More

    ದೆಹಲಿಯ ಎಲ್ಲಾ ಪತ್ರಕರ್ತರಿಗೆ ಕರೊನಾ ಪರೀಕ್ಷೆ ನಡೆಸಲು ಸಿಎಂ ಅನುಮತಿ: 53 ಮಂದಿಯಲ್ಲಿ ಸೋಂಕು ಪತ್ತೆ ಹಿನ್ನೆಲೆ- ಟ್ವೀಟ್‌ ಮೂಲಕ ಅನುಮತಿ ಕೋರಲಾಗಿತ್ತು

    ನವದೆಹಲಿ: ಕರೊನಾ ವೈರಸ್‌ ಕುರಿತಂತೆ ಸುದ್ದಿ ಮಾಡಲು ಹೋಗಿದ್ದ ಹಾಗೂ ಅವರ ಒಡನಾಟದಲ್ಲಿದ್ದ 53 ಪತ್ರಕರ್ತರಿಗೆ ದೆಹಲಿಯಲ್ಲಿ ಕೊರೊನಾ ಸೋಂಕು ನಿನ್ನೆ ದೃಢಪಟ್ಟಿರುವ ಹಿನ್ನೆಲೆಯಲ್ಲಿ, ಇಲ್ಲಿರುವ ಎಲ್ಲಾ ಮಾಧ್ಯಮದವರಿಗೆ ಕರೊನಾ ಪರೀಕ್ಷೆ ಮಾಡಿಸಲು ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್‌ ಅನುಮತಿ ನೀಡಿದ್ದಾರೆ.

    ಇಷ್ಟೊಂದು ಬೃಹತ್‌ ಪ್ರಮಾಣದಲ್ಲಿ ಸೋಂಕು ಪತ್ತೆಯಾಗಿರುವುದಕ್ಕೆ ಪತ್ರಕರ್ತರು ತೀವ್ರ ಆತಂಕಕ್ಕೆ ಒಳಗಾಗಿದ್ದು, ಎಲ್ಲರಿಗೂ ಪರೀಕ್ಷೆ ಮಾಡಿಸಿಕೊಳ್ಳಲು ಅವಕಾಶ ನೀಡಬೇಕು ಎಂದು ಕೋರಿ ಅನುರಾಗ್‌ ಧಾಂಡಾ ಎನ್ನುವವರು ಟ್ವೀಟ್‌ ಮೂಲಕ ಮುಖ್ಯಮಂತ್ರಿಗಳನ್ನು ಕೋರಿದ್ದರು. ಅವರ ಟ್ವೀಟ್‌ಗೆ ಇಂದು ಪ್ರತಿಕ್ರಿಯಿಸಿರುವ ಕೇಜ್ರಿವಾಲ್‌, ನಾವು ಅದಕ್ಕೆ ಸಿದ್ಧತೆ ಮಾಡಿಕೊಡುವುದಾಗಿ ಹೇಳಿದ್ದಾರೆ.

    ಏಪ್ರಿಲ್‌ 16 ಮತ್ತು 17ರಂದು ನಗರದ ಆಜಾದ್‌ ಮೈದಾನದಲ್ಲಿ ನಡೆದಿದ್ದ ವಿಶೇಷ ಶಿಬಿರದಲ್ಲಿ ಪತ್ರಕರ್ತರಿಗೆ ಸೋಂಕು ಪರೀಕ್ಷೆ ನಡೆಸಲಾಗಿತ್ತು. ಛಾಯಾಗ್ರಾಹಕರು, ವೀಡಿಯೋ ಜರ್ನಲಿಸ್ಟ್‌ಗಳು ಹಾಗೂ ವರದಿಗಾರರು ಸೇರಿ 171 ಪತ್ರಕರ್ತರ ಸ್ಯಾಂಪಲ್‌ಗಳನ್ನು ಸಂಗ್ರಹಿಸಲಾಗಿತ್ತು.

    ಆ ಪೈಕಿ 53 ಮಂದಿಯಲ್ಲಿ ಸೋಂಕು ಪತ್ತೆಯಾಗಿದೆ. ಎಲ್ಲರನ್ನೂ ಐಸೊಲೇಷನ್‌ನಲ್ಲಿ ಇಡಲಾಗಿದೆ ಎಂದು ಬೃಹತ್‌ ಮುಂಬೈ ಮಹಾನಗರ ಪಾಲಿಕೆ ಅಧಿಕಾರಿಗಳು ಹೇಳಿದ್ದಾರೆ. ಈ ಸಂಖ್ಯೆ ಇನ್ನು ಏರುವ ಸಾಧ್ಯತೆ ಇದೆ ಎಂದು ಅಧಿಕಾರಿಗಳು ಹೇಳಿದ್ದಾರೆ. ಒಂದೇ ಕಡೆಗಳಲ್ಲಿ ಇಷ್ಟು ಪ್ರಮಾಣದ ಪತ್ರಕರ್ತರಲ್ಲಿ ಸೋಂಕು ಕಾಣಿಸಿಕೊಂಡಿರುವುದು ಮಾಧ್ಯಮ ವಲಯದಲ್ಲಿ ಆತಂಕ ಸೃಷ್ಟಿಸಿದೆ. ಆದ್ದರಿಂದ ಮಾಧ್ಯಮ ಕ್ಷೇತ್ರದಲ್ಲಿ ಕೆಲಸ ನಿರ್ವಹಿಸುತ್ತಿರುವ ಪ್ರತಿಯೊಬ್ಬರಿಗೂ ಪರೀಕ್ಷೆ ಮಾಡಿಸುವಂತೆ ಅನುರಾಗ್‌ ಕೋರಿದ್ದರು.

    ಈ ನಡುವೆ, ಪತ್ರಕರ್ತರ ಪ್ರಾಥಮಿಕ ಹಾಗೂ ಸೆಕೆಂಡರಿ ಸಂಪರ್ಕಿತರನ್ನು ಪತ್ತೆಹಚ್ಚುವ ಕಾರ್ಯಗಳು ಮುಂದುವರೆದಿವೆ ಎಂದು ಬಿಎಂಸಿ ವಕ್ತಾರ ವಿಜಯ್‌ ಕಬಾಳೆ ಹೇಳಿದ್ದಾರೆ. (ಏಜೆನ್ಸೀಸ್‌)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts