More

    ಸಮರ್ಪಕ ವಿದ್ಯುತ್ ಪೂರೈಕೆಗೆ ಆಗ್ರಹ

    ಬೆಟ್ಟದಪುರ: ಸಮರ್ಪಕವಾಗಿ ವಿದ್ಯುತ್ ಪೂರೈಕೆ ಮಾಡುವಂತೆ ಒತ್ತಾಯಿಸಿ ಸೆಸ್ಕ್ ಎಇಇ ಪ್ರಶಾಂತ್ ಅವರಿಗೆ ರಾಜ್ಯ ರೈತ ಸಂಘದಿಂದ ಶನಿವಾರ ಮನವಿ ಸಲ್ಲಿಸಲಾಯಿತು.

    ಬಳಿಕ ಮಾತನಾಡಿದ ಸಂಘದ ತಾಲೂಕು ಅಧ್ಯಕ್ಷ ಕೆ.ಎಸ್.ಸೋಮೇಗೌಡ, ವಿದ್ಯುತ್ ಕಣ್ಣಾಮುಚ್ಚಲೆಯಿಂದ ರಾಗಿ ಮತ್ತಿತರ ಬಿತ್ತನೆ ಬೀಜಗಳು ನೀರಿಲ್ಲದೆ ಒಣಗುತ್ತಿವೆ. ರೈತರು ಬೆಳೆದಿರುವ ಅಲ್ಪ ಪ್ರಮಾಣದ ಬೆಳೆಯನ್ನಾದರೂ ಉಳಿಸಿಕೊಳ್ಳಲು ನೀರಿನ ಅವಶ್ಯಕತೆ ಇದೆ. ಕೊಳವೆ ಬಾವಿಗಳಿಗೆ ಕೊಡಬೇಕಾದ ವಿದ್ಯುತ್ ಸೌಲಭ್ಯವನ್ನು ಸಮರ್ಪಕವಾಗಿ ಕೊಟ್ಟರೆ ರೈತರಿಗೆ ಅನುಕೂಲ ಎಂದರು.

    ದಿನಕ್ಕೆ ಎರಡರಿಂದ ಮೂರು ಗಂಟೆ ಮಾತ್ರ ವಿದ್ಯುತ್ ಸೌಲಭ್ಯ ದೊರಕುತ್ತಿದ್ದು, ಇದರಿಂದ ರೈತರಿಗೆ ಸಾಕಷ್ಟು ಸಮಸ್ಯೆ ಉಂಟಾಗಿದೆ. ಬರಗಾಲದಲ್ಲಿ ರೈತರಿಗೆ ಅನುಕೂಲವಾಗುವ ರೀತಿಯಲ್ಲಿ ಅಧಿಕಾರಿಗಳು ಕೆಲಸ ಮಾಡಬೇಕು. ಕನಿಷ್ಠ ದಿನಕ್ಕೆ 7 ರಿಂದ 8 ತಾಸು ವಿದ್ಯುತ್ ಕೊಡಬೇಕು. ಇಲ್ಲವಾದರೆ ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ನಡೆಸುವುದಾಗಿ ಎಚ್ಚರಿಕೆ ನೀಡಿದರು.

    ಮನವಿ ಸ್ವೀಕರಿಸಿದ ಇಇ ಪ್ರಶಾಂತ್, ಮೇಲಧಿಕಾರಿಗಳ ಗಮನಕ್ಕೆ ತಂದು ವಿದ್ಯುತ್ ಸೌಲಭ್ಯ ಕಲ್ಪಿಸಲು ಕ್ರಮ ಕೈಗೊಳ್ಳುವುದಾಗಿ ತಿಳಿಸಿದರು.
    ಸಂಘದ ಉಪಾಧ್ಯಕ್ಷ ಗುರುರಾಜ್, ಸದಸ್ಯರಾದ ದಶರಥ, ಬಾಲರಾಜೇಅರಸ್, ಸುರೇಶ್ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts