More

    ಭೂಪರಿವರ್ತನೆಗೆ ವಿಳಂಬ, ನೇಕಾರ ಫಲಾನುಭವಿಗಳ ಆಕ್ರೋಶ

    ಲಕ್ಷ್ಮೇಶ್ವರ: ಪಟ್ಟಣದ ಶಿಗ್ಲಿ ರಸ್ತೆ ಸಮೀಪ ನೇಕಾರರಿಗೆ ಮೀಸಲಾಗಿರುವ ಮೂರು ಎಕರೆ ಜಮೀನಿನಲ್ಲಿ ನಿವೇಶನಗಳ ಗುರುತು ಹಾಕುವಂತೆ ಆಗ್ರಹಿಸಿ ನೇಕಾರ ಸಮಾಜದ ಫಲಾನುಭವಿಗಳು ಮಂಗಳವಾರ ಪುರಸಭೆಗೆ ಆಗಮಿಸಿ ಅಧಿಕಾರಿಗಳೊಂದಿಗೆ ವಾಗ್ವಾದ ನಡೆಸಿದರು.

    ನಿವೇಶನ ರಚನೆ ಮಾಡುವಲ್ಲಿ ಪುರಸಭೆಯವರು ವಿಳಂಬ ಧೋರಣೆ ಅನುರಿಸುತ್ತಿದ್ದಾರೆ. ಈ ಕಾರ್ಯ ತ್ವರಿತವಾಗಿ ಮಾಡದಿದ್ದಲ್ಲಿ ಪುರಸಭೆ ಎದುರು ಸಾಮೂಹಿಕವಾಗಿ ಆತ್ಮಹತ್ಯೆ ಮಾಡಿಕೊಳ್ಳುವುದಾಗಿಎಚ್ಚರಿಕೆ ನೀಡಿದರು.

    ನೇಕಾರರ ಸಮಾಜದ ಮುಖಂಡ ಈರಣ್ಣ ರೋಣದ ಮತನಾಡಿ, 23 ವರ್ಷಗಳ ಹಿಂದೆ ನೇಕಾರ ಸಮಾಜದವರು ಪುರಸಭೆ ವ್ಯಾಪ್ತಿಯ ಶಿಗ್ಲಿ ರಸ್ತೆಯಲ್ಲಿ 3 ಎಕರೆ ಜಮೀನನ್ನು ನಿವೇಶನಕ್ಕಾಗಿ ಖರೀದಿಸಿದ್ದೇವೆ. ಆದರೆ ಇದುವರೆಗೂ ಪುರಸಭೆಯವರು ಭೂಪರಿವರ್ತನೆ ಮಾಡಿಕೊಟ್ಟಿಲ್ಲ. ಸಮಾಜದ ನಿವೇಶನರಹಿತ 73 ಆಶ್ರಯ ಫಲಾನುಭವಿಗಳಿಗೆ ನಿವೇಶನ ಗುರುತಿಸಿ, ಅಭಿವೃದ್ಧಿಪಡಿಸುವಂತೆ ಶಾಸಕರು, ಜಿಲ್ಲಾಧಿಕಾರಿ, ಉಪವಿಭಾಗಾಧಿಕಾರಿ, ಪುರಸಭೆಯ ಗಮನಕ್ಕೂ ತಂದಿದ್ದರೂ ಯಾರೂ ಗಮನಹರಿಸಿಲ್ಲ. ಅಧಿಕಾರಿಗಳು ಸಬೂಬು ಹೇಳುತ್ತಾ ಎರಡು ದಶಕ ಕಳೆದಿದ್ದಾರೆ ಎಂದು ಆಪಾದಿಸಿದರು.

    ಅಕ್ಕಮ್ಮ ಕಣವಿ ಮಾತನಾಡಿ, ನಾವೇ ಖರೀದಿಸಿದ ಜಮೀನಿನ ಭೂಪರಿವರ್ತನೆ ಮಾಡಿ ಗುರುತು ಕಲ್ಲು ಹಾಕಿಕೊಡುವುದಕ್ಕೂ 23 ವರ್ಷ ಕಾಯಬೇಕಾದ ಸ್ಥಿತಿಗೆ ಅಧಿಕಾರಿಗಳ ನಿಷ್ಕಾಳಜಿಯೇ ಕಾರಣ. ಇದರಿಂದ ನೇಕಾರ ಕುಟುಂಬಗಳು ಸಾಮೂಹಿಕವಾಗಿ ಆತ್ಮಹತ್ಯೆ ಮಾಡಿಕೊಳ್ಳಬೇಕಾಗಿದೆ ಎಂದು ಹೇಳಿದರು.
    ಮನವಿ ಸ್ವೀಕರಿಸಿದ ಪುರಸಭೆ ವ್ಯವಸ್ಥಾಪಕಿ ಮಂಜುಳಾ ಹೂಗಾರ ಮಾಹಿತಿ ನೀಡಿ, ನಿವೇಶನ ಗುರುತಿಸಿ, ಕಲ್ಲುಗಳನ್ನು ಹಾಕಿಕೊಡಲು ಟೆಂಡರ್ ಕರೆಯಲಾಗಿದೆ ಎಂದು ಹೇಳಿದರು. ನೇಕಾರರಾದ ಸಿ.ಎನ್. ಅಗಡಿ, ಈಶ್ವರ ರೋಣದ, ರಾಜಪ್ಪ ಕಣವಿ, ಗೌರಮ್ಮ ಜಾಲಿಹಾಳ, ದತ್ತಾತ್ರೇಯ ಸಂತೂಬಾಳ, ಗಂಗಮ್ಮ ಬುರಡಿ, ಪ್ರೇಮವ್ವ ಹರಪನಹಳ್ಳಿ, ಚನ್ನವ್ವ ಕೊಂಗಿ, ಶಿವಾನಂದ ಹರಪನಹಳ್ಳಿ, ಬಾಲಕೃಷ್ಣ ಚೌಧರಿ, ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts