More

    ಪಡೆದ ಮತ, ಗೆಲುವಿನ ಅಂತರವೆಷ್ಟು?: ಕಳೆದ ಬಾರಿಗೆ ಹೋಲಿಸಿದರೆ ಕೊಂಚ ಹಿನ್ನಡೆ ಕಂಡ ಕೇಜ್ರಿವಾಲ್​

    ನವದೆಹಲಿ: ದೆಹಲಿ ವಿಧಾನಸಭಾ ಚುನಾವಣೆಯಲ್ಲಿ ಭರ್ಜರಿ ಬಹುಮತ ಸಾಧಿಸಿ ಮೂರನೇ ಅವಧಿಗೆ ಆಮ್​ ಆದ್ಮಿ ಪಕ್ಷ ಅಧಿಕಾರಕ್ಕೇರಲು ಸಿದ್ಧವಾಗಿದೆ. 3ನೇ ಅವಧಿಗೆ ಸಿಎಂ ಆಗುವ ಸಂತಸದಲ್ಲಿರುವ ಅರವಿಂದ್​ ಕೇಜ್ರಿವಾಲ್​ ಚುನಾವಣೆಯಲ್ಲಿ ಎದುರಾಳಿ ಬಿಜೆಪಿ ಅಭ್ಯರ್ಥಿಯನ್ನು ಬರೋಬ್ಬರಿ 21,697 ಮತಗಳ ಅಂತರದಿಂದ ಸೋಲಿಸಿದ್ದಾರೆ.

    ನವದೆಹಲಿ ಕ್ಷೇತ್ರದಿಂದ ಕೇಜ್ರಿವಾಲ್​ ಕಣಕ್ಕಿಳಿದಿದ್ದರು. ಎದುರಾಳಿಯಾಗಿ ಬಿಜೆಪಿಯಿಂದ ಸುನೀಲ್​ ಕುಮಾರ್​ ಯಾದವ್​ ಸ್ಪರ್ಧಿಸಿದ್ದರು. 46526 ಇವಿಎಂ ಮತಗಳು ಹಾಗೂ 232 ಅಂಚೆ ಮತ ಸೇರಿದಂತೆ ಒಟ್ಟು 46758 ಮತಗಳನ್ನು ಕೇಜ್ರಿವಾಲ್​ ಪಡೆದರು. ಈ ಮೂಲಕ ಸುನೀಲ್​ ಕುಮಾರ್​ ಯಾದವ್​ ಎದುರು 21,697 ಮತಗಳ ಅಂತರದಿಂದ ಭರ್ಜರಿ ಜಯ ಸಾಧಿಸಿದ್ದಾರೆ.

    ಸುನೀಲ್​ ಕುಮಾರ್​ ಅವರು 24,876 ಇವಿಎಂ ಮತಗಳು ಹಾಗೂ 185 ಅಂಚೆ ಮತ ಸೇರಿ ಒಟ್ಟು 25,061 ಮತಗಳನ್ನು ಮಾತ್ರ ಪಡೆದಿದ್ದಾರೆ.

    ಕಳೆದ ಬಾರಿಯ ಚುನಾವಣೆಯಲ್ಲಿ ಅರವಿಂದ್ ಕೇಜ್ರಿವಾಲ್​ ಬರೋಬ್ಬರಿ 31,583 ಮತಗಳ ಅಂತರದಲ್ಲಿ ಜಯ ಸಾಧಿಸಿದ್ದರು. ಕಳೆದ ಬಾರಿಗೆ ಹೋಲಿಸಿದರೆ, ಈ ಬಾರಿಯ ಅಂತರದಲ್ಲಿ ಕೊಂಚ ಹಿನ್ನಡೆಯಾಗಿದೆ.

    ಇನ್ನು ಚುನಾವಣಾ ಫಲಿತಾಂಶಕ್ಕೆ ಬರುವುದಾರೆ, ಸದ್ಯದ ಟ್ರೆಂಟ್​ ಪ್ರಕಾರ ಒಟ್ಟು 70 ಸ್ಥಾನಗಳಲ್ಲಿ ಈಗಾಗಲೇ 58 ಸ್ಥಾನಗಳಲ್ಲಿ ಗೆಲವು ಸಾಧಿಸಿರುವ ಆಪ್​ ಉಳಿದ 4 ಕ್ಷೇತ್ರಗಳಲ್ಲಿ ಮುನ್ನಡೆಯನ್ನು ಕಾಯ್ದುಕೊಂಡಿದೆ. ಬಿಜೆಪಿ 7 ಸ್ಥಾನಗಳಲ್ಲಿ ವಿಜಯೋತ್ಸವ ಆಚರಿಸಿದ್ದು, 1 ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸಿದೆ. ಉಳಿದಂತೆ ಕಾಂಗ್ರೆಸ್​ ಖಾತೆ ತೆರೆಯುವಲ್ಲಿ ವಿಫಲವಾಗಿದೆ. (ಏಜೆನ್ಸೀಸ್​)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts