More

    ಕೋಲಾರ-ಬೇತಮಂಗಲ ರಸ್ತೆ ಅಭಿವೃದ್ಧಿಗೆ ಆಗ್ರಹ

    ಕೋಲಾರ: ಕೋಲಾರ&ಬೇತಮಂಗಲ ರಸ್ತೆಯನ್ನು ಅಭಿವೃದ್ಧಿಪಡಿಸಬೇಕು ಎಂದು ಒತ್ತಾಯಿಸಿ ತಾಲೂಕಿನ ಚಾಮರಹಳ್ಳಿ ಗ್ರಾಮಸ್ಥರು ನಮ್ಮ ರೈತ ಸಂದ ನೇತೃತ್ವದಲ್ಲಿ ಮಂಗಳವಾರ ಗ್ರಾಮದಲ್ಲಿ ಪ್ರತಿಭಟನೆ ನಡೆಸಿದರು.

    ಚಾಮರಹಳ್ಳಿಯಲ್ಲಿ ರಸ್ತೆ ತಡೆದು ಪ್ರತಿಭಟನೆ ನಡೆಸಿದ ಗ್ರಾಮಸ್ಥರು, ರೈತ ಸಂದ ಕಾರ್ಯಕರ್ತರು ರಸ್ತೆ ತಡೆದು ಅಭಿವೃದ್ಧಿಪಡಿಸುವಂತೆ ಒತ್ತಾಯಿಸಿದರು. ಪ್ರತಿಭಟನೆಯ ಹಿನ್ನಲೆಯಲ್ಲಿ ಕೆಲ ನಿಮಿಷಗಳ ಕಾಲ ವಾಹನಗಳ ಸಂಚಾರ ಸ್ಥಗಿತಗೊಂಡಿತ್ತು.
    ಸಂಘದ ಜಿಲ್ಲಾಧ್ಯಕ್ಷ ಕೋಟಿಗಾನಹಳ್ಳಿ ಗಣೇಶ್​ ಗೌಡ ಮಾತನಾಡಿ, ಕೋಲಾರ&ಬೇತಮಂಗಲ ಮುಖ್ಯರಸ್ತೆಯ ಚಾಮರಹಳ್ಳಿಯಿಂದ ಹುನುಕ್ಕುಂದ ವರೆಗೆ ಡಾಂಬರೀಕಣ ಮಾಡಬೇಕು. ರಸ್ತೆ ಹಳಾಗಿ ಸುಮಾರು ವರ್ಷಗಳೆ ಕಳೆದಿದ್ದರು ಜನಪ್ರತಿನಿಧಿಗಳು ಯಾವುದೇ ರೀತಿ ಕ್ರಮಕೈಗೊಳ್ಳದೆ ಗಾಡ ನಿದ್ರೆಗೆ ಜಾರಿದ್ದಾರೆ ಎಂದಜು ದೂರಿದರು.
    ಬೇತಮಂಗಲ ಮುಖ್ಯರಸ್ತೆಯ ಚಾಮರಹಳ್ಳಿ ಗಡಿಯಿಂದ ಹುನುಕುಂದ ಹೊರ ರಾಜ್ಯಗಳಿಗೆ ಸಂಪರ್ಕ ಕಲ್ಪಿಸುವ ರಸ್ತೆಯಾಗಿದೆ. ಹೀಗಾಗಿ ಈ ರಸ್ತೆಯಲ್ಲಿ ಪ್ರತಿನಿತ್ಯ ಸುಮಾರು ಸಾವಿರಾರು ಸಂಖ್ಯೆಯಲ್ಲಿ ವಾಹನಗಳು ಒಡಾಡುತ್ತಿರುತ್ತವೆ. ರಸ್ತೆಯು ಸಂಪೂರ್ಣ ಹಾಳಾಗಿರುವುದರಿಂದ ವಾಹನ ಸವಾರರು ಹಾಗೂ ರೈತರಿಗೆ ಸಂಚರಿಸಲು ಅಸಾಧ್ಯವಾಗುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
    ಮುಖ್ಯಮಂತ್ರಿ ಸಿದ್ದರಾಮಯ್ಯ ಆಗಮಿಸುತ್ತಾರೆ ಎಂದರೆ ಕೂಡಲೇ ಕೋಟಿ ಕೋಟಿ ಹಣ ವೆಚ್ಚ ಮಾಡಿ ರಸ್ತೆ ಅಭಿವೃದ್ಧಿಪಡಿಸುತ್ತಾರೆ. ರಸ್ತೆ ಹಾನಿಯಾಗಿ ರಸ್ತೆಗಳು ಅಪಘಾತಗಳು ಸಂಭವಿಸುತ್ತಲೇ ಇವೆ. ಈ ಬಗ್ಗೆ ಜನಪ್ರತಿನಿಧಿಗಳ, ಅಧಿಕಾರಿಗಳ ಗಮನಕ್ಕೆ ತಂದು ಅಭಿವೃದ್ಧಿಪಡಿಸುವಂತೆ ಮನವಿ ಸಲ್ಲಿಸಿದ್ದರು ಯಾವುದೇ ರೀತಿ ಪ್ರಯೋಜನೆಯಾಗಿಲ್ಲ ಎಂದು ದೂರಿದರು.
    ಮನವಿ ಸ್ವೀಕರಿಸಿ ಮಾತನಾಡಿದ ಲೋಕೋಪಯೋಗಿ ಇಲಾಖೆಯ ಅಧಿಕಾರಿ ಮಂಜುನಾಥ್​, ಈಗಾಗಲೇ ಬೇತಮಂಗಲ ಮುಖ್ಯ ರಸ್ತೆ ಡಾಂಬರೀಕರಣ ನಡೆಸಲು ಗುತ್ತಿಗೆ ನೀಡಲಾಗಿದೆ. ಗುತ್ತಿಗೆದಾರನ ಮೇಲೆ ಒತ್ತಡ ತಂದು 15 ದಿನಗಳಲ್ಲಿ ರಸ್ತೆ ಅಭಿವೃದ್ಧಿಗೆ ಕ್ರಮವಹಿಸಲಾಗುವುದು ಎಂದು ಭರವಸೆ ನೀಡಿದರು.
    ಸಂಘದ ಪದಾಧಿಕಾರಿಗಳಾದ ಕೆಂಬೋಡಿ ಕೃಷ್ಣೇಗೌಡ, ರವಿ, ಮುನೇಗೌಡ, ಅಗ್ರಹಾರ ಸೋಮರಸನಹಳ್ಳಿ ನಾರಾಯಣಸ್ವಾಮಿ, ನಡುಪಳ್ಳಿ ತ್ಯಾಗರಾಜು, ನಾರಾಯಣಪ್ಪ, ಶ್ರೀಧರ್​, ಗೋಪಾಲಪ್ಪ, ನಾರಾಯಣಸ್ವಾಮಿ, ವೆಂಕಟರವಣಪ್ಪ, ಶಿವಣ್ಣ, ರಮೇಶ್​, ಸುಬ್ಬು, ರಮೇಶ್​ ಮತಿತರರು ಪಾಲ್ಗೊಂಡಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts