More

    ಆನ್​ಲೈನ್​ ಚಾಟಿಂಗ್​ನಲ್ಲಿ 18 ತುಂಬದ ಹುಡುಗರ ಪೋಲಿ ಮಾತು ಕೇಳಿ ಬೆಚ್ಚಿಬಿದ್ದ ಪೊಲೀಸರು!

    ನವದೆಹಲಿ: ಟ್ವಿಟರ್​ನಲ್ಲಿ #BoysLockerRoom ಎಂಬ ಹ್ಯಾಷ್​ಟ್ಯಾಗ್​ ಸಿಕ್ಕಾಪಟೆ ಸದ್ದು ಮಾಡುತ್ತಿದೆ. ದೆಹಲಿಯ ಪ್ರತಿಷ್ಠಿತ ಶಾಲೆಗಳ ಗಂಡುಮಕ್ಕಳ ಹೊಲಸು ಮನಸ್ಥಿತಿ ಈ ಹ್ಯಾಷ್​ಟ್ಯಾಗ್​ನಡಿ ಬಯಲಾಗಿದೆ. ಸೈಬರ್​ ಪೊಲೀಸರು ಕೂಡ ಈಗಾಗಲೇ ತನಿಖೆಗೆ ಇಳಿದಿದ್ದಾರೆ.

    ದೆಹಲಿಯ ಪ್ರತಿಷ್ಠಿತ ಶಾಲೆ, ಕಾಲೇಜುಗಳಿಗೆ ಹೋಗುವ, ಸಾಮಾನ್ಯವಾಗಿ 15ರಿಂದ 18ರವರೆಗಿನ ವಯಸ್ಸಿನ ಗಂಡುಮಕ್ಕಳೆಲ್ಲ ಸೇರಿ ಒಂದು ಇನ್ಸ್ಟಾಗ್ರಾಂ ಗ್ರುಪ್​ ರಚಿಸಿಕೊಂಡಿದ್ದಾರೆ. ಅದರ ಹೆಸರು ಬಾಯ್ಸ್​ ಲಾಕರ್​ ರೂಂ (bois locker room) ಆದರೆ ಈ ಗ್ರೂಪ್​ನಲ್ಲಿ ಹದಿಹರೆಯದ ಯುವಕರು ಚರ್ಚೆ ಮಾಡುತ್ತಿದ್ದ ವಿಚಾರಗಳು ಬೆಚ್ಚಿಬೀಳಿಸುವಂಥವು.

    ಆ ಗ್ರುಪ್​​ನಲ್ಲಿ ಗಂಡುಮಕ್ಕಳು ಮಾಡಿದಂತಹ ಚಾಟ್​ಗಳ ಸ್ಕ್ರೀನ್​ ಶಾಟ್​ಗಳು ಸಾಮಾಜಿಕ ಜಾಲತಾಣಗಳಲ್ಲಿ #BoysLockerRoomನಡಿ ವೈರಲ್​ ಆಗುತ್ತಿದ್ದಂತೆ ಪೊಲೀಸರೂ ಕೂಡ ಎಚ್ಚೆತ್ತುಕೊಂಡಿದ್ದಾರೆ. ಕೂಡಲೇ ಅದನ್ನು ಡಿ ಆ್ಯಕ್ಟಿವೇಟ್​ ಮಾಡಿಸಲಾಗಿದೆ. ಅಷ್ಟಕ್ಕೂ ಅಂಥ ಚರ್ಚೆಗಳು ಏನು ನಡೆಯುತ್ತಿತ್ತು…? ಮುಂದೆ ಓದಿ…

    ಇದನ್ನೂ ಓದಿ: ಬೆಳ್ಳಂಬೆಳಗ್ಗೆಯೇ ಬೆಂಗಳೂರಿನಲ್ಲಿ ಶೂಟೌಟ್: ಖಾರದ ಪುಡಿ ಎರಚಿ ಪರಾರಿಯಾಗಲೆತ್ನಿಸಿದ್ದ ಕೊಲೆ ಆರೋಪಿ

    ಬಾಯ್ಸ್​ ಲಾಕರ್ ರೂಂ ಎಂಬ ಗ್ರುಪ್​ ರಚನೆ ಮಾಡಿಕೊಂಡಿದ್ದವರು ಬರೀ ಅಶ್ಲೀಲ ವಿಚಾರಗಳನ್ನು ಚಾಟ್​ ಮಾಡುತ್ತಿದ್ದರು. ಇನ್ನೂ 18 ಮೀರದ, ಅತ್ತ ಬಾಲಕರೂ ಅಲ್ಲದ, ಇತ್ತ ಯುವಕರೂ ಎನ್ನಿಸಿಕೊಳ್ಳದವರೇ ತುಂಬಿದ್ದ ಈ ಗ್ರುಪ್​ನಲ್ಲಿ ತಮ್ಮದೇ ವಯಸ್ಸಿನ ಹುಡುಗಿಯರ, ಹಿರಿಯ ಮಹಿಳೆಯರ ನಗ್ನ ಚಿತ್ರಗಳು ಹರಿದಾಡುತ್ತಿದ್ದವು. ರೇಪ್​, ಸೆಕ್ಸ್ ಎಂಬಿತ್ಯಾದಿ ವಿಷಯಗಳೇ ತುಂಬಿಹೋಗಿದ್ದವು. ಯುವತಿಯರು, ಬಾಲಕಿಯರು, ಮಹಿಳೆಯರ ನಗ್ನ ಚಿತ್ರಗಳೊಂದಿಗೆ ಅಷ್ಟೇ ಅಶ್ಲೀಲವಾದ ಕಾಮೆಂಟ್​ಗಳೂ ಇದ್ದವು. ತಮ್ಮದೇ ಕ್ಲಾಸಿನ ಹೆಣ್ಣುಮಕ್ಕಳ ಬಗ್ಗೆಯೂ ಕೆಟ್ಟದಾಗಿ ಸಂದೇಶಗಳನ್ನು ವಿನಿಮಯ ಮಾಡಿಕೊಂಡಿದ್ದು ಬೆಳಕಿಗೆ ಬಂದಿದೆ.

    ಗ್ರುಪ್​ನಲ್ಲಿರುವ ಗಂಡು ಮಕ್ಕಳು ತಮ್ಮ ಕ್ಲಾಸಿನ ಹುಡುಗಿಯರ ಸೋಷಿಯಲ್​ ಮೀಡಿಯಾ ಅಕೌಂಟ್​ಗಳನ್ನು ಹ್ಯಾಕ್​ ಮಾಡುತ್ತಿದ್ದರು. ಅಲ್ಲದೆ, ಅವರ ನಗ್ನ ಚಿತ್ರಗಳನ್ನು ಗುಟ್ಟಾಗಿ ಸಂಗ್ರಹಿಸುತ್ತಿದ್ದರು ಎಂಬ ಆರೋಪವೂ ಕೇಳಿಬಂದಿದೆ.
    ಟ್ವಿಟರ್​ನಲ್ಲಿ ಕೆಲವು ನೆಟ್ಟಿಗರು ಸ್ಕ್ರೀನ್​ ಶಾಟ್​ಗಳನ್ನು ಪೋಸ್ಟ್ ಮಾಡಿದ ಬೆನ್ನಲ್ಲೇ ದೆಹಲಿ ಸೈಬರ್ ಪೊಲೀಸರು ಅಲರ್ಟ್ ಆಗಿದ್ದಾರೆ. ಅವರೆಲ್ಲರ ಸಂಪೂರ್ಣ ವಿವರಣೆ ನೀಡುವಂತೆ ಇನ್ಸ್ಟಾಗ್ರಾಂಗೆ ಕೇಳಿದ್ದಾರೆ. ಸದ್ಯ ಆ ಗ್ರುಪ್​ ಈಗ ಡಿ ಆ್ಯಕ್ಟಿವೇಟ್ ಆಗಿದೆ.

    ಇದನ್ನೂ ಓದಿ: ಎಷ್ಟು ಕೋಟಿ ರೂ. ಮೌಲ್ಯದ ಮದ್ಯ ಇವತ್ತು ರಾಜ್ಯದಲ್ಲಿ ಸೇಲ್ ಆಯ್ತು?

    ಗುಂಪಿನ ಎಲ್ಲ ಸದಸ್ಯರನ್ನೂ ಬಂಧಿಸುವಂತೆ ದೆಹಲಿ ಮಹಿಳಾ ಆಯೋಗದ ಅಧ್ಯಕ್ಷೆ ಸ್ವಾತಿ ಮಾಲಿವಾಲ್​ ಇನ್ಸ್ಟಾಗ್ರಾಂ ಮತ್ತು ದೆಹಲಿ ಪೊಲೀಸರಿಗೆ ನೋಟಿಸ್​ ಕೂಡ ನೀಡಿ, ಒತ್ತಾಯಿಸಿದ್ದಾರೆ. (ಏಜೆನ್ಸೀಸ್​)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts