More

    ಕಬ್ಬಿಗೆ ಎಫ್‌ಆರ್‌ಪಿ ಹೆಚ್ಚಿಸಲು ಆಗ್ರಹ

    ವಿಜಯಪುರ: ಸಕ್ಕರೆ ಕಾರ್ಖಾನೆಗಳಲ್ಲಿ ಪ್ರತಿ ಟನ್ ಕಬ್ಬಿಗೆ ಎಫ್‌ಆರ್‌ಪಿ ದರ ಹೆಚ್ಚಿಸಲು ಆಗ್ರಹಿಸಿ ರೈತ ಸಂಘದ ನೇತೃತ್ವದಲ್ಲಿ ಜಿಲ್ಲಾಧಿಕಾರಿ ಕಚೇರಿ ಮುಂಭಾಗ ಬುಧವಾರ ಪ್ರತಿಭಟನೆ ನಡೆಸಿ ಮನವಿ ಸಲ್ಲಿಸಲಾಯಿತು.

    ಅಖಂಡ ಕರ್ನಾಟಕ ರೈತ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಅರವಿಂದ ಕುಲಕರ್ಣಿ ಮಾತನಾಡಿ, ಸಕ್ಕರೆ ಕಾರ್ಖಾನೆ ಆಡಳಿತ ಮಂಡಳಿಯವರನ್ನೇ ನೇರ ಹೊಣೆಗಾರರನ್ನಾಗಿ ಮಾಡಬೇಕು. ಎಫ್‌ಆರ್‌ಪಿ ದರ ಹೆಚ್ಚಳ ಮಾಡುವವರೆಗೂ ಉಪವಾಸ ಸತ್ಯಾಗ್ರಹದಿಂದ ಹಿಂದೆ ಸರಿಯುವ ಪ್ರಶ್ನೆಯೇ ಇಲ್ಲ. ಸರ್ಕಾರವು ಕೂಡ ಸಕ್ಕರೆ ಕಾರ್ಖಾನೆಗಳ ಕೈಗೊಂಬೆಯಂತೆ ವರ್ತಿಸುತ್ತಿದೆ. ಸರ್ಕಾರದ ಕೈಯಲ್ಲಿ ಸಕ್ಕರೆ ಕಾರ್ಖಾನೆಗಳು ಇರಬೇಕೆ ಹೊರತು, ಸಕ್ಕರೆ ಕಾರ್ಖಾನೆಗಳ ಹಿಡಿತದಲ್ಲಿ ಸರ್ಕಾರ ಇರಬಾರದು ಎಂದು ಆಗ್ರಹಿಸಿದರು.

    ಬಾಲಾಜಿ ಸಕ್ಕರೆ ಕಾರ್ಖಾನೆಯವರು ಕಬ್ಬಿಗೆ ಎಫ್‌ಆರ್‌ಪಿ ದರ ಹೆಚ್ಚಳ ಮಾಡಲು ಮೀನ ಮೀಷ ಎಣಿಸುತ್ತಿದ್ದು ರೈತರ ಮೇಲೆ ಸ್ವಲ್ಪವು ಕರುಣೆ ಹಾಗೂ ಅಭಿಮಾನ ಕಾರ್ಖಾನೆ ಮಾಲೀಕರಿಗೆ ಹಾಗೂ ಆಡಳಿತ ಮಂಡಳಿಗೆ ಇಲ್ಲ. ರೈತರ ಬದುಕಿನೊಂದಿಗೆ ಚೆಲ್ಲಾಟ ಮಾಡುತ್ತಿದ್ದಾರೆ. ಸರ್ಕಾರ ಎಫ್‌ಆರ್‌ಪಿ ದರ ಹೆಚ್ಚಿಸಲು ಆದೇಶ ನೀಡಿದರೆ ನಾವು ಕೊಡುತ್ತೇವೆ ಎಂದು ಹೇಳುತ್ತಾರೆ. ಕಬ್ಬು ಬೆಳೆದ ರೈತರು ಕಾರ್ಖಾನೆಯವರಿಗೆ ಕೇಳಿದರೆ ನಮ್ಮ ಕಾರ್ಖಾನೆ ಹಾನಿಯೊಳಗಿದೆ. ಬಾಲಾಜಿ ಸಕ್ಕರೆ ಕಾರ್ಖಾನೆ ಅವರು ಹೆಚ್ಚಿನ ದರ ಕೊಡಬಾರದು ಎಂದು ಹಠಕ್ಕೆ ಬಿದ್ದಿದ್ದಾರೆ. ನಾವು ಕೂಡ ಕಾರ್ಖಾನೆಯವರ ಮೊಂಡುತನಕ್ಕೆ ಮಣಿಯದೆ ಆಮರಣ ಉಪವಾಸ ಸತ್ಯಾಗ್ರಹ ಕುಳಿತಿದ್ದೇವೆ ಎಂದರು.

    ಸರ್ಕಾರವು ಕೂಡ ಸಕ್ಕರೆ ಕಾರ್ಖಾನೆಗಳ ಕೈಗೊಂಬೆಯಂತೆ ವರ್ತಿಸುತ್ತಿದೆ. ಸರ್ಕಾರದ ಕೈಯಲ್ಲಿ ಸಕ್ಕರೆ ಕಾರ್ಖಾನೆಗಳು ಇರಬೇಕೆ ಹೊರತು. ಸಕ್ಕರೆ ಕಾರ್ಖಾನೆಗಳ ಹಿಡಿತದಲ್ಲಿ ಸರ್ಕಾರ ಇರಬಾರದು. ಆದರೆ ಈಗಿನ ಪರಿಸ್ಥಿತಿ ಅವಲೋಕಿಸಿದರೆ ಸಕ್ಕರೆ ಕಾರ್ಖಾನೆಗಳ ಹಿಡಿತದಲ್ಲಿ ಸರ್ಕಾರ ಇದೆ ಎನ್ನುವುದು ಕಂಡು ಬರುತ್ತದೆ. ಆದ್ದರಿಂದ ಸರ್ಕಾರ ಸಕ್ಕರೆ ಕಾರ್ಖಾನೆಯ ಮುಖ್ಯಸ್ಥರಿಗೆ ಮಣಿಯದೆ ಎಫ್‌ಆರ್‌ಪಿ ದರ ಹೆಚ್ಚಿಸಿ ಆದೇಶ ಹೊರಡಿಸಬೇಕೆಂದು ಸರ್ಕಾರಕ್ಕೆ ಆಗ್ರಹಿಸಿದರು.

    ಈ ವೇಳೆ ಜಿಲ್ಲಾಧಿಕಾರಿ ಡಾ. ವಿಜಯಮಹಾಂತೇಶ ಜಿಲ್ಲಾಕಾರಿ ದಾನಮ್ಮನವರ ಸ್ಥಳಕ್ಕೆ ಭೇಟಿ ನೀಡಿ, ಕಬ್ಬು ಬೆಳೆಗಾರರ ಸಮಸ್ಯೆಯನ್ನು ಸಂಬಂಧಪಟ್ಟವರ ಗಮನಕ್ಕೆ ತಂದು ಸಮಸ್ಯೆ ಬಗೆಹರಿಸಲಾಗುವುದು ಎಂದು ಭರವಸೆ ನೀಡಿದರು.

    ಮುಖಂಡರಾದ ಚನ್ನಪ್ಪಗೌಡ ಬಿರಾದಾರ, ಯಲ್ಲಾಲಿಂಗ ಹೂಗಾರ, ಸೋಮನಗೌಡ ಕೋಳೂರ, ಅಶೋಕ ಹಿರೇಮಠ, ಸೋಮನಗೌಡ ಪಾಟೀಲ, ರಾಮನಗೌಡ ಬಾಲರಡ್ಡಿ, ಬಸಣ್ಣ ಜಾಲಿಕಟ್ಟಿ, ಬಸವಂತರಾಯ ಬಿರಾದಾರ, ಶರಣಬಸು ಬಿರಾದಾರ, ಪ್ರಧಾನಿ ಗುಂಡಕರ್ಜಗಿ, ದೇವಪ್ಪ ವಾಲೀಕಾರ, ಪರಸಪ್ಪ ಗುಂಡಕರ್ಜಗಿ, ಮಾಳಪ್ಪ ಬೂದಿಹಾಳ, ಚಂದಪ್ಪ ಹೂಗಾರ, ಚನ್ನಪ್ಪ ಹೂಗಾರ, ದ್ಯಾಮಣ್ಣ ಹೂಗಾರ, ಈರಣ್ಣ ದೇವರಗುಡಿ, ಬಸನಗೌಡ ಪಾಟೀಲ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts