More

    ಲೈಂಗಿಕ ದೌರ್ಜನ್ಯ ಕುರಿತ ಹೇಳಿಕೆ: ರಾಹುಲ್​ ಗಾಂಧಿಗೆ ದೆಹಲಿ ಪೊಲೀಸರಿಂದ ನೋಟಿಸ್​ ಜಾರಿ

    ನವದೆಹಲಿ: ಜಮ್ಮು ಮತ್ತು ಕಾಶ್ಮೀರದ ಶ್ರೀನಗರದಲ್ಲಿ ಭಾರತ್ ಜೋಡೋ ಯಾತ್ರೆಯ ವೇಳೆ ‘ಮಹಿಳೆಯರ ಮೇಲೆ ಈಗಲೂ ಲೈಂಗಿಕ ದೌರ್ಜನ್ಯಗಳು ನಡೆಯುತ್ತಿವೆ’ ಎಂಬ ಹೇಳಿಕೆಗೆ ಸಂಬಂಧಿಸಿದಂತೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರಿಗೆ ದೆಹಲಿ ಪೊಲೀಸರು ನೋಟಿಸ್ ಜಾರಿ ಮಾಡಿದ್ದಾರೆ.

    ಸಾಮಾಜಿಕ ಜಾಲತಾಣದ ಪೋಸ್ಟ್‌ಗಳನ್ನು ಗಮನದಲ್ಲಿಟ್ಟುಕೊಂಡು, ಪೊಲೀಸರು ರಾಹುಲ್​ಗೆ ಪ್ರಶ್ನಾವಳಿಯನ್ನು ಕಳುಹಿಸಿದ್ದು, ಲೈಂಗಿಕ ಕಿರುಕುಳದ ಬಗ್ಗೆ ತನ್ನನ್ನು ಸಂಪರ್ಕಿಸುವ ಮಹಿಳೆಯರ ಬಗ್ಗೆ ವಿವರಗಳನ್ನು ನೀಡುವಂತೆ ರಾಹುಲ್ ಅವರನ್ನು ದೆಹಲಿ ಪೊಲೀಸರು ಕೇಳಿದ್ದಾರೆ.

    ಶ್ರೀನಗರದಲ್ಲಿ ಭಾರತ್ ಜೋಡೋ ಯಾತ್ರೆಯ ವೇಳೆ ರಾಹುಲ್ ಗಾಂಧಿ ಅವರು “ಮಹಿಳೆಯರ ಮೇಲೆ ಇನ್ನೂ ಲೈಂಗಿಕ ದೌರ್ಜನ್ಯ ನಡೆಯುತ್ತಿರುವುದಾಗಿ ನಾನು ಕೇಳಿದ್ದೇನೆ” ಎಂದು ಹೇಳಿದ್ದರು. ಹೀಗಾಗಿ ಸಂತ್ರಸ್ತರ ವಿವರಗಳನ್ನು ನೀಡುವಂತೆ ನಾವು ರಾಹುಲ್​ ಅವರನ್ನು ಕೇಳಿದ್ದೇವೆ. ಮಾಹಿತಿ ನೀಡಿದರೆ, ಸಂತ್ರಸ್ತರಿಗೆ ರಕ್ಷಣೆ ಒದಗಿಸಲು ನೆರವಾಗುತ್ತದೆ ಎಂದು ಹಿರಿಯ ಪೊಲೀಸ್​ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

    ಇದನ್ನೂ ಓದಿ: ತನುಜಾ ಚಿತ್ರ ವೀಕ್ಷಿಸಿದ ಸುತ್ತೂರು ಶ್ರೀ; ಮಠದ 4 ಸಾವಿರ ವಿದ್ಯಾರ್ಥಿಗಳೊಂದಿಗೆ ವೀಕ್ಷಣೆ

    ನೋಟಿಸ್​ಗೆ ಪ್ರತಿಕ್ರಿಯಿಸಿರುವ ಕಾಂಗ್ರೆಸ್, ಕಾನೂನು ಪ್ರಕಾರ ನೋಟಿಸ್‌ಗೆ ಸೂಕ್ತ ಸಮಯದಲ್ಲಿ ಪ್ರತಿಕ್ರಿಯೆ ನೀಡುತ್ತೇವೆ ಎಂದು ಹೇಳಿದೆ. ಪ್ರಧಾನಿ ಮೋದಿ ಮತ್ತು ಅದಾನಿ ಸಂಬಂಧದ ಬಗ್ಗೆ ರಾಹುಲ್ ಗಾಂಧಿಯವರು ಕೇಳಿರುವ ಪ್ರಶ್ನೆಗಳಿಂದ ಕೇಂದ್ರ ಸರ್ಕಾರ ತತ್ತರಿಸಿದೆ ಎಂದು ವ್ಯಂಗ್ಯವಾಡಿದೆ.

    ನಾವು ಕಾನೂನಿನ ಪ್ರಕಾರವಾಗಿ ಸರಿಯಾದ ಸಮಯದಲ್ಲಿ ನೋಟಿಸ್‌ಗೆ ಉತ್ತರಿಸುತ್ತೇವೆ. ಈ ಸೂಚನೆಯು ಸರ್ಕಾರವು ಭೀತಿಯಲ್ಲಿರುವ ಮತ್ತೊಂದು ಪುರಾವೆಯಾಗಿದೆ ಮತ್ತು ಪ್ರಜಾಪ್ರಭುತ್ವ, ಮಹಿಳಾ ಸಬಲೀಕರಣ, ಅಭಿವ್ಯಕ್ತಿ ಸ್ವಾತಂತ್ರ್ಯ ಮತ್ತು ಪ್ರತಿಪಕ್ಷದ ಪಾತ್ರವನ್ನು ದುರ್ಬಲಗೊಳಿಸಲು ಕೇಂದ್ರ ಸರ್ಕಾರದ ಇತ್ತೀಚಿನ ಪ್ರಯತ್ನಗಳಲ್ಲಿ ಇದು ಕೂಡ ಒಂದಾಗಿದೆ ಎಂದು ಕಾಂಗ್ರೆಸ್ ಹೇಳಿದೆ. (ಏಜೆನ್ಸೀಸ್​)

    ಮದ್ವೆ ಹಿಂದಿದೆ ಅದೊಂದು ಪ್ಲಾನ್​: ಪವಿತ್ರಾ ಲೋಕೇಶ್​ ವಿರುದ್ಧ ಮಾಜಿ ಪತಿ ಸುಚೇಂದ್ರ ಪ್ರಸಾದ್ ಗಂಭೀರ ಆರೋಪ​

    ತಪ್ಪಾದ ಪರೀಕ್ಷಾ ಕೇಂದ್ರಕ್ಕೆ ಬಿಟ್ಟು ಹೋದ ತಂದೆ: ಅಸಹಾಯಕಳಾಗಿದ್ದ ವಿದ್ಯಾರ್ಥಿನಿಗೆ ಪೊಲೀಸ್​ ಅಧಿಕಾರಿ ನೆರವು

    ಋಷಿ ಪರಂಪರೆಯ ಅನುಸಂಧಾನ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts