More

    ಉತ್ತಮ ಪ್ರಜಾಪ್ರಭುತ್ವ ನಿರ್ಮಾಣಕ್ಕೆ ಪ್ರಜ್ಞಾವಂತರಾಗಿ ಮತ ಚಲಾಯಿಸಿ

    ಅರಕೇರಾ: ಮತದಾನ ನಮ್ಮ ಹಕ್ಕು ಹಾಗೂ ಜವಾಬ್ದಾರಿಯಾಗಿದ್ದು, ಉತ್ತಮ ಪ್ರಜಾಪ್ರಭುತ್ವ ನಿರ್ಮಾಣ ಮಾಡುವುದಕ್ಕೆ ಪ್ರಜ್ಞಾವಂತರಾಗಿ ಮತ ಚಲಾಯಿಸಬೇಕು ಎಂದು ಡಿವೈಎಸ್ಪಿ ಎನ್.ವೇಣುಗೋಪಾಲ್ ಹೇಳಿದರು.

    ಮುಕ್ತ ಹಾಗೂ ನ್ಯಾಯ ಸಮ್ಮತ ಮತದಾನ ನಡೆಯಬೇಕು

    ಪಟ್ಟಣದ ವಾಲ್ಮೀಕಿ ವೃತ್ತದಲ್ಲಿ ಬುಧವಾರ ಸಾರ್ವಜನಿಕರಿಗೆ ಪ್ರತಿಜ್ಞಾ ವಿಧಿ ಬೋಧಿಸಿ ಮಾತನಾಡಿ, ಮತದಾನವು ಚುನಾವಣೆಯಲ್ಲಿ ಪಾವಿತ್ರೃತೆಯಿಂದ ಕೂಡಿರಬೇಕು. ಯೋಗ್ಯ ವ್ಯಕ್ತಿಯನ್ನು ಆಯ್ಕೆ ಮಾಡಿ ಪ್ರಜಾಪ್ರಭುತ್ವವನ್ನು ಬಲಪಡಿಸಲು ಪ್ರತಿಯೊಬ್ಬರ ಜವಾಬ್ದಾರಿಯಾಗಿದೆ. ಮುಕ್ತ ಹಾಗೂ ನ್ಯಾಯ ಸಮ್ಮತ ಮತದಾನ ನಡೆಯಬೇಕು ಎಂದರು.

    ಇದನ್ನೂ: ಮತದಾನ ಮಾಡಿ ಪ್ರಜಾಪ್ರಭುತ್ವ ಉಳಿಸಿ, ವಿಕಲ ಚೇತನರ ಸಂಘ ಮನವಿ

    ಯಾವುದೇ ಆಮಿಷಗಳಿಗೆ ಒಳಗಾಗಬೇಡಿ

    ಪಿಐ ಕೆ.ಹೊಸಕೇರಪ್ಪ ಮಾತನಾಡಿ, ಯಾವುದೇ ಆಮಿಷಗಳಿಗೆ ಒಳಗಾಗದೆ ಮತದಾನ ಪ್ರಕ್ರಿಯೆಯಲ್ಲಿ ಪ್ರತಿಯೊಬ್ಬರೂ ಶಾಂತಿಯುತವಾಗಿ ಭಾಗಿಯಾಗಬೇಕು. ರೌಡಿಗಳಿಗೆ ಹೆದರದೆ ಮತ ಚಲಾವಣೆ ಮಾಡಬೇಕು. ಗಲಾಟೆ-ಗಲಭೆಗಳಲ್ಲಿ ಭಾಗಿಯಾದವರ ವಿರುದ್ಧ ಪ್ರಕರಣ ದಾಖಲಿಸಲಾಗುವುದು. ವ್ಯವಸ್ಥಿತವಾಗಿ ಹಾಗೂ ನಿರ್ಭೀತಿಯಿಂದ ಮತದಾನ ಜರುಗುವುದಕ್ಕೆ ಐಟಿಬಿಪಿ, ಸಿಆರ್‌ಪಿಎಫ್ ಮತ್ತು ಪೊಲೀಸರಿಗೆ ಸಹಕಾರ ನೀಡಬೇಕು ಎಂದರು.

    ಐಟಿಬಿಪಿ ಅಸಿಸ್ಟೆಂಟ್ ಕಮಾಡೆಂಟ್ ಜ್ಯೋತಿ ರಂಜನ್, ಸಿಆರ್‌ಪಿಎಫ್ ಕಮಾಡೆಂಟ್ ಪಂಕಜ್ ರಾಯ್, ಲಿಂಗಸೂಗೂರು ಡಿವೈಎಸ್ಪಿ ವೈ.ವೇಣುಗೋಪಾಲ, ಪಿಐ ಕೆ.ಹೊಸಕೇರಪ್ಪ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts