More

    ನವಲಗುಂದ ರೈತರಿಂದ ದೆಹಲಿ ಚಲೋ

    ನವಲಗುಂದ: ಈಗ ನಡೆಯುತ್ತಿರುವ ಸಂಸತ್ ಅಧಿವೇಶನದಲ್ಲಿ ಸಂಸದ ಪ್ರಲ್ಹಾದ ಜೋಶಿ ಅವರು ಮಹದಾಯಿ, ಕಳಸಾ-ಬಂಡೂರಿ ಯೋಜನೆ ಕಾಮಗಾರಿ ಆರಂಭಕ್ಕೆ ಗೆಜೆಟ್ ಅಧಿಸೂಚನೆ ಹೊರಡಿಸಲು ಒತ್ತಾಯಿಸಿ ರೈತರು ದೆಹಲಿ ಚಲೋ ಹೊರಟರು.

    ಪಟ್ಟಣದ ರೈತ ಭವನದಲ್ಲಿ ಪಕ್ಷಾತೀತ ಹೋರಾಟ ಸಮಿತಿ ವತಿಯಿಂದ ರೈತ ಹುತಾತ್ಮ ಬಸಪ್ಪ ಲಕ್ಕುಂಡಿ ಅವರ ವೀರಗಲ್ಲಿಗೆ ಭಾನುವಾರ ಮಾಲಾರ್ಪಣೆ ಮಾಡಿ, ದೆಹಲಿ ಚಲೋ ಚಳವಳಿ ಆರಂಭಿಸಿದರು.

    ಈ ವೇಳೆ ರೈತ ಮುಖಂಡ ಸುಬಾಸಚಂದ್ರಗೌಡ ಪಾಟೀಲ ಮಾತನಾಡಿ, ಈಗಾಗಲೇ ಮಹದಾಯಿ ನ್ಯಾಯಾಧಿಕರಣವು 13.5 ಟಿಎಂಸಿ ನೀರು ಬಳಕೆ ಮಾಡಿಕೊಳ್ಳಲು ಸೂಚಿಸಿದೆ. ಆದರೂ, ಸರ್ಕಾರ ಯಾವುದೇ ರೀತಿಯ ಕಾಮಗಾರಿ ಆರಂಭಿಸಿಲ್ಲ. ಹೀಗಾಗಿ, ಕೇಂದ್ರ ನಿರಾವರಿ ಸಚಿವ ಗಜೇಂದ್ರಸಿಂಗ್ ಶೇಖಾವತ್ ಅವರನ್ನು ಭೇಟಿ ಮಾಡಿ, ಶೀಘ್ರ ಯೋಜನೆ ಜಾರಿ ಮಾಡುವಂತೆ ಒತ್ತಡ ಹೇರಲು ದೆಹಲಿ ಚಲೋ ಚಳವಳಿ ಕೈಗೊಳ್ಳುವುದು ಅನಿರ್ವಾಯವಾಗಿದೆ. ಮಹದಾಯಿ ಕುರಿತು ಗೆಜೆಟ್​ನಲ್ಲಿ ಅಧಿಸೂಚನೆ ಹೊರಡಿಸದಿದ್ದರೆ, ಮುಂದಿನ ದಿನಗಳಲ್ಲಿ ಪರಿಣಾಮ ನೆಟ್ಟಗಿರದು ಎಂದು ಎಚ್ಚರಿಕೆ ನೀಡಿದರು.

    ಸಮಿತಿ ಅಧ್ಯಕ್ಷ ಸಿದ್ದಪ್ಪ ಮುಪೈನವರ, ಯಲ್ಲಪ್ಪ ದಾಡಿಬಾಯಿ, ಗೋವಿಂದರಡ್ಡಿ ಮೊರಬ, ಯಲ್ಲರಡ್ಡಿ ವನಹಳ್ಳಿ, ಗಂಗಪ್ಪ ಸಂಗಟ್ಟಿ, ಐ.ಡಿ. ಬಾಗವಾನ, ಕರಿಯಪ್ಪ ತಳವಾರ, ಈರಪ್ಪ ಕಟಗಿ, ಸಿದ್ದಲಿಂಗಪ್ಪ ಹಳ್ಳದ, ಬಸವರಾಜ ಬಳ್ಳೂಳ್ಳಿ, ಶಿವಣ್ಣ ಹುಬ್ಬಳ್ಳಿ, ಭಗವಂತಪ್ಪ ಪುಟ್ಟನವರ, ರಘುನಾಥ ನಡುವಿನಮನಿ, ಎಲ್.ಕೆ. ಶಿವನಗೌಡ್ರ, ಈಶ್ವರಯ್ಯ ಹಿರೇಮಠ, ಮಲ್ಲಿಕಾರ್ಜುನಗೌಡ ಪಾಟೀಲ, ದ್ಯಾಮಣ್ಣ ಜಂತಲಿ, ರವಿ ತೋಟದ, ಮಲ್ಲೇಶ ಉಪ್ಪಾರ ಮತ್ತಿತರರು ದೆಹಲಿಗೆ ತೆರಳಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts