More

    ವಿಕಾಸ್‌ ಎಂದು ಮದ್ವೆ ಆದ್ಳು: ಗಂಡ ನೋಡಿದ್ರೆ ಜೇಮ್ಸ್‌ಬಾಂಡ್‌ ಆದ!

    ನವದೆಹಲಿ: ಚಿತ್ರ ನಟ-ನಟಿಯರಿಗೆ ಅಭಿಮಾನಿಗಳ ದೊಡ್ಡ ದಂಡೇ ಇರುತ್ತದೆ. ತಮ್ಮ ನೆಚ್ಚಿನ ಅಭಿಮಾನಿಗಳ ಸ್ಟೈಲ್‌ ಮಾಡುವುದು, ಅವರಂತೆ ಆ್ಯಕ್ಟಿಂಗ್‌ ಮಾಡುವುದು, ಅವರಂತೆಯೇ ಮಾತನಾಡುವುದು… ಹೀಗೆ ಹಲವು ಅಭಿಮಾನಿಗಳು ತಮ್ಮ ಸ್ವಭಾವವನ್ನೇ ಬದಲಿಸಿಕೊಳ್ಳುತ್ತಾರೆ.

    ಇನ್ನೂ ಹೆಚ್ಚಿಗೆ ಹುಚ್ಚು ಇರುವವರು ತಮ್ಮ ಮೈಮೇಲೆ ತಮ್ಮ ನೆಚ್ಚಿನ ನಟ-ನಟಿಯ ಹೆಸರಿನ ಹಚ್ಚೆ ಚುಚ್ಚಿಸಿಕೊಂಡು ಖುಷಿಪಡುತ್ತಾರೆ. ಆದರೆ ಇಲ್ಲೊಬ್ಬ ಜೇಮ್ಸ್‌ ಬಾಂಡ್‌ನ ಅಭಿಮಾನಿ ತನ್ನ ಹೆಸರನ್ನೇ ಬದಲಾಯಿಸಿಕೊಳ್ಳುವ ಮೂಲಕ ಇದೀಗ ಭಾರಿ ಪ್ರಚಾರ ಗಳಿಸಿದ್ದಾನೆ.

    ಈತನ ಹೆಸರು ವಿಕಾಸ್‌ ಕರ್ದಮ್‌, ಜೇಮ್ಸ್ ಬಾಂಡ್ ಸಿನಿಮಾವನ್ನು ನೋಡಿದ ವಿಕಾಸ್, ಅವರ ಅಭಿನಯಕ್ಕೆ ಮನಸೋತರು. ಗೂಢಚಾರಿ ಪಾತ್ರದಲ್ಲಿ ಅಮೋಘವಾಗಿ ನಟಿಸಿದ ಜೇಮ್ಸ್‌ ಬಾಂಡ್‌ ನಟನೆಗೆ ಅದೆಷ್ಟು ಪ್ರಭಾವಕ್ಕೆ ಒಳಗಾದರು ಎಂದರೆ ತಮ್ಮ ಹೆಸರನ್ನೇ ಜೇಮ್ಸ್‌ ಬಾಂಡ್‌ ಎಂದು ಬದಲಾಯಿಸಿಕೊಳ್ಳುವ ತೀರ್ಮಾನಕ್ಕೆ ಬಂದರು.

    ಇದನ್ನೂ ಓದಿ: ಬಿಜೆಪಿ ಮುಖಂಡನ ಕೊಲೆ ಬೆನ್ನಲ್ಲೇ ಮತ್ತೊಬ್ಬ ಮುಖಂಡನ ಕಿಡ್ನಾಪ್‌!

    ತೀರ್ಮಾನಕ್ಕೆ ಬಂದರಷ್ಟೇ ಪರವಾಗಿರಲಿಲ್ಲ. ಅಧಿಕೃತವಾಗಿ ತಮ್ಮ ಹೆಸರನ್ನೇ ಬದಲಾಯಿಸಿಕೊಂಡು ಬಿಟ್ಟರು. ವಿಕಾಸ್‌ನಿಂದ ಅವರು ಜೇಮ್ಸ್‌ಬಾಂಡ್‌ ಆದರು.
    ತಮ್ಮ ಪತಿ ತಮಾಷೆಗೆ ಹೆಸರು ಬದಲಾವಣೆ ಮಾಡುವ ಬಗ್ಗೆ ಹೇಳುತ್ತಿದ್ದಾರೆ ಎಂದುಕೊಂಡಿದ್ದರೆ, ನಿಜಕ್ಕೂ ಅಧಿಕೃತವಾಗಿ ಬದಲಾಯಿಸಿಕೊಂಡಿರುವುದು ನೋಡಿ ಪತ್ನಿ ಕಂಗಾಲಾಗಿ ಹೋಗಿದ್ದಾರೆ.

    ತಾವು ವಿಕಾಸ್‌ ಎನ್ನುವವರನ್ನು ಮದುವೆಯಾಗಿದ್ದು, ಇದೀಗ ಜೇಮ್ಸ್‌ಬಾಂಡ್‌ ತಮ್ಮ ಪತಿ ಎಂದು ಹೇಳಲು ಅವರಿಗೆ ಕಿರಿಕಿರಿ ಆಗುತ್ತಿದೆಯಂತೆ. ಆ ಬಗ್ಗೆ ಅವರು ತುಂಬಾ ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ. ತಮಗೆ ಮೂರು ವರ್ಷದ ಮಗುವಿದ್ದು, ಅದಕ್ಕೆ ತಿಳಿದರೆ ಅದು ಕೂಡ ಬೇಸರ ಪಟ್ಟಿಕೊಳ್ಳಬಹುದೇನೋ ಎಂಬ ಆತಂಕ ಇವರ ಪತ್ನಿಯದ್ದು. ಅಷ್ಟೇ ಅಲ್ಲದೇ, ಈ ಹೆಸರು ತಮಗಷ್ಟೇ ಅಲ್ಲದೇ ಇದರಿಂದ ಗಂಡನೂ ಟ್ರೋಲ್‌ಗೆ ಒಳಗಾಗುವ ಸಾಧ್ಯತೆ ಇದೆ ಎನ್ನುವುದು ಅವರ ಅನಿಸಿಕೆ.

    ಈ ಹೊಸ ಹೆಸರಿಗೆ ಅವರ ಸ್ನೇಹಿತರು ಮತ್ತು ಸಹೋದ್ಯೋಗಿಗಳು ಎಲ್ಲರ ವಿರೋಧವೂ ವ್ಯಕ್ತವಾಗಿದೆ. ಆದರೆ ಇದ್ಯಾವುದಕ್ಕೂ ವಿಕಾಸ್‌ ತಲೆಕೆಡಿಸಿಕೊಂಡಿಲ್ಲ. ಒಂದು ತಿಂಗಳು ಯೋಚಿಸಿ ಎಲ್ಲಾ ಸಾಧಕ ಬಾಧಕ ಪರಿಶೀಲಿಸಿಯೇ ಹೆಸರು ಬದಲಾಯಿಸಿಕೊಂಡಿರುವುದಾಗಿ ಹೇಳಿದ್ದಾರೆ. ಈ ವಿಚಾರವನ್ನು ಮೊದಲು ತಿಳಿಸಿದಾಗ ಪತ್ನಿಗೆ ತಿಳಿಸಿದಾಗ ಆಕೆ ನನ್ನನ್ನು ದುರುಗುಟ್ಟಿಕೊಂಡು ನೋಡಿದಳು. ಕೋಪದಲ್ಲಿ ರೂಮಿಗೆ ಸೇರಿಕೊಂಡ ಆಕೆ, ಎರಡು ದಿನ ತಮ್ಮೊಂದಿಗೆ ಮಾತನಾಡಲೇ ಇಲ್ಲ ಎನ್ನುವ ವಿಕಾಸ್‌, ಪತ್ನಿಗೂ ಕ್ಯಾರೇ ಮಾಡದೇ ಹೆಸರು ಬದಲಿಸಿಕೊಂಡಿದ್ದು, ಇದೀಗ ಎಲ್ಲಾ ದಾಖಲೆಗಳಲ್ಲಿಯೂ ಹೆಸರು ಬದಲಾವಣೆಗೆ ಮುಂದಾಗಿದ್ದಾರೆ.

    ಹಿಂದೂ ಯುವಕನ ಗಂಟಲು ಸೀಳಿ ನದಿಗೆ ಎಸೆದ ಪಾಕ್‌ ಪಾಪಿಗಳು!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts