More

    ವಿಷವಾದ ಗಾಳಿ: ದೆಹಲಿಗೆ ಇತರೆ ರಾಜ್ಯಗಳ ಆ್ಯಪ್​ ಆಧಾರಿತ ಟ್ಯಾಕ್ಸಿಗಳ ಪ್ರವೇಶ ಬ್ಯಾನ್​!

    ನವದೆಹಲಿ: ರಾಷ್ಟ್ರ ರಾಜಧಾನಿಯಲ್ಲಿ ಗಾಳಿಯ ಗುಣಮಟ್ಟ ತೀವ್ರವಾಗಿ ಕುಸಿದಿರುವ ಹಿನ್ನೆಲೆಯಲ್ಲಿ ಇತರೆ ರಾಜ್ಯಗಳ ಆ್ಯಪ್​ ಆಧಾರಿತ ಟ್ಯಾಕ್ಸಿಗಳಿಗೆ ದೆಹಲಿ ಪ್ರವೇಶವನ್ನು ನಿರ್ಬಂಧಿಸಲಾಗಿದೆ. ವಾಯುಮಾಲಿನ್ಯವನ್ನು ತಡೆಗಟ್ಟುವಂತೆ ಸುಪ್ರೀಂ ಕೋರ್ಟ್​ ನಿನ್ನೆ (ನ.07) ಸೂಚನೆ ನೀಡಿದ ಬೆನ್ನಲ್ಲೇ ದೆಹಲಿಯ ಸಾರಿಗೆ ಸಚಿವ ಗೋಪಾಲ್​ ರೈ ಅವರು ಈ ಕ್ರಮ ಕೈಗೊಂಡಿದ್ದಾರೆ.

    ಇದಿಷ್ಟೇ ಅಲ್ಲದೆ, ದೀಪಾವಳಿಯ ಬಳಿಕ ವಾಹನ ಓಡಾಟಕ್ಕೆ ಬೆಸ-ಸಮ ಸಂಖ್ಯೆಯ ವಿಧಾನದ ಪರಿಣಾಮಕಾರಿತ್ವದ ಕುರಿತು ದೆಹಲಿ ಸರ್ಕಾರವು ನ್ಯಾಯಾಲಯದ ಮುಂದೆ ಎರಡು ಅಧ್ಯಯನಗಳನ್ನು ಪ್ರಸ್ತುತಪಡಿಸಲಿದೆ ಎಂದು ಸಾರಿಗೆ ಸಚಿವರು ಎಕ್ಷ್​ ಖಾತೆಯಲ್ಲಿ ಪೋಸ್ಟ್ ಮಾಡಿರುವ ವಿಡಿಯೋ ಹೇಳಿಕೆಯಲ್ಲಿ ತಿಳಿಸಿದ್ದಾರೆ. ಈ ಎರಡು ಅಧ್ಯಯನಗಳಲ್ಲಿ ಅಮೆರಿಕದ ಹಾರ್ವರ್ಡ್ ಮತ್ತು ಚಿಕಾಗೊ ಸ್ಟೇಟ್ ಯೂನಿವರ್ಸಿಟಿಯ ಜಂಟಿ ಅಧ್ಯಯನ ಮತ್ತು ದೆಹಲಿ ತಾಂತ್ರಿಕ ವಿಶ್ವವಿದ್ಯಾಲಯದ ಅಧ್ಯಯನವೂ ಸೇರಿವೆ.

    ನಿನ್ನೆ ನಡೆದ ವಿಚಾರಣೆ ವೇಳೆ ಸುಪ್ರೀಂ ಕೋರ್ಟ್ ವಾಹನ ಓಡಾಟಕ್ಕೆ ಬೆಸ-ಸಮ ಸಂಖ್ಯೆ ವಿಧಾನವೂ ಶಾಶ್ವತ ಪರಿಹಾರವಲ್ಲ ಎಂದು ಅಭಿಪ್ರಾಯಪಟ್ಟಿತು. ದೆಹಲಿ ನೋಂದಣಿ ಹೊಂದಿರುವ ರಸ್ತೆಗಳಲ್ಲಿ ಕ್ಯಾಬ್‌ಗಳನ್ನು ಅನುಮತಿಸುವುದನ್ನು ಪರಿಗಣಿಸುವಂತೆ ಸರ್ಕಾರಕ್ಕೆ ಸೂಚನೆ ನೀಡಿತು. ವಿವಿಧ ರಾಜ್ಯಗಳ ನೋಂದಣಿ ಹೊಂದಿರುವ ಆ್ಯಪ್ ಆಧಾರಿತ ಟ್ಯಾಕ್ಸಿಗಳು ದೆಹಲಿಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿವೆ ಎಂಬುದನ್ನು ನಾವು ಗಮನಿಸಬಹುದು. ನಾವು ರಸ್ತೆಗಳನ್ನು ನೋಡಿದಾಗ ಪ್ರತಿಯೊಂದು ಟ್ಯಾಕ್ಸಿಯು ಒಬ್ಬ ಪ್ರಯಾಣಿಕನನ್ನು ಮಾತ್ರ ಹೊತ್ತೊಯ್ಯುತ್ತಿದೆ ಎಂದು ನ್ಯಾಯಾಲಯವು ಹೇಳಿದ್ದು, ಮಾಲಿನ್ಯವನ್ನು ನಿಯಂತ್ರಿಸುವ ಹೆಚ್ಚುವರಿ ಹೆಜ್ಜೆಯಾಗಿ ಇದನ್ನು ನಿಲ್ಲಿಸಬಹುದೇ ಎಂದು ರಾಜ್ಯವನ್ನು ಕೇಳಿತು.

    ಈಗಾಗಲೇ ಘೋಷಣೆ ಮಾಡಿರುವ ಬೆಸ-ಸಮ ಸಂಖ್ಯೆ ವಿಧಾನವನ್ನು ಟೀಕಿಸಿದ ನ್ಯಾಯಾಲಯ, ಅಂತಹ ಕ್ರಮವನ್ನು ಬೆಂಬಲಿಸಲು ಯಾವುದೇ ಅಧ್ಯಯನವಿದೆಯೇ ಎಂದು ಪ್ರಶ್ನಿಸಿತು. ಅಲ್ಲದೆ, ಈ ಪರಿಕಲ್ಪನೆ ಈ ಹಿಂದಿನ ವರ್ಷಗಳಲ್ಲಿ ಯಾವ ರೀತಿಯಲ್ಲಿ ಕೆಲಸ ಮಾಡಿದೆ ಎಂಬುದನ್ನು ಮೌಲ್ಯ ಮಾಪನ ಮಾಡುವಿರಾ? ಇಂತಹ ಯೋಜನೆಗಳು ಕೇವಲ ದೃಷ್ಟಿಕೋನವಷ್ಟೇ ಎಂದು ಹೆಚ್ಚುತ್ತಿರುವ ಮಾಲಿನ್ಯ ಕುರಿತ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿಗಳು ಹೇಳಿದರು.

    ನ್ಯಾಯಾಲಯವು ಬೆಸ-ಸಮ ಯೋಜನೆಯನ್ನು ಪರಿಶೀಲಿಸಿದ ನಂತರ ಯೋಜನೆಯನ್ನು ಜಾರಿಗೊಳಿಸಲಾಗುವುದು ಎಂದು ದೆಹಲಿ ಸರ್ಕಾರ ಹೇಳಿದೆ. ಸತತ ಐದು ದಿನಗಳಿಂದ ದಿಲ್ಲಿ ಗಾಳಿ ಗುಣಮಟ್ಟ ವ್ಯಾಪಕವಾಗಿ ಕುಸಿದಿದ್ದು, ಮಂಗಳವಾರ ಬೆಳಗ್ಗೆ ಮಾಲಿನ್ಯದ ಮಟ್ಟ ಅತ್ಯಂತ ಕಳಪೆ ಎಂದು ದಾಖಲಾಗಿದೆ. ಹರ್ಯಾಣ, ರಾಜಸ್ಥಾನ ಮತ್ತು ಉತ್ತರ ಪ್ರದೇಶದ ಹಲವು ನಗರಗಳಲ್ಲಿ ಗಾಳಿ ಗುಣಮಟ್ಟ ಅಪಾಯಕಾರಿ ಸ್ಥಿತಿಯಲ್ಲಿದ್ದು, ಘಾಜಿಯಾಬಾದ್ 338, ಗುರುಗ್ರಾಮ್ 364, ನೋಯ್ಡಾ 348, ಗ್ರೇಟರ್ ನೋಯ್ಡಾ 439 ಮತ್ತು ಫರಿದಾಬಾದ್ ನಲ್ಲಿ ಗುಣಮಟ್ಟ 382ರಷ್ಟು ದಾಖಲಾಗಿದೆ. ಗುಣಮಟ್ಟ ಅಂದಾಜು 60ರಷ್ಟಿದ್ದರೆ ಅದನ್ನು ಆರೋಗ್ಯಕರ ಎಂದು ಪರಿಗಣಿಸಲಾಗುತ್ತದೆ.

    ಸ್ಥಳೀಯ ಅಂಶಗಳೇ ಕಾರಣ
    ವಾಹನಗಳ ಕಾರ್ಬನ್ ಹೊರಸೂಸುವಿಕೆ ಸೇರಿ ಸ್ಥಳೀಯ ಅಂಶಗಳೇ ರಾಷ್ಟ್ರ ರಾಜಧಾನಿಯ ಗಾಳಿಯನ್ನು ವಿಷಪೂರಿತಗೊಳಿಸಿದೆ. ಕೇವಲ ಕೂಳೆ ಸುಡುವಿಕೆಯೊಂದೇ ಈ ಅಪಾಯಕ್ಕೆ ಕಾರಣವಲ್ಲ ಎಂದು ಅಧ್ಯಯನ ವರದಿಯೊಂದು ಹೇಳಿದೆ. ಸೆಂಟರ್ ಫಾರ್ ಸೈನ್ಸ್ ಆಂಡ್ ಎನ್ವಿರಾನ್​ವೆುಂಟ್​ನ ಕಾರ್ಯನಿರ್ವಾಹಕ ನಿರ್ದೇಶಕ ಅನುಮಿತಾ ರಾಯ್ಚೌಧರಿ ತಮ್ಮ ಇತ್ತೀಚಿನ ವರದಿಯಲ್ಲಿ ದೆಹಲಿ-ಎನ್​ಸಿಆರ್​ನಲ್ಲಿ ನವೆಂಬರ್ 2ರಂದು 2.5ರಷ್ಟಿದ್ದ ಪೃಥಕ್ಕಣ (ಪಿಎಂ ಲೆವೆಲ್) ಕೇವಲ 24 ಗಂಟೆಗಳಲ್ಲಿ ಶೇಕಡಾ 68ರಷ್ಟು ಏರಿಕೆ ಕಂಡಿದೆ. ಮಾಲಿನ್ಯದ ಮೂಲಗಳಲ್ಲಿ ವಾಹನಗಳು ಶೇಕಡಾ 50-60ರಷ್ಟು ಕೊಡುಗೆ ನೀಡುತ್ತವೆ ಎಂದು ತಿಳಿಸಿದ್ದಾರೆ. ವಾಹನಗಳು, ಉದ್ಯಮ, ವಿದ್ಯುತ್ ಸ್ಥಾವರಗಳು, ತ್ಯಾಜ್ಯ ಸುಡುವಿಕೆ, ಕಾಮಗಾರಿ ಮತ್ತು ಧೂಳಿನ ಮೂಲಗಳಿಂದ ಹೊರಸೂಸುವಿಕೆ ಕಡಿಮೆ ಮಾಡಲು ಸ್ಥಳೀಯವಾಗಿ ಮಹತ್ವದ ಕ್ರಮಗಳ ಅಗತ್ಯವಿದೆ. ಮೂಲಸೌಕರ್ಯ ವ್ಯವಸ್ಥೆಯಲ್ಲಿ ಭಾರಿ ಬದಲಾವಣೆಗಳಿದ್ದರಷ್ಟೇ ಗುರಿ ಸಾಧಿಸಬಹುದು ಎಂದು ವರದಿ ಹೇಳಿದೆ. (ಏಜೆನ್ಸೀಸ್​)

    ನೆದರ್ಲೆಂಡ್ಸ್​ ವಿರುದ್ಧ 160 ರನ್​ಗಳ ಗೆಲುವು: ಚಾಂಪಿಯನ್ಸ್ ಟ್ರೋಫಿ ಅರ್ಹತೆ ನಿರೀಕ್ಷೆ ಉಳಿಸಿಕೊಂಡ ಇಂಗ್ಲೆಂಡ್​

    ವಿಮಾನದಲ್ಲಿ ಮಹಿಳೆಯೊಂದಿಗೆ ಅಸಭ್ಯವಾಗಿ ವರ್ತಿಸಿದ ಟೆಕ್ಕಿ ಬಂಧನ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts