More

    ನಾಯಕಿ ಸ್ಮತಿ ಮಂದನಾ ಹೋರಾಟ ವ್ಯರ್ಥ: ಆರ್‌ಸಿಬಿಗೆ ತವರಿನಲ್ಲಿ ಮೊದಲ ಸೋಲು

    ಬೆಂಗಳೂರು: ನಾಯಕಿ ಸ್ಮತಿ ಮಂದನಾ (74 ರನ್, 43 ಎಸೆತ, 10 ಬೌಂಡರಿ, 3 ಸಿಕ್ಸರ್) ಬಿರುಸಿನ ಬ್ಯಾಟಿಂಗ್ ಹೊರತಾಗಿಯೂ ಆತಿಥೇಯ ಆರ್‌ಸಿಬಿ ತಂಡ ವುಮೆನ್ಸ್ ಪ್ರೀಮಿಯರ್ ಲೀಗ್ (ಡಬ್ಲುೃ ಪಿಎಲ್) ಎರಡನೇ ಆವೃತ್ತಿಯಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಎದುರು 25 ರನ್‌ಗಳಿಂದ ಪರಾಭವಗೊಂಡಿದೆ. ಸತತ 2ನೇ ಗೆಲುವು ದಾಖಲಿಸಿದ ಡೆಲ್ಲಿ ಕ್ಯಾಪಿಟಲ್ಸ್ ಅಂಕಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಿದೆ.

    ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಗುರುವಾರ ನಡೆದ ಪಂದ್ಯದಲ್ಲಿ ಟಾಸ್ ಸೋತು ಬ್ಯಾಟಿಂಗ್ ಇಳಿದ ಡೆಲ್ಲಿ ತಂಡ, ಶೆಾಲಿ ವರ್ಮ (50 ರನ್, 31 ಎಸೆತ, 3 ಬೌಂಡರಿ, 4 ಸಿಕ್ಸರ್) ಹಾಗೂ ಆಲಿಸ್ ಕ್ಯಾಪ್ಸಿ (46) ಜತೆಯಾಟದ ಬಲದಿಂದ 5 ವಿಕೆಟ್‌ಗೆ 194 ರನ್ ಕಲೆಹಾಕಿತು. ಪ್ರತಿಯಾಗಿ ಆರ್‌ಸಿಬಿ 9 ವಿಕೆಟ್‌ಗೆ 169 ರನ್‌ಗಳಿಸಲಷ್ಟೇ ಶಕ್ತವಾಯಿತು. ಅನಾರೋಗ್ಯದಿಂದಾಗಿ ಆಲ್ರೌಂಡರ್ ಎಲ್ಲಿಸ್ ಪೆರ‌್ರಿ ಪಂದ್ಯದಿಂದ ಹೊರಗುಳಿದರು.

    ಡೆಲ್ಲಿ ಕ್ಯಾಪಿಟಲ್ಸ್: 5 ವಿಕೆಟ್‌ಗೆ 194 (ಲ್ಯಾನಿಂಗ್ 11, ಶೆಾಲಿ 50, ಕ್ಯಾಪ್ಸಿ 46, ಮಾರಿಜಾನ್ನೆ ಕಾಪ್ 32, ಜೆಸ್ ಜೋನಾಸೆನ್ 36*, ಆರುಂಧತಿ 10*, ಡಿವೈನ್ 23ಕ್ಕೆ 2, ಡಿಕ್ಲರ್ಕ್ 35ಕ್ಕೆ 2). ಆರ್‌ಸಿಬಿ: 9 ವಿಕೆಟ್‌ಗೆ 169 (ಸ್ಮತಿ 74, ಡಿವೈನ್ 23, ಮೇಘನಾ 36, ರಿಚಾ 19, ವಾರೆಹ್ಯಾಂ 6, ಡಿಕ್ಲರ್ಕ್ ಸಿಮ್ರಾನ್ 2, ಶ್ರೇಯಾಂಕಾ ಮಾರಿಜಾನ್ನೆ ಕಾಪ್ 35ಕ್ಕೆ 2, ಜೆಸ್ ಜೋನಾಸೆನ್ 20ಕ್ಕೆ 2, ಆರುಂಧತಿ 38ಕ್ಕೆ 2).

    ಸ್ಮತಿ ಹೋರಾಟ ವ್ಯರ್ಥ: ಕಠಿಣ ಗುರಿ ಚೇಸಿಂಗ್‌ಗೆ ಇಳಿದ ಸ್ಮತಿ ಹಾಗೂ ಸೋಫಿ ಡಿವೈನ್ (23) ಜೋಡಿ ಭರ್ಜರಿ ಆರಂಭ ಒದಗಿಸಿತು. ಇವರಿಬ್ಬರು ಮೊದಲ ವಿಕೆಟ್‌ಗೆ 51 ಎಸೆತಗಳಲ್ಲಿ 71 ರನ್ ಕಸಿದರು. ಇದರಲ್ಲಿ ಸ್ಮತಿ ಏಕಾಂಗಿಯಾಗಿ 53 ರನ್‌ಗಳಿಸಿದರು. ಆರಂಭದಿಂದಲೂ ಬಿರುಸಿನ ಬ್ಯಾಟಿಂಗ್ ನಡೆಸಿದ ಸ್ಮತಿ 32 ಎಸೆತಗಳಲ್ಲಿ ಡಬ್ಲುೃಪಿಎಲ್‌ನ ಚೊಚ್ಚಲ ಅರ್ಧಶತಕ ಪೂರೈಸಿದರು. 2ನೇ ವಿಕೆಟ್‌ಗೆ ಎಸ್.ಮೇಘನಾ (36) ಜತೆಗೂಡಿ 21 ಎಸೆತಗಳಲ್ಲಿ 35 ರನ್‌ಗಳಿಸಿ ಚೇಸಿಂಗ್‌ಗೆ ಬಲ ತುಂಬಿದರು. 12ನೇ ಓವರ್‌ನಲ್ಲಿ ಸ್ಮತಿ ವಿಕೆಟ್ ಉರುಳಿದ ಬಳಿಕ ಆರ್‌ಸಿಬಿ ಜಯ ಆಸೆ ಕೈಚೆಲ್ಲಿತು. ನಂತರ ರಿಚಾ ೋಷ್ (19), ಜಾರ್ಜಿಯಾ ವಾರೆಹ್ಯಾಂ (6) ನಿರಾಸೆ ಮೂಡಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts