More

    ದೆಹಲಿ ವಿಧಾನಸಭಾ ಚುನಾವಣೆ: 54 ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆ ಮಾಡಿದ ಕಾಂಗ್ರೆಸ್​

    ನವದೆಹಲಿ: ಮುಂದಿನ ತಿಂಗಳು ನಡೆಯಲಿರುವ ದೆಹಲಿ ವಿಧಾನಸಭಾ ಚುನಾವಣೆಗೆ ಕಾಂಗ್ರೆಸ್​ 54 ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ಶನಿವಾರ ರಾತ್ರಿ ಬಿಡುಗಡೆ ಮಾಡಿದೆ.

    ರಾಷ್ಟ್ರ ರಾಜಧಾನಿಯು ಒಟ್ಟು 70 ವಿಧಾನಸಭಾ ಕ್ಷೇತ್ರಗಳನ್ನು ಹೊಂದಿದ್ದು, ಮೊದಲ ಭಾಗವಾಗಿ ಕಾಂಗ್ರೆಸ್​ 54 ಅಭ್ಯರ್ಥಿಗಳ ಪಟ್ಟಿ ಬಿಡುಗಡೆಗೊಳಿಸಿದೆ. ಆಮ್​ ಆದ್ಮಿ ಪಕ್ಷದಿಂದ ಟಿಕೆಟ್​ ದೊರೆಯದೇ ಕಾಂಗ್ರೆಸ್​ ಸೇರಿರುವ ದ್ವಾರಕ ಕ್ಷೇತ್ರದ ಶಾಸಕ ಆದರ್ಶ್​ ಶಾಸ್ತ್ರಿಯನ್ನು ಕಾಂಗ್ರೆಸ್​ ಚುನಾವಣಾ ಕಣಕ್ಕಿಳಿಸಿದೆ. ದ್ವಾರಕ ಕ್ಷೇತ್ರದಲ್ಲಿ ಶಾಸ್ತ್ರಿಗೆ ಪ್ರತಿಸ್ಪರ್ಧಿಯಾಗಿ ಆಪ್​ನ ವಿನಯ್​ ಮಿಶ್ರ ಸ್ಪರ್ಧಿಸಿದ್ದಾರೆ.

    ಆಪ್​ ಮಾಜಿ ನಾಯಕ ಅಲ್ಕ ಲಂಬಾರಿಗೂ ಕಾಂಗ್ರೆಸ್​ ಟಿಕೆಟ್​ ನೀಡಿದ್ದು, ಚಾಂದನಿ ಚೌಕ ಕ್ಷೇತ್ರದಿಂದ ಕಣಕ್ಕಿಳಿಸಿದೆ. ಇದನ್ನು ಹೊರತುಪಡಿಸಿ, ಅರವಿಂದರ್​ ಸಿಂಗ್​ ಲವ್ಲಿ ಗಾಂಧಿನಗರ ಕ್ಷೇತ್ರದಿಂದ ಕಣಕ್ಕಿಳಿಯಲಿದ್ದಾರೆ.

    ಆದರ್ಶ್​ ಶಾಸ್ತ್ರಿ ಅವರು ದೆಹಲಿಯ ಕಾಂಗ್ರೆಸ್​ ಘಟಕದಲ್ಲಿ ರಾಜ್ಯಾಧ್ಯಕ್ಷ ಸುಭಾಷ್​ ಚೋಪ್ರಾ ಹಾಗೂ ಎಐಸಿಸಿ ಉಸ್ತುವಾರಿ ಪಿ.ಸಿ. ಛಕೂ ಸಮ್ಮುಖದಲ್ಲಿ ಶನಿವಾರ ಕಾಂಗ್ರೆಸ್​ ಸೇರ್ಪಡೆಯಾಗಿದರು. ಮಾಜಿ ಪ್ರಧಾನಿ ಲಾಲ್​ ಬಹದ್ದೂರ್​ ಶಾಸ್ತ್ರಿ ಅವರ ಮೊಮ್ಮಗನಾಗಿರುವ ಆದರ್ಶ್​ ಶಾಸ್ತ್ರಿ ಆಮ್​ ಆದ್ಮಿ ಪಕ್ಷದಲ್ಲಿ ರಾಷ್ಟ್ರೀಯ ವಕ್ತಾರ ಮತ್ತು ಸಾಗರೋತ್ತರ ವ್ಯವಹಾರಗಳ ಸಹ-ಸಂಚಾಲಕರಾಗಿದ್ದರು.

    ಫೆ.8 ರಂದು ದೆಹಲಿ ವಿಧಾನಸಭಾ ಚುನಾವಣೆಯ ಮತದಾನ ನಡೆಯಲಿದ್ದು, 11ರಂದು ಫಲಿತಾಂಶ ಹೊರಬೀಳಲಿದೆ. (ಏಜೆನ್ಸೀಸ್​)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts