More

    ಮಹಿಳೆಯರು, ಮೊದಲ ಬಾರಿಗೆ ವೋಟ್​ ಮಾಡಿದವರ ಒಲವು ಕೇಜ್ರಿವಾಲ್​ ಕಡೆಗೆ: ಸಮೀಕ್ಷೆಯಲ್ಲಿ ಬಹಿರಂಗ

    ನವದೆಹಲಿ: ದೆಹಲಿ ವಿಧಾನಸಭಾ ಚುನಾವಣೆಯ ಮತದಾನ ಇಂದು ಮುಗಿದಿದ್ದು, ಆಮ್​ ಆದ್ಮಿ ಪಕ್ಷ ಭರ್ಜರಿ ಬಹುಮತ ಸಾಧಿಸಲಿದೆ ಎಂದು ಮತದಾನೋತ್ತರ ಸಮೀಕ್ಷೆಗಳು ಭವಿಷ್ಯ ನುಡಿದಿವೆ. ಇದು ಎಷ್ಟರಮಟ್ಟಿಗೆ ಸತ್ಯವಾಗುತ್ತದೆ ಎಂಬುದು ಫೆ. 11ರ ಫಲಿತಾಂಶ ದಿನದಂದು ನಿರ್ಧಾರವಾಗಲಿದೆ. ಆದರೂ, ಬಹುತೇಕ ಎಕ್ಸಿಟ್​​ ಪೋಲ್​ ನಿಜವಾಗಿರುವುದರಿಂದ ಇದನ್ನು ಅಲ್ಲಗೆಳೆಯುವಂತಿಲ್ಲ.

    ಈ ಬಾರಿಯ ದೆಹಲಿ ವಿಧಾನಸಭಾ ಚುನಾವಣೆಯಲ್ಲಿ ಹೆಚ್ಚಾಗಿ ಮಹಿಳೆಯರು ಮತ್ತು ಮೊದಲ ಬಾರಿಗೆ ಮತ ಚಲಾಯಿಸಿದವರು ಆಪ್​ಗೆ ಒಲವು ತೋರಿದ್ದಾರೆ ಎಂಬುದು ಇಂಡಿಯಾ ಟುಡೆ-ಆ್ಯಕ್ಸಿಸ್​ ಮೈ ಇಂಡಿಯಾ ಎಕ್ಸಿಟ್​ ಪೋಲ್​ನಲ್ಲಿ ಬಹಿರಂಗವಾಗಿದೆ.

    ಕಳೆದ ಐದು ವರ್ಷಗಳಲ್ಲಿ ಆಪ್​ ಸರ್ಕಾರದ ಅಭಿವೃದ್ಧಿ ಕಾರ್ಯಗಳ ಆಧಾರದ ಮೇಲೆ ಮತ ಚಲಾಯಿಸಿದ್ದಾರೆ ಎಂದು ಸಮೀಕ್ಷೆ ಹೇಳಿದೆ. ಅದರಲ್ಲೂ ಉಚಿತ ನೀರು ಮತ್ತು ವಿದ್ಯುತ್​ ಜನರನ್ನು ಹೆಚ್ಚು ಆಕರ್ಷಿಸಿದೆ. ಮಹಿಳೆಯರಿಗೆ ಉಚಿತ ಬಸ್​ ಪ್ರಯಾಣ ನಿರ್ಧಾರವು ಹೆಚ್ಚು ಪ್ರಖ್ಯಾತಿಯನ್ನು ಆಪ್​ಗೆ ತಂದುಕೊಟ್ಟಿದೆ ಎಂದು ಸಮೀಕ್ಷೆ ಹೇಳಿದೆ.

    ಇದನ್ನೂ ಓದಿ: ದೆಹಲಿ ವಿಧಾನಸಭಾ ಚುನಾವಣೆ: ಕಳೆದ ಬಾರಿಗಿಂತಲೂ ನೀರಸ ಮತದಾನ, ಎಕ್ಸಿಟ್​ ಫೋಲ್​ನಲ್ಲಿ ಕೇಜ್ರಿವಾಲ್​ ಕಮಾಲ್​!

    ಪುರಷರಿಗಿಂತ ಶೇ 6 ರಷ್ಟು ಹೆಚ್ಚು ಮಹಿಳೆಯರು ಆಪ್​ಗೆ ಮತ ಚಲಾಯಿಸಿದ್ದಾರೆ. ಯುವಕರು, ವಿದ್ಯಾರ್ಥಿಗಳು ಹಾಗೂ ಮೊದಲ ಬಾರಿಗೆ ಮತ ಚಲಾಯಿಸುವವರು ಆಪ್​ ಅನ್ನೇ ಆರಿಸಿಕೊಂಡಿರುವುದು ಈ ಬಾರಿಯ ವಿಶೇಷವಾಗಿದೆ.

    ಇನ್ನು ಆಪ್​ನ ಕೆಲ ಶಾಸಕರು ವಿರುದ್ಧವು ಅಸಮಾಧಾನ ಕಂಡುಬಂದಿದ್ದು ಸಿಎಂ ಅರವಿಂದ್​ ಕೇಜ್ರಿವಾಲ್​ ಮುಖ ನೋಡಿಕೊಂಡು ಮತ ಚಲಾಯಿಸಿರುವುದಾಗಿ ಸಮೀಕ್ಷಾ ವೇಳೆ ಜನರು ಹೇಳಿಕೊಂಡಿದ್ದಾರೆ.

    ಒಟ್ಟಾರೆ ದೆಹಲಿ ಚುನಾವಣಾ ಕಣದಲ್ಲಿ ಆಪ್​ 59 ರಷ್ಟು ಮತ ಪ್ರಮಾಣವನ್ನು ಪಡೆದುಕೊಂಡರೆ, ಬಿಜೆಪಿ ಶೇ. 43 ಮತ ಹಂಚಿಕೆ ಪಡೆದುಕೊಂಡಿದೆ. ಒಟ್ಟು 70 ವಿಧಾನಸಭಾ ಕ್ಷೇತ್ರಗಳಲ್ಲಿ ಆಪ್​ 59 ರಿಂದ 68 ಮತ್ತು ಬಿಜೆಪಿ 2 ರಿಂದ 11 ಹಾಗೂ ಕಾಂಗ್ರೆಸ್​ ಶೂನ್ಯ ಸಂಪಾದಿಸಲಿದೆ ಎಂದು ಎಕ್ಸಿಟ್​ ಪೋಲ್​ ಹೇಳಿದೆ. (ಏಜೆನ್ಸೀಸ್​)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts