More

    ರಸ್ತೆ ದುರಸ್ತಿಗೆ ಒತ್ತಾಯ

    ಶ್ರೀರಂಗಪಟ್ಟಣ: ಶ್ರೀರಂಗಪಟ್ಟಣದಿಂದ ಗಂಜಾಂಗೆ ತೆರಳುವ ರಸ್ತೆ ತೀವ್ರ ಹಾಳಾಗಿದ್ದು, ಶೀಘ್ರ ದುರಸ್ತಿಪಡಿಸಿ ಆಗಿಂದಾಗ್ಗೆ ಸಂಭವಿಸುತ್ತಿರುವ ಅಪಘಾತಗಳನ್ನು ತಪ್ಪಿಸಬೇಕು ಎಂದು ಗಂಜಾಂನ ಆಟೋ ಚಾಲಕರು ಹಾಗೂ ನಿವಾಸಿಗಳು ಆಗ್ರಹಿಸಿದರು.

    ಪಟ್ಟಣದ ಪುರಸಭಾ ಕಾರ್ಯಲಯದ ಮುಂಭಾಗ ಮಂಗಳವಾರ ಕೆಲ ಹೊತ್ತು ಧರಣಿ ನಡೆಸಿ ಪುರಸಭೆ ಆಡಳಿತದ ವಿರುದ್ಧ ಘೊಷಣೆ ಕೂಗಿದರು. ಬಳಿಕ ರಸ್ತೆ ದುರಸ್ತಿಗೆ ಆಗ್ರಹಿಸಿ ಮುಖ್ಯಾಧಿಕಾರಿ ರಾಜಣ್ಣ ಅವರಿಗೆ ಮನವಿ ಸಲ್ಲಿಸಿದರು.

    ಪ್ರತಿಭಟನೆ ನೇತೃತ್ವ ವಹಿಸಿದ್ದ ಆಟೋ ಚಾಲಕ ಹಾಗೂ ಮಾಲೀಕರ ಸಂಘದ ಜಿ.ಎಲ್.ರವಿ ಮಾತನಾಡಿ, ಗಂಜಾಂನ ನಿವಾಸಿಗಳಾಗಿ ನಾವು ಈವರೆಗೂ ಸರಿಯಾದ ರಸ್ತೆಯಿಲ್ಲದೇ ತೊಂದರೆ ಅನುಭವಿಸುತ್ತಿದ್ದೇವೆ. ಈ ಹಿಂದೆ ಹಾಳಾಗಿದ್ದ ರಸ್ತೆಯನ್ನು ಕೇವಲ ಸಾರ್ವಜನಿಕ ಆಸ್ಪತ್ರೆವರೆಗೆ ಮಾತ್ರ ಅಭಿವೃದ್ಧಿಗೊಳಿಸಿ, ಉಳಿದ ರಸ್ತೆಯನ್ನು ಹಾಗೇ ಬಿಡಲಾಗಿದೆ. ಇದರಿಂದ ದರಿಯಾ ದೌಲತ್ ಮುಂಭಾಗ, ಜೋಡಿ ರಸ್ತೆ ಹಾಗೂ ನಿಮಿಷಾಂಬಕ್ಕೆ ತೆರಳುವ ಮಾರ್ಗ ಮತ್ತು ಸಂಗಮ ರಸ್ತೆ ಸೇರಿದಂತೆ ಗಂಜಾಂನ ಎಲ್ಲಾ ರಸ್ತೆಗಳಲ್ಲೂ ಭಾರೀ ಹಳ್ಳ-ಗುಂಡಿಗಳು ನಿರ್ಮಾಣವಾಗಿ ಸ್ಥಳೀಯರು ಮತ್ತು ಹೊರಗಿನ ಪ್ರವಾಸಿಗರು ಬಿದ್ದು ಗಾಯಗೊಳ್ಳುತ್ತಿದ್ದಾರೆ. 7-8 ತಿಂಗಳು ಕಳೆದರೂ ಈ ರಸ್ತೆಯ ಅಭಿವೃದ್ಧಿ ಬಗ್ಗೆ ಇಲ್ಲಿನ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಕ್ರಮ ವಹಿಸಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

    ಪ್ರತಿಭಟನಾಕಾರರ ಮನವಿ ಆಲಿಸಿದ ಪುರಸಭಾ ಮುಖ್ಯಾಧಿಕಾರಿ ರಾಜಣ್ಣ ಈ ಬಗ್ಗೆ ತಕ್ಷಣ ಕ್ರಮವಹಿಸುವುದಾಗಿ ಭರವಸೆ ನೀಡಿದರು. ನಂತರ ಪ್ರತಿಭಟನಾಕಾರರು ಧರಣಿ ಹಿಂಪಡೆದರು. ಡಾ.ಅಂಬೇಡ್ಕರ್ ಒಕ್ಕೂಟಗಳ ಅಧ್ಯಕ್ಷ ಗಂಜಾಂ ರವಿಚಂದ್ರು , ದಸಂಸ ಮುಖಂಡ ನಂಜುಂಡ, ಆಟೋ ಚಾಲಕರಾದ ಬಾಳೆಕಾಯಿ ಸಿದ್ದಪ್ಪ, ಶಿವಕುಮಾರ್, ಅಕ್ರಮ್ ಪಾಷ, ರಮೇಶ, ರಾಕೇಶ ಮತ್ತಿತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts