More

    ಬಹಿರಂಗವಾಗುತ್ತಾ ಟೆಲಿಗ್ರಾಂ ಬಳಕೆದಾರರ ಮಾಹಿತಿ?; ಅಷ್ಟಕ್ಕೂ ದೆಹಲಿ ಹೈಕೋರ್ಟ್ ಹೇಳಿದ್ದೇನು?

    ನವದೆಹಲಿ: ಮೆಸೇಜಿಂಗ್ ಆ್ಯಪ್​ಗಳ ಪೈಕಿ ಅಡ್ವಾನ್ಸ್ಡ್​ ಎನ್ನುವಂಥ ಫೀಚರ್​ಗಳನ್ನು ಹೊಂದಿರುವಂಥ ಟೆಲಿಗ್ರಾಂ, ಸಂವಹನಕ್ಕೆ ಅತ್ಯುತ್ತಮ ಮಾಧ್ಯಮ ಎಂದರೂ ತಪ್ಪೇನಲ್ಲ. ಆದರೆ ಅದರ ಫೀಚರ್​​ಗಳನ್ನು ದುರ್ಬಳಕೆ ಮಾಡಿಕೊಂಡು ಕೆಲವರು ತಪ್ಪೆಸಗುತ್ತಿರುವುದು ಕೂಡ ನಡೆಯುತ್ತಿದೆ. ಈ ಮಧ್ಯೆ ಟೆಲಿಗ್ರಾಂ ಬಳಕೆದಾರರ ಮಾಹಿತಿ ನೀಡಬೇಕು ದೆಹಲಿ ಹೈಕೋರ್ಟ್​ ಟೆಲಿಗ್ರಾಂ ಸಂಸ್ಥೆಗೆ ಸೂಚನೆ ನೀಡಿದೆ.

    ಈಗಲೂ ಸಿನಿಮಾಗಳ ಪೈರಸಿ ಕಾಪಿಗಳನ್ನು ನೋಡಲು ಕೆಲವರು ಟೆಲಿಗ್ರಾಂ ಮೊರೆ ಹೋಗುತ್ತಾರೆ. ಸಿನಿಮಾ ಮಾತ್ರವಲ್ಲದೆ ಇನ್ನೂ ಕೆಲವು ಕಾಪಿರೈಟ್ ಉಲ್ಲಂಘನೆ ಆಗುವಂಥ ಕಂಟೆಂಟ್​​ಗಳನ್ನು ಹಾಕಿರುತ್ತಾರೆ. ಇಂಥ ಅಕ್ರಮಗಳು ಟೆಲಿಗ್ರಾಂ ಚಾನೆಲ್​ಗಳಲ್ಲಿ ಪೋಸ್ಟ್ ಆಗುತ್ತಿದ್ದು, ಹಲವರು ಅದನ್ನು ಬಳಸಿಕೊಳ್ಳುತ್ತಿದ್ದರು. ಇಂಥದ್ದೇ ಒಂದು ಪ್ರಕರಣಕ್ಕೆ ಸಂಬಂಧಿಸಿದಂತೆ ಹೈಕೋರ್ಟ್ ಈ ನಿರ್ದೇಶನ ನೀಡಿದೆ.

    ದೆಹಲಿಯ ಕೆ.ಡಿ. ಕ್ಯಾಂಪಸ್ ಪ್ರೈವೇಟ್​ ಲಿ. ಶಿಕ್ಷಕಿ ನೀತು ಸಿಂಗ್ ತಾವು ತಯಾರಿಸಿರುವ ಸ್ಟಡಿ ಮೆಟಿರೀಯಲ್​ಗಳನ್ನು ಟೆಲಿಗ್ರಾಂ ಚಾನೆಲ್​ಗಳಲ್ಲಿ ಅನಧಿಕೃತವಾಗಿ ಹಾಕಿಕೊಳ್ಳಲಾಗಿದೆ. ಇದು ಕಾಪಿರೈಟ್ ಉಲ್ಲಂಘನೆ ಎಂದು ಪ್ರಕರಣ ದಾಖಲಿಸಿದ್ದರು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ದೆಹಲಿ ಹೈಕೋರ್ಟ್​ನಲ್ಲಿ ವಿಚಾರಣೆ ನಡೆದಿದ್ದು, ಅಂಥ ಕಂಟೆಂಟ್​ಗಳನ್ನು ಹಾಕುವವರ ಮಾಹಿತಿ ನೀಡುವಂತೆ ಕೋರ್ಟ್ ನಿರ್ದೇಶಿಸಿದೆ.

    ಆದರೆ ನಮ್ಮ ಸರ್ವರ್ ಸಿಂಗಾಪುರದಲ್ಲಿದೆ ಎಂದು ಟೆಲಿಗ್ರಾಂ ಕೊಡಲು ನಿರಾಕರಿಸಿದ್ದರೂ, ಭಾರತದಲ್ಲಿ ಇಲ್ಲಿನ ಕಾನೂನಿಗೆ ತಕ್ಕಂತೆ ನಡೆದುಕೊಳ್ಳಬೇಕು ಎಂದು ಸೂಚನೆ ನೀಡಿರುವ ಹೈಕೋರ್ಟ್ ನ್ಯಾಯಾಧೀಶೆ ಪ್ರತಿಭಾ ಎಂ. ಸಿಂಗ್​, ಅಂಥವರ ಮಾಹಿತಿ ನೀಡಬೇಕು ಎಂದು ಟೆಲಿಗ್ರಾಮ್​ಗೆ ನಿರ್ದೇಶನ ನೀಡಿದ್ದಾರೆ.

    ಭದ್ರತೆಗೆ ನಿಯೋಜಿಸಿದ್ದ ಸಿಐಎಸ್​ಎಫ್​ ಯೋಧ ಪಿಸ್ತೂಲ್​-ಗುಂಡುಗಳ ಸಮೇತ ನಾಪತ್ತೆ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts