More

    VIDEO| ರಶೀದಿ ಕೊಡದೆ ದಂಡ ಸ್ವೀಕರಿಸಿದ ಟ್ರಾಫಿಕ್​​ ಪೊಲೀಸ್​; ಕರ್ತವ್ಯದಿಂದ ಅಮಾನತು

    ನವದೆಹಲಿ: ಭ್ರಷ್ಟಾಚಾರದ ಬಗ್ಗೆ ಶೂನ್ಯ ಸಹಿಷ್ಣುತೆಯನ್ನು ಹೊಂದಿರುವುದಾಗಿ ಒತ್ತಿ ಹೇಳುವ ದೆಹಲಿ ಸರ್ಕಾರವು ಟ್ರಾಫಿಕ್​ ಪೊಲೀಸ್​ ಒಬ್ಬರು ಮಾಡಿರುವ ಕೆಲಸದಿಂದಾಗಿ ತೀವ್ರ ಟೀಕೆಗೆ ಗುರಿಯಾಗಿದೆ.

    ಕೊರಿಯನ್​ ದೇಶದ ಪ್ರಜೆಯೊಬ್ಬರಿಗೆ ಟ್ರಾಫಿಕ್​ ನಿಯಮ ಉಲ್ಲಂಘಿಸಿದ್ದೀರಾ ಎಂದು ಹೇಳಿ ಪೊಲೀಸ್​ ಅಧಿಕಾರಿ ಆತನಿಗೆ ಐದು ಸಾವಿರ ರೂಪಾಯಿ ದಂಡ ವಿಧಿಸಿದ್ದು, ಅದರ ರಶೀದಿ ನೀಡಿದೆ ಇರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​ ಆಗಿದೆ. ಈ ಸಂಬಂಧ ಪೊಲೀಸ್​ ಅಧಿಕಾರಿಯನ್ನು ಸೇವೆಯಿಂದ ಅಮಾನತು ಮಾಡಲಾಗಿದೆ.

    ವಿಡಿಯೋ ಕೃಪೆ: NDTV

    ಇದನ್ನೂ ಓದಿ: ಗ್ಯಾರಂಟಿ ಯೋಜನೆಗಳಿಂದ ಜನರು ಖುಷಿ: ಸಚಿವ ಕೃಷ್ಣಭೈರೇಗೌಡ

    ವೈರಲ್​ ಆಗಿರುವ ವಿಡಿಯೋದಲ್ಲಿ ಟ್ರಾಫಿಕ್​ ಪೊಲೀಸ್​ ಒಬ್ಬರು ಕೊರಿಯನ್​ ಪ್ರಜೆ ಪ್ರಯಾಣಿಸುತ್ತಿದ್ದ ಕಾರನ್ನು ನಿಲ್ಲಿಸಿ ಸಂಚಾರಿ ನಿಯಮವನ್ನು ಉಲ್ಲಂಘಿಸಿರುವುದಾಗಿ ಹೇಳುತ್ತಾರೆ. ಬಳಿಕ ಆತನಿಗೆ ಐದು ಸಾವಿರ ರೂಪಾಯಿ ದಂಡ ಪಾವತಿಸುವಂತೆ ಹೇಳುತ್ತಾರೆ. ಬಳಿಕ ಆತನ ಮೊದಲಿಗೆ ಭಾಷೆ ಅರ್ಥವಾಗದೆ 500 ರೂಪಾಯಿ ಕೊಡುತ್ತಾನೆ.

    ಬಳಿಕ ಅಧಿಕಾರಿಯೂ ಆತನಿಗೆ 500 ರೂ. ಅಲ್ಲ ಐದು ಸಾವಿರ ರೂಪಾಯಿ ಎಂದು ಅರ್ಥ ಮಾಡಿಸಿ ಆತನಿಂದ ಹಣ ಪಡೆಯುತ್ತಾರೆ. ಆದರೆ, ಆತ ಹಣ ಪಾವತಿಸಿದ್ದಕ್ಕಾಗಿ ಯಾವುದೇ ರಶೀದಿ ಕೊಡದೆ ಇರುವುದು ಕಾರಿನ ಡ್ಯಾಶ್​​ಕ್ಯಾಮ್​ನಲ್ಲಿ ಸೆರೆಯಾಗಿದೆ. ಇದೀಗ ಈ ವಿಡಿಯೋ ಎಲ್ಲೆಡೆ ವೈರಲ್​ ಆಗಿದ್ದು ಅಧಿಕಾರ ದುರ್ಬಳಕೆ ಆರೋಪದ ಮೇಲೆ ಟ್ರಾಫಿಕ್​ ಪೊಲೀಸ್​ ತಮ್ಮ ಕೆಲಸವನ್ನು ಕಳೆದುಕೊಂಡಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts