More

    ಪ್ರಧಾನ ಮಂತ್ರಿ ಶಿಶು ವಿಕಾಸ ಯೋಜನೆ ಹೆಸರಿನಡಿ ನಕಲಿ ಶಿಶು ಯೋಜನೆ ನಡೆಸುತ್ತಿದ್ದ ಆರೋಪಿಗಳ ಬಂಧನ

    ದೆಹಲಿ: ಪ್ರಧಾನಮಂತ್ರಿ ಶಿಶು ವಿಕಾಸ ಯೋಜನೆ ಎಂಬ ಹೆಸರಿನಲ್ಲಿ ವಿವಿಧ ವೆಬ್​ಸೈಟ್​ಗಳ ಮೂಲಕ ಯೋಜನೆಗಳನ್ನು ನಡೆಸುತ್ತಿರುವ ಜಾಲವನ್ನು ಮಂಗಳವಾರ, ದೆಹಲಿ ಪೊಲೀಸರು ಭೇದಿಸಿದ್ದು,  ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ.
    Www.pmsvy-cloud.in ಎಂಬ ನಕಲಿ ವೆಬ್‌ಸೈಟ್ ಪ್ರಧಾನ್ ಹೆಸರಿನಲ್ಲಿ ನಕಲಿ ಯೋಜನೆಯನ್ನು ರೂಪಿಸಿದೆ ಎಂದು ಆರೋಪಿಸಿರುವ ರಾಷ್ಟ್ರೀಯ ಆರೋಗ್ಯ ಪ್ರಾಧಿಕಾರದ ನಿರ್ದೇಶಕರ ದೂರಿನ ಮೇರೆಗೆ ಸೈಬರ್ ಅಪರಾಧ ಘಟಕದಲ್ಲಿ ಪ್ರಕರಣ ದಾಖಲಾಗಿದೆ.

    ಇದನ್ನೂ ಓದಿ:  ಭಾರತೀಯರಿಗೆ ವರ್ಷಾಂತ್ಯಕ್ಕೆ ದೊರೆಯಲಿದೆ ಮೊದಲ ಕರೊನಾ ಲಸಿಕೆ; ಆದರೆ, ಭಾರತದ್ದಲ್ಲ….!


    ಈ ಯೋಜನೆ ಮೂಲಕ ನೋಂದಣಿ ಮತ್ತು ಮಕ್ಕಳಿಗೆ ವಿಮೆ ಸೌಲಭ ನೀಡುವ ನೆಪದಲ್ಲಿ ನಾಗರಿಕರಿಂದ ಹಣವನ್ನು ಸಂಗ್ರಹಿಸುತ್ತಿದೆ ಆರೋಪಿಸಲಾಗಿದೆ.
    ಈ ಜಾಲ ಪಂಚಾಯತ್ ಹಂತದವರೆಗೆ ಏಜೆಂಟರ ಮೂಲಕ ವೆಬ್‌ಸೈಟ್ 15,000 ಕ್ಕೂ ಹೆಚ್ಚು ನೋಂದಾಯಿತ ಸದಸ್ಯರನ್ನು ಹೊಂದಿದೆ ಎಂದು ಪೊಲೀಸರು ಮಂಗಳವಾರ ತಿಳಿಸಿದ್ದಾರೆ.
    ತನಿಖೆಯ ವೇಳೆ, ಇಬ್ಬರು ಆರೋಪಿಗಳಾದ ಪಾಟ್ನಾದ ನೀರಜ್ ಪಾಂಡೆ (28) ಮತ್ತು ಉತ್ತರ ಪ್ರದೇಶದ ಅಯೋಧ್ಯೆಯ ಆದರ್ಶ್ ಯಾದವ್ (32) ಅವರನ್ನು ಬಂಧಿಸಲಾಗಿದೆ.
    ನೋಂದಣಿಯಾದ ನಾಗರಿಕರ ದತ್ತಾಂಶವನ್ನು ಬಳಸಿಕೊಂಡು ಆಸ್ಪತ್ರೆಗಳು ಮತ್ತು ಆರೋಗ್ಯ ಹಾಗೂ ಶಿಕ್ಷಣ ಕ್ಷೇತ್ರದ ಇತರ ಸಂಸ್ಥೆಗಳಿಂದ ಕಮಿಷನ್ ತೆಗೆದುಕೊಳ್ಳಲು ಅವರು ಯೋಜಿಸಿದ್ದರು. ಈಗಾಗಲೇ ನೋಂದಾಯಿತ ಸದಸ್ಯರಿಗೆ ಇತರ ನಕಲಿ ಯೋಜನೆಗಳನ್ನು ನೀಡಲು ಮತ್ತು ಅವುಗಳ ಮೂಲಕ ವಂಚನೆಯನ್ನು ಮುಂದುವರಿಸಲು ಅವರು ಯೋಜಿಸಿದ್ದರು ಎಂಬುದು ತಿಳಿದುಬಂದಿದೆ.

    ಇದನ್ನು ಓದಿ:  ಬಿಜೆಪಿ ಮುಖಂಡನ ಹತ್ಯೆಗೆ ಚೋಟಾ ಶಕೀಲ್​ ರೂಪಿಸಿದ್ದ ಸಂಚು ವಿಫಲಗೊಳಿಸಿದ ಎಟಿಎಸ್​; ಶೂಟರ್​ ಅರೆಸ್ಟ್​


    ವಿಚಾರಣೆಯ ವೇಳೆ ಆರೋಪಿ ನೀರಜ್ ಪಾಂಡೆ, www.pmsvy-cloud.in ನಂತೆಯೇ ಒಂದು ವೆಬ್‌ಸೈಟ್ ಇದ್ದು, ಪ್ರಧಾನ ಮಂತ್ರಿ ಶಿಶು ವಿಕಾಸ್ ಯೋಜನೆ’ ಹೆಸರಿನಲ್ಲಿ ಯೋಜನೆಗಳನ್ನು ಸುವೇಂದರ್ ಯಾದವ್ ನಡೆಸುತ್ತಿರುವ ಅಂಶವನ್ನು ಬಹಿರಂಗಪಡಿಸಿದ್ದಾನೆ.
    ಆತ ಮೂಲತಃ ಬಂಧಿತ ಆರೋಪಿಯ ಪಾಲುದಾರನಾಗಿದ್ದ, ಆದರೆ ನಂತರ ಆತ ಅಲ್ಲಿಂದ ಹೊರಬಂದು ತುಸು ಭಿನ್ನವಾದ ವೆಬ್‌ಸೈಟ್ ಮೂಲಕ ಸ್ವತಂತ್ರವಾಗಿ ಈ ಕಾರ್ಯ ನಡೆಸಲಾರಂಭಿಸಿದ. ಈ ಕುರಿತು ಪೊಲೀಸ್ ತಂಡ ಪಟನಾದಲ್ಲಿ ದಾಳಿ ನಡೆಸಿ ಇದೇ ಯೋಜನೆ ಹೆಸರಿನಲ್ಲಿ ಮತ್ತೊಂದು ವೆಬ್‌ಸೈಟ್ ನಡೆಸುತ್ತಿರುವ ಆರೋಪಿ ಸುವೇಂದರ್ ಯಾದವ್ ನನ್ನು ಬಂಧಿಸಿದೆ.
    ಬಂಧಿತ ಆರೋಪಿಗಳಿಂದ ಏಳು ಸೆಲ್‌ಫೋನ್‌ಗಳು, ಮೂರು ಲ್ಯಾಪ್‌ಟಾಪ್‌ಗಳು, ಎರಡು ಕಂಪ್ಯೂಟರ್‌ಗಳು, ಕೆಲವು ನೋಟ್‌ಪ್ಯಾಡ್‌ಗಳು ಮತ್ತು ಗುರುತಿನ ಚೀಟಿಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.

    ಇದನ್ನೂ ಓದಿ:  ಈ ರಾಜ್ಯದಲ್ಲಿ ರಸ್ತೆ ಬದಿ ಮೀನು ಮಾರಾಟ ಇನ್ಮುಂದೆ ನಿಷೇಧ


    ನಕಲಿ ವೆಬ್‌ಸೈಟ್ ನಿರ್ವಾಹಕರು ಈ ಯೋಜನೆ ಹೆಸರಿನಲ್ಲಿ ಯೋಜನೆ ಆರಂಭಿಸಿದ್ದು, ಮಕ್ಕಳ ಶಿಕ್ಷಣಕ್ಕೆ ಮತ್ತು ಅವರ ಭವಿಷ್ಯಕ್ಕೆ ಆರ್ಥಿಕ ಸಹಾಯ ಮತ್ತು ಆರೋಗ್ಯ ವಿಮೆ ಸೌಲಭ್ಯ ಒದಗಿಸುವ ಹಾಗೂ ಆ ಮೂಲಕ ಕಮಿಷನ್ ಪಡೆಯುವ ಯೋಜನೆ ರೂಪಿಸಿದ್ದರು. ಈ ಪ್ರಕರಣದಲ್ಲಿ ಭಾಗಿಯಾದ ಇತರ ಆರೋಪಿಗಳನ್ನು ಬಂಧಿಸಲು ತನಿಖೆ ನಡೆಯುತ್ತಿದೆ. ಈ ಕಾರ್ಯಾಚರಣೆ ಬೆಳಕಿಗೆ ಬಂದ ನಂತರ, ಸರ್ಕಾರಿ ಯೋಜನೆಗಳು ಮತ್ತು ಅವುಗಳ ಪ್ರಯೋಜನಗಳು, ಆನ್‌ಲೈನ್ ಮಾಹಿತಿಯನ್ನು ಅಧಿಕೃತ ವೆಬ್‌ಸೈಟ್‌ಗಳಿಂದ ಪರಿಶೀಲಿಸಲು ನಾಗರಿಕರಿಗೆ ಸೂಚಿಸಲಾಗಿದೆ. ‘

    ಎಎಐನಲ್ಲಿ ಉದ್ಯೋಗ ನೀಡುವ ಹುಸಿ ಭರವಸೆ ನೀಡಿ ಲಕ್ಷಾಂತರ ರೂ. ವಂಚಿಸಿದ ಐವರ ಬಂಧನ

     

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts