More

    ಮುಂದಿನ ಬಾರಿಯೂ ನಿಮ್ಮ ತಂದೆಯೇ ಸಿಎಂ ಆಗುತ್ತಾರೆ ಎಂಬ ನಂಬಿಕೆ ಇದೆಯಾ ಎಂದು ಕೇಳಿದ್ದಕ್ಕೆ ಕೇಜ್ರಿವಾಲ್ ಪುತ್ರ ಕೊಟ್ಟಿದ್ದು ಎಂಥಾ ಉತ್ತರ ಗೊತ್ತಾ?

    ನವದೆಹಲಿ: ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ವಾದ್ರಾ ಅವರ ಮಗ ರೈಹಾನ್​ ವಾದ್ರಾ ಇಂದಿನ ದೆಹಲಿ ವಿಧಾನಸಭಾ ಚುನಾವಣೆಯಲ್ಲಿ ಮೊದಲ ಬಾರಿಗೆ ತಮ್ಮ ಮತ ಚಲಾಯಿಸಿದರು.

    ರೈಹಾನ್​ ಕಳೆದ ವರ್ಷ 18ನೇ ವಯಸ್ಸಿಗೆ ಕಾಲಿಟ್ಟಿದ್ದರೂ ಲೋಕಸಭೆ ಚುನಾವಣೆಯಲ್ಲಿ ಮತ ಹಾಕಿರಲಿಲ್ಲ.
    ಮತ ಚಲಾಯಿಸಿದ ಬಳಿಕ ಮಾತನಾಡಿ, ಪ್ರಜಾಪ್ರಭುತ್ವದ ಪ್ರಕ್ರಿಯೆಯಲ್ಲಿ ಭಾಗಿಯಾಗಿದ್ದಕ್ಕೆ ತುಂಬ ಸಂತೋಷ ಇದೆ. ಕಳೆದ ಲೋಕಸಭಾ ಚುನಾವಣೆ ವೇಳೆ ನನಗೆ ಪರೀಕ್ಷೆ ಇದ್ದಿದ್ದರಿಂದ ಮತ ಹಾಕಲು ಸಾಧ್ಯವಾಗಿರಲಿಲ್ಲ. ಪ್ರತಿಯೊಬ್ಬರೂ ಕಡ್ಡಾಯವಾಗಿ ತಮ್ಮ ಹಕ್ಕುಗಳನ್ನು ಚಲಾಯಿಸಬೇಕು ಎಂದು ಹೇಳಿದರು.

    ಈ ವೇಳೆ ವರದಿಗಾರರು ಕೇಳುತ್ತಿದ್ದ ಪ್ರಶ್ನೆಗಳನ್ನು ಪ್ರಿಯಾಂಕಾ ಗಾಂಧಿ ತಮ್ಮ ಮಗನಿಗೆ ಮತ್ತೊಮ್ಮೆ ಹೇಳಿ, ಅವನು ಉತ್ತರಿಸಲು ಸಹಕರಿಸುತ್ತಿದ್ದರು.

    ನಾನು ದೆಹಲಿಯಲ್ಲಿ ವಾಸವಿದ್ದವನು. ಈ ನನ್ನ ನಗರ ಅಭಿವೃದ್ಧಿಹೊಂದುವುದನ್ನು ನಾನು ನೋಡಬೇಕು. ಜಗತ್ತಿನ ಅತ್ಯುತ್ತಮ ಪಟ್ಟಣಗಳ ಸಾಲಿಗೆ ದೆಹಲಿಯೂ ಸೇರಬೇಕು. ದೆಹಲಿಯ ಜನರಿಗೆ ಒಳಿತು ಮಾಡುವವರಿಗೆ ನಾನು ಮತ ಹಾಕಿದ್ದೇನೆ ಎಂದು ಸುದ್ದಿಗಾರರ ಪ್ರಶ್ನೆಗೆ ಉತ್ತರ ನೀಡಿದರು.

    ಮುಂದೆ ಅಧಿಕಾರಕ್ಕೆ ಬರಲಿರುವ ಸರ್ಕಾರ ಮಾಡಲೇಬೇಕಾದ ಮುಖ್ಯ ಕೆಲಸ ಏನು? ನಿಮ್ಮ ಕಣ್ಣಲ್ಲಿ ಯಾವುದು ದೊಡ್ಡ ಸಮಸ್ಯೆ ಎಂಬ ಪ್ರಶ್ನೆಗೆ ಉತ್ತರಿಸಿದ ರೈಹಾನ್​, ಸಾರ್ವಜನಿಕರಿಗಾಗಿಯೇ ಇರುವ ಇರುವ ಸಾರಿಗೆ ವ್ಯವಸ್ಥೆಯನ್ನು ಪ್ರತಿಯೊಬ್ಬರೂ ಸರಿಯಾಗಿ ಬಳಸಿಕೊಳ್ಳಬೇಕು. ಇದರಲ್ಲಿ ವಿದ್ಯಾರ್ಥಿಗಳಿಗೆ ಸಬ್ಸಿಡಿ ಇಡಬೇಕು ಎಂದು ಹೇಳಿದರು.
    ದೆಹಲಿ ಮುಖ್ಯಮಂತ್ರಿ ಅರವಿಂದ್​ ಕೇಜ್ರಿವಾಲ್​ ಅವರ ಪುತ್ರ ಪುಲಕಿತ್​ ಕೂಡ ಇದೇ ಮೊದಲ ಬಾರಿಗೆ ಇಂದು ಮತ ಹಾಕಿದ್ದಾರೆ.

    ನಿಮಗೆ ನಿಮ್ಮ ತಂದೆಯೇ ಮುಂದಿನ ಮುಖ್ಯಮಂತ್ರಿ ಆಗುತ್ತಾರೆ ಎಂದು ನಂಬಿಕೆ ಇದೆಯಾ ಪ್ರಶ್ನಿಸಿದ್ದಕ್ಕೆ ಉತ್ತರಿಸಿದ ಅವರು, ಜನರು ಯಾರನ್ನು ಆಯ್ಕೆ ಮಾಡುತ್ತಾರೋ, ಅವರೇ ಆಗುತ್ತಾರೆ ಎಂದರು.(ಏಜೆನ್ಸೀಸ್​)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts