More

    ಪಂಜಾಬ್‌ಗೆ ‘ಸೂಪರ್’ ಸೋಲು; ಮಯಾಂಕ್ ಹೋರಾಟ ವ್ಯರ್ಥ

    ದುಬೈ: ಕನ್ನಡಿಗ ಮಯಾಂಕ್ ಅಗರ್ವಾಲ್ (89 ರನ್, 60 ರನ್, 7 ಬೌಂಡರಿ 4 ಸಿಕ್ಸರ್) ಏಕಾಂಗಿ ಹೋರಾಟದ ನಡುವೆಯೂ ಗೆಲುವಿನಂಚಿನಲ್ಲಿ ಎಡವಿದ ಕಿಂಗ್ಸ್ ಇಲೆವೆನ್ ಪಂಜಾಬ್ ತಂಡ ಐಪಿಎಲ್-13ರ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಸೂಪರ್ ಓವರ್‌ನಲ್ಲಿ ಸೋಲನುಭವಿಸಿತು. ದುಬೈ ಅಂತಾರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂನಲ್ಲಿ ಭಾನುವಾರ ನಡೆದ ಪಂದ್ಯದಲ್ಲಿ ನಿಗದಿತ 20 ಓವರ್‌ಗಳಲ್ಲಿ ಉಭಯ ತಂಡಗಳು ಸಮಬಲ ಸಾಧಿಸಿದ ಹಿನ್ನೆಲೆಯಲ್ಲಿ ಲಿತಾಂಶ ನಿರ್ಣಾಯಕ್ಕಾಗಿ ಸೂಪರ್ ಓವರ್ ಮೊರೆ ಹೋಗಲಾಯಿತು. ಪಂಜಾಬ್ ತಂಡ ಕೇವಲ 2 ರನ್ ಪೇರಿಸಲಷ್ಟೇ ಶಕ್ತವಾದರೆ, ಡೆಲ್ಲಿ ಕ್ಯಾಪಿಟಲ್ಸ್ ತಂಡ 2 ಎಸೆತಗಳಲ್ಲೇ 3 ರನ್ ಗಳಿಸಿ ಗೆಲುವಿನ ನಗೆ ಬೀರಿತು. ಇದರೊಂದಿಗೆ ಪಂಜಾಬ್ ತಂಡ ಯುಎಇಯಲ್ಲಿ ಮೊದಲ ಸೋಲು ಕಂಡಿತು. 2014ರಲ್ಲಿ ಆಡಿದ ಐದು ಪಂದ್ಯಗಳಲ್ಲೂ ಪಂಜಾಬ್ ಜಯ ದಾಖಲಿಸಿತ್ತು.

    ಟಾಸ್ ಸೋತು ಮೊದಲು ಬ್ಯಾಟಿಂಗ್‌ಗೆ ಇಳಿದ ಡೆಲ್ಲಿ ತಂಡ 8 ವಿಕೆಟ್‌ಗೆ 157 ರನ್ ಗಳಿಸಿದರೆ, ಪ್ರತಿಯಾಗಿ ಪಂಜಾಬ್ ತಂಡ ಕೂಡ 8 ವಿಕೆಟ್‌ಗೆ 157 ರನ್‌ಗಳಿಸಿ ಟೈ ಕಂಡಿತು.

    ಮಯಾಂಕ್ ಏಕಾಂಗಿ ಹೋರಾಟ
    ಡೆಲ್ಲಿ ನೀಡಿದ ಸ್ಪರ್ಧಾತ್ಮಕ ಮೊತ್ತ ಬೆನ್ನಟ್ಟಿದ ಪಂಜಾಬ್ ತಂಡದ ಪರ ಕನ್ನಡಿಗ ಮಯಾಂಕ್ ಅಗರ್ವಾಲ್ ಏಕಾಂಗಿ ಹೋರಾಟ ನಡೆಸಿದರು. ಅಗ್ರ ಕ್ರಮಾಂಕದ ದಿಢೀರ್ ಕುಸಿತದ ನಡುವೆಯೂ ಮಯಾಂಕ್ ಅಗರ್ವಾಲ್ ಗೆಲುವಿಗಾಗಿ ಹೋರಾಡಿದರು. ಇನಿಂಗ್ಸ್ ಆರಂಭಿಸಿದ ಕನ್ನಡಿಗರಾದ ಕೆಎಲ್ ರಾಹುಲ್ (21), ಕರುಣ್ ನಾಯರ್ (1) ಹಾಗೂ ನಿಕೋಲಸ್ ಪೂರನ್ (0), ಗ್ಲೆನ್ ಮ್ಯಾಕ್ಸ್‌ವೆಲ್ (1) ವಿಲರಾದರು. ಇದರಿಂದ 35 ರನ್‌ಗಳಿಗೆ ಪಂಜಾಬ್ 4 ವಿಕೆಟ್ ಕಳೆದುಕೊಂಡಿತು. 5ನೇ ವಿಕೆಟ್‌ಗೆ ರ್ಸ್ರಾಜ್ 20 ರನ್ ಪೇರಿಸಿ ನಿರ್ಗಮಿಸಿದರು. ಬಳಿಕ ಮಯಾಂಕ್ ಜತೆಯಾದ ಮತ್ತೋರ್ವ ಕನ್ನಡಿಗ ಕೆ.ಗೌತಮ್ (20ರನ್, 14 ಎಸೆತ, 1 ಬೌಂಡರಿ, 1 ಸಿಕ್ಸರ್) ಕೆಲಕಾಲ ಪ್ರತಿಹೋರಾಟ ನಡೆಸಿದರು. ಮಯಾಂಕ್-ಗೌತಮ್ ಜೋಡಿ 6ನೇ ವಿಕೆಟ್‌ಗೆ ಬಿರುಸಿನ 46 ರನ್ ಜತೆಯಾಟವಾಡಿತು. ಬಳಿಕ ಜೋರ್ಡನ್‌ರಿಂದ ಅಗತ್ಯ ಸಾಥ್ ಪಡೆದ ಮಯಾಂಕ್ ಅಗರ್ವಾಲ್ ಮತ್ತೊಂದು ತುದಿಯಲ್ಲಿ ಸ್ಫೋಟಕ ಬ್ಯಾಟಿಂಗ್ ಮುಂದುವರಿಸಿದರು. ಕೊನೇ ಓವರ್‌ನಲ್ಲಿ ದೊಡ್ಡ ಹೊಡೆತಕ್ಕೆ ಮುಂದಾದ ಮಯಾಂಕ್ ಬೌಂಡರಿ ಲೈನ್‌ನಲ್ಲಿದ್ದ ಹೆಟ್ಮೆಯೆರ್‌ಗೆ ಕ್ಯಾಚ್ ನೀಡಿದರು. ಕೊನೇ ಎಸೆತದಲ್ಲಿ 1 ರನ್ ಬೇಕಾಗಿದ್ದಾಗ ಜೋರ್ಡನ್ ಕೂಡ ಔಟಾದರು.

    ಐಪಿಎಲ್ ಮೊದಲ ಪಂದ್ಯದಲ್ಲೇ ವಿಶೇಷ ದಾಖಲೆ ಬರೆದ ಧೋನಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts