಬ್ಬಂದಿ ಸಹಾಯವಾಣಿ ಹಾಗೂ ಟೋಲ್ ಫ್ರೀ ಸಂಖ್ಯೆಗಳ ಬಗ್ಗೆ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಬೇಕೆಂದರು.

    ಎಡಿಸಿ ಟಿ.ಜವರೇಗೌಡ,ಎಸಿ ಆರ್.ಚಂದ್ರಯ್ಯ,ಡಿಎಚ್‌ಒ ಡಾ.ಆರ್.ರಂಗನಾಥ್,ಜಿಲ್ಲಾ ಅಗ್ನಿಶಾಮಕ ಅಧಿಕಾರಿ ಕೆ.ಎಂ.ಪುಟ್ಟಸ್ವಾ ಮಿ,ಅಗ್ನಿಶಾಮಕ ಠಾಣಾಧಿಕಾರಿ ಮಹಾಲಿಂಗಪ್ಪ, ನಗರಸಭೆ ಎಇಇ ಮಂಜುನಾಥ ಗಿರಡ್ಡಿ, ಜಿಲ್ಲಾ ವಿಪತ್ತು ನಿರ್ವಹಣಾ ಪರಿಣಿತ ಎಚ್. ಎನ್.ಸಮರ್ಥ್,ಗೇಲ್ ಇಂಡಿಯಾ ಜಿ.ಎಂ ಕೆ.ರವಿಕುಮಾರ್, ಡಿಜಿಎಂ ಮೊಹಂತಿ,ಚಿತ್ರದುರ್ಗ ವಿಭಾಗದ ಡಿಜಿಎಂ ಕೆ.ಶಿವದಾಸನ್,ಹಿರಿಯ ವ್ಯವಸ್ಥಾಪಕ ಎನ್.ಎನ್.ತೋಪಣ್ಣನವರ್ ಮತ್ತಿತರರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts