More

    ಚುನಾವಣೋತ್ತರ ಸಮೀಕ್ಷೆ ಪ್ರಕಾರ ದೆಹಲಿ ವಿಧಾನಸಭಾ ಚುನಾವಣೆಯಲ್ಲಿ ಮೋದಿ, ಕೇಂದ್ರ ಪರ ಮತ ಚಲಾವಣೆ ಆಗಿದ್ದು ಶೇ.57ಕ್ಕೂ ಹೆಚ್ಚು!

    ನವದೆಹಲಿ: ದೆಹಲಿ ವಿಧಾನಸಭಾ ಚುನಾವಣೆಯಲ್ಲಿ 370ನೇ ವಿಧಿ ರದ್ದು, ರಾಮ ಮಂದಿರ ನಿರ್ಮಾಣ, ತ್ರಿವಳಿ ತಲಾಕ್​, ಪೌರತ್ವ ತಿದ್ದುಪಡಿ ಕಾಯ್ದೆ ಮತ್ತು ಶಾಹಿನ್​ಬಾಘ್​ನಂತಹ ವಿಚಾರಗಳು ಶೇ.2 ಮಾತ್ರ ಪರಿಗಣನೆಗೆ ಬಂದಿದ್ದವು ಎಂದು ಚುನಾವಣೋತ್ತರ ಸಮೀಕ್ಷೆ ಬಹಿರಂಗಗೊಳಿಸಿದೆ.

    ಇಂಡಿಯಾ ಟುಡೇ- ಆಕ್ಸಿಸ್​ ಮೈ ಇಂಡಿಯಾ ನಡೆಸಿದ ಸಮೀಕ್ಷೆಯಲ್ಲಿ ಈ ವಿಷಯ ತಿಳಿಸಿದ್ದು, ಬಿಜೆಪಿಗೆ ಮತ ಚಲಾಯಿಸದವರ ಪೈಕಿ ಹೆಚ್ಚಿನವರು ದೇಶದ ಸುರಕ್ಷೆ ಬಗ್ಗೆ ಮಾತನಾಡಿದ್ದಾರೆ ಎಂದು ಸಮೀಕ್ಷೆ ತಿಳಿಸಿದೆ.

    ಬಿಜೆಪಿ ಬಯಸುವ ಶೇ.25 ಮಂದಿ ಮತ ಚಲಾಯಿಸಿರುವುದು ಪ್ರಧಾನಮಂತ್ರಿ ನರೇಂದ್ರ ಮೋದಿಗಾಗಿ. ಜತೆಗೆ ಬಿಜೆಪಿ ಬೆಂಬಲಿಸುವ ಶೇ.57 ಮಂದಿ ಕೇಂದ್ರ ಸರ್ಕಾರದ ಒಳ್ಳೆಯ ಕೆಲಸ ಕಾರ್ಯಗಳನ್ನು ಗಮನಿಸಿ ಮತ ಚಲಾಯಿಸಿದ್ದಾರೆ ಎನ್ನುತ್ತದೆ ಸರ್ವೇ.

    ಶನಿವಾರ ಬಿಡುಗಡೆಯಾದ ಸಮೀಕ್ಷೆಗಳ ಪ್ರಕಾರ ಆಮ್​ ಆದ್ಮಿ ಪಕ್ಷ 59ರಿಂದ 68 ಸ್ಥಾನ ಪಡೆಯಲಿದ್ದು, ಬಿಜೆಪಿ 2 ರಿಂದ 11ಕ್ಕೆ ತೃಪ್ತಿ ಪಟ್ಟುಕೊಳ್ಳಬೇಕಿದೆ. ಕಾಂಗ್ರೆಸ್​ ಶೂನ್ಯ ಸಂಪಾದಿಸಲಿದೆ. ಬಿಜೆಪಿಯ ಶೇ.48 ಮತಗಲೂ ಆಪ್​ಗೆ ಜಾರಿವೆ. ಇವರೆಲ್ಲ ಕೆಳ ವರ್ಗ ಮತ್ತು ಅತ್ಯಂತ ಕೆಳ ವರ್ಗದ ಮತದಾರರು ಎನ್ನುತ್ತದೆ ಸಮೀಕ್ಷೆ.

    ಬಿಜೆಪಿ ಬೆಂಬಲಿಸದೇ ಇರುವವರ ಪ್ರಕಾರ ಬಿಜೆಪಿ ಅಭಿವೃದ್ಧಿ ಪರ ಕೆಲಸ ಮಾಡುತ್ತಿಲ್ಲ ಎಂದು ಅಭಿಪ್ರಾಯ ಪಟ್ಟಿದ್ದಾರೆ. ಇದರಿಂದಾಗಿ ಶೇ.42ರಷ್ಟು ಮತಗಳನ್ನು ಬಿಜೆಪಿ ಕಳೆದುಕೊಂಡಿದೆ. ಇನ್ನು ಶೇ.14 ಮಂದಿ ದೆಹಲಿಯಲ್ಲಿ ಸ್ವತಂತ್ರ್ಯ ರಾಜ್ಯ ಸರ್ಕಾರ ಬೇಕು ಎಂದಿದ್ದಾರೆ. (ಏಜೆನ್ಸೀಸ್​)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts