More

    ಸಂಪೂರ್ಣ ಆನ್​ಲೈನ್​ ಪ್ರವೇಶ ಪ್ರಕ್ರಿಯೆಗೆ ದೆಹಲಿ ವಿಶ್ವವಿದ್ಯಾಲಯ ಸಜ್ಜು

    ನವದೆಹಲಿ: ದೇಶಾದ್ಯಂತ ಲಾಕ್​ಡೌನ್​ ಹಿನ್ನೆಲೆ ಜನರು ಮನೆಯಿಂದ ಹೊರ ಬರುವಂತೆಯೇ ಇಲ್ಲ. ಅದರಲ್ಲೂ ಸಂಪೂರ್ಣವಾಗಿ ನಿರ್ಬಂಧಿತವಾಗಿರುವ (ಕಂಪ್ಲೀಟ್​ ಸೀಲ್) ಪ್ರದೇಶಗಳಲ್ಲಿ ಇನ್ನೂ ಕಷ್ಟ. ಪರಿಸ್ಥಿತಿ ನಿಯಂತ್ರಣಕ್ಕೆ ಬಂದ ಬಳಿಕವೂ ಜನರು ಗುಂಪುಗೂಡುವುದನ್ನು ತಡೆಯಬೇಕಾದ ಅನಿವಾರ್ಯತೆ ಇರಲಿದೆ.

    ಶೈಕ್ಷಣಿಕ ಚಟುವಟಿಕೆಗಳು ಶುರುವಾದ ಬಳಿಕ ಶಾಲಾ- ಕಾಲೇಜುಗಳಿಗೆ ವಿದ್ಯಾರ್ಥಿಗಳು, ಪಾಲಕರು ಎಡತಾಕಲೇಬೇಕಾಗುತ್ತದೆ. ಇದನ್ನು ತಡೆಯುವ ನಿಟ್ಟಿನಲ್ಲಿ ದೆಹಲಿ ವಿಶ್ವಿದ್ಯಾಲಯ ಈ ಬಾರಿ ಪ್ರವೇಶ ಪ್ರಕ್ರಿಯೆಯನ್ನು ಸಂಪೂರ್ಣ ಆನ್​ಲೈನ್​ ಗೊಳಿಸಲು ಮುಂದಾಗಿದೆ. ಅಲ್ಲದೇ. ಪ್ರಸ್ತುತ ಸಂದರ್ಭದಲ್ಲಿ ಇದು ಅನಿವಾರ್ಯವೂ ಆಗಿದೆ ಎಂದು ವಿವಿ ತಿಳಿಸಿದೆ.

    ವಿದ್ಯಾರ್ಥಿಗಳು ವಿವಿ ಕ್ಯಾಂಪಸ್​ಗೆ ಅಥವಾ ಸಂಯೋಜಿತ ಕಾಲೇಜುಗಳಿಗೆ ಭೇಟಿ ನೀಡುವುದನ್ನು ಆದಷ್ಟು ಕಡಿಮೆ ಮಾಡುವ ಉದ್ದೇಶ ಹೊಂದಲಾಗಿದೆ. ಅವರಿಗೆ ಅಗತ್ಯವಾದ ಎಲ್ಲ ಮಾಹಿತಿಗಳನ್ನು ಆನ್​ಲೈನ್​ಲ್ಲಿ ನೀಡಲು ಸಿದ್ಧತೆ ಮಾಡಿಕೊಳ್ಳುತ್ತಿದೆ.

    ಇದೇ ಮೊದಲ ಬಾರಿಗೆ ವಿವಿ ಆರ್ಥಿಕವಾಗಿ ಹಿಂದುಳಿದ ಮೇಲ್ವರ್ಗದ ವಿದ್ಯಾರ್ಥಿಗಳಿಗೆ ಶೇ.10 ಮೀಸಲಾತಿ ಕಲ್ಪಿಸುತ್ತಿದೆ. ಇದಕ್ಕೆ ಸಂಬಂಧಿಸಿದಂತೆ ಲಭ್ಯವಿರುವ ಸೀಟು ಹಾಗೂ ವಿವಿಧ ಮೀಸಲು ಅನ್ವಯ ನೀಡಲಾಗುವ ಪ್ರವೇಶದ ಮಾಹಿತಿಯನ್ನು ನಿಡುವಂತೆ ಎಲ್ಲ ಕಾಲೇಜುಗಳಿಗೆ ಸೂಚಿಸಿದೆ. ವಿವಿಧ ಕೋರ್ಸ್​ಗಳಿಗೆ ಹೆಚ್ಚುವರಿ ಅಥವಾ ವಿಶೇಷ ವಿದ್ಯಾರ್ಹತೆ ಬೇಕಿದ್ದರೆ ತಿಳಿಸುವಂತೆ ಕಾಲೇಜುಗಳಿಗೆ ತಿಳಿಸಿದೆ. ಈ ಎಲ್ಲ ಮಾಹಿತಿಗಳನ್ನು ಏಪ್ರಿಲ್​ 30ರೊಳಗೆ ತಲುಪಿಸುವಂತೆ ವಿವಿ ಆಡಳಿತ ವಿಭಾಗದ ಕಲಸಚಿವರು ಕಾಲೇಜುಗಳಿಗೆ ಸುತ್ತೋಲೆ ಹೊರಡಿಸಿದ್ದಾರೆ.

    ರಾಜ್ಯದಲ್ಲಿ ಲಾಕ್​ಡೌನ್​ 2 ವಾರ ವಿಸ್ತರಣೆ; ಮುಂದಿನ ದಿನಗಳಲ್ಲಿ ವಿಭಿನ್ನವಾಗಿರಲಿದೆ: ಸಿಎಂ ಯಡಿಯೂರಪ್ಪ

    ಲಾಕ್​ಡೌನ್​ ವಿಸ್ತರಣೆಯ ಪ್ರಧಾನಿ ನರೇಂದ್ರ ಮೋದಿ ನಿರ್ಧಾರವನ್ನು ಸಮರ್ಥಿಸಿದ ದೆಹಲಿ ಸಿಎಂ ಅರವಿಂದ ಕೇಜ್ರಿವಾಲ್​

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts