More

    ಸಿಎಂ, ಡಿಸಿಎಂ ರಾಜೀನಾಮೆಗೆ ಆಗ್ರಹ; ಕಾಂಗ್ರೆಸ್ ಸರ್ಕಾರದ ವಿರುದ್ಧ ಬಿಜೆಪಿ ಪ್ರತಿಭಟನೆ

    ಧಾರವಾಡ: ಬೆಂಗಳೂರಿನಲ್ಲಿ ನಡೆದ ಐಟಿ ದಾಳಿಯಲ್ಲಿ ಗುತ್ತಿಗೆದಾರರ ಮನೆಗಳಲ್ಲಿ ಕೋಟ್ಯಂತರ ರೂ. ಹಣ ಪತ್ತೆಯಾಗಿದೆ. ಇದು ಕಮೀಷನ್ ರೂಪದಲ್ಲಿ ಬಂದಿರುವ ಹಣ. ಸಾವಿರಾರು ಕೋಟಿ ರೂ. ಹಣವನ್ನು ಪಂಚರಾಜ್ಯಗಳ ಚುನಾವಣೆಗಾಗಿ ರಾಜ್ಯ ಸರ್ಕಾರ ಹಣ ಸಂಗ್ರಹ ಮಾಡುತ್ತಿದೆ ಎಂದು ಆರೋಪಿಸಿ ಜಿಲ್ಲಾ ಬಿಜೆಪಿ ಘಟಕದಿಂದ ಜಿಲ್ಲಾಧಿಕಾರಿ ಕಚೇರಿ ಎದುರು ಸೋಮವಾರ ಪ್ರತಿಭಟನೆ ನಡೆಸಲಾಯಿತು.
    ರಾಜ್ಯದಲ್ಲಿ ಮಳೆ ಇಲ್ಲದೆ ಬರಗಾಲ ಸ್ಥಿತಿ ಇದೆ. ಬರಪೀಡಿತ ತಾಲೂಕು ಘೋಷಿಸಿರುವ ಸರ್ಕಾರ ರೈತರಿಗೆ ಪರಿಹಾರ ನೀಡಿಲ್ಲ. ಈ ಮಧ್ಯೆ ವಿದ್ಯುತ್ ಕಡಿತ ವಿಪರೀತವಾಗಿದೆ. ವರ್ಗಾವಣೆ ದಂಧೆ ನಡೆಯುತ್ತಿದೆ. ಮುಖ್ಯಮಂತ್ರಿ ಮತ್ತು ಉಪ ಮುಖ್ಯಮಂತ್ರಿಗಳು ಕೂಡಲೇ ರಾಜೀನಾಮೆ ನೀಡಬೇಕು ಎಂದು ಪ್ರತಿಭಟನಾಕಾರರು ಒತ್ತಾಯಿಸಿದರು.
    ಹು-ಧಾ ಸೆಂಟ್ರಲ ಕ್ಷೇತ್ರದ ಶಾಸಕ ಮಹೇಶ ಟೆಂಗಿನಕಾಯಿ ನೇತೃತ್ವದಲ್ಲಿ ಜಿಲ್ಲಾಧಿಕಾರಿ ಮೂಲಕ ರಾಜ್ಯಪಾಲರಿಗೆ ಮನವಿ ರವಾನಿಸಲಾಯಿತು.
    ದತ್ತಮೂರ್ತಿ ಕುಲಕರ್ಣಿ, ವಿಜಯಾನಂದ ಶೆಟ್ಟಿ, ರವಿ ನಾಯಕ, ಮೋಹನ ರಾಮದುರ್ಗ, ಬಸವರಾಜ ಗರಗ, ಸುನೀಲ ಮೊರೆ, ರಾಜಣ್ಣ ಕೊರವಿ, ಬಸವರಾಜ ಬಾಳಗಿ, ಬಸವರಾಜ ರುದ್ರಾಪುರ, ಶ್ರೀನಿವಾಸ ಕೊಟ್ಯಾನ, ರುದ್ರಪ್ಪ ಅರಿವಾಳ, ವಿಷ್ಣು ಕೊರ್ಲಹಳ್ಳಿ, ಶಫಿ, ಬಿಜಾಪುರಿ, ಮಹ್ಮದಹುಸೇನ ಲಶ್ಕರಿ, ಪ್ರಮೋದ ಕಾರಕೂನ, ದೇವರಾಜ ಶಾಪುರ, ರಾಜೇಶ್ವರಿ ಸಾಲಗಟ್ಟಿ, ಪುಷ್ಪಾ ಮಜ್ಜಗಿ, ರೇಣುಕಾ ಇರಕಲ್, ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts